ಟಿಕೇಟ್ ವಂಚಿತ ಎನ್.ವೈ. ಗೋಪಾಲಕೃಷ್ಣರಿಗೆ ತ್ರಿಶಂಕು ಸ್ಥಿತಿ!

Posted By: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಏಪ್ರಿಲ್ 16 :ಎನ್.ವೈ. ಗೋಪಾಲಕೃಷ್ಣ ಅವರು ಸೋಲಿಲ್ಲದ ಸರದಾರ. ಆದರೆ, 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷದ ಎಸ್. ತಿಪ್ಪೇಸ್ವಾಮಿ ಅವರಿಂದ ಹೀನಾಯವಾಗಿ ಸೋಲು ಕಂಡರು.

ಡೆಪ್ಯುಟಿ ಸ್ಪೀಕರ್ ಆಗಿದ್ದ ಗೋಪಾಲಕೃಷ್ಣ ಅವರಿಗೆ ರಾಜಕೀಯ ಪುನರುತ್ಥಾನ ಕಲ್ಪಿಸಿದ್ದು ಬಳ್ಳಾರಿ ಗ್ರಾಮೀಣ ಕ್ಷೇತ್ರ. ಆದರೆ, ಬಳ್ಳಾರಿಯ ಮೋಕಾಕ್ಕೆ ಬಂದಿದ್ದು ತಪ್ಪೇ? ಎನ್ನುವಂತಾಗಿದೆ ಅವರ ಸ್ಥಿತಿ. ಅಕ್ಷರಶಃ ತ್ರಿಶಂಕು ಸ್ಥಿತಿ.

ಎನ್‌.ವೈ.ಗೋಪಾಲಕೃಷ್ಣ 'ಕೈ' ತಪ್ಪಲಿದೆ ಬಳ್ಳಾರಿ ಟಿಕೆಟ್!

ಹೌದು, 2018 ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೇಟ್ ನಿರಾಕರಿಸಲಾಗಿದೆ. ಅತ್ತ ಸ್ವಕ್ಷೇತ್ರ ಮೊಳಕಾಲ್ಮೂರು ಇಲ್ಲದೇ, ಪರಕ್ಷೇತ್ರ ಬಳ್ಳಾರಿ ಗ್ರಾಮೀಣವೂ ಇಲ್ಲದೇ ತ್ರಿಶಂಕು ಸ್ಥಿತಿ ತಲುಪಿದ್ದಾರೆ. ಅಂದು, ಸಿಎಂ ಮಾತು ಕೇಳಿ ಬಳ್ಳಾರಿ ಗ್ರಾಮೀಣಕ್ಕೆ ಬಂದಿದ್ದ ಎನ್.ವೈ. ಗೋಪಾಲಕೃಷ್ಣ, ಇಂದು ಅದೇ ಸಿಎಂರಿಂದ ಟಿಕೇಟ್ ವಂಚಿತರು.

MLA N.Y.Gopalakrishna missed party ticket

ಬಿ. ಶ್ರೀರಾಮುಲು ಸಂಸತ್ತಿಗೆ ಸ್ಪರ್ಧಿಸಿದಾಗ, ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಬ್ಲೂ ಐ ಕ್ಯಾಂಡಿಡೇಟ್ ಆಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ಕಾಂಗ್ರೆಸ್ ಮುಖಂಡರ ಗಮನ ಸೆಳೆದು, ಗೆಲುವು ಸಾಧಿಸಿದ್ದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಆದರೆ ಚಿತ್ರದುರ್ಗ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಂಸದ ಶ್ರೀರಾಮುಲು ವಿರುದ್ಧ ಯೂತ್ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದ ಡಾ. ಬಿ. ಯೋಗೀಶ್ ಬಾಬು ಅವರಿಗೆ ಈಗ ಟಿಕೆಟ್ ನೀಡಲಾಗಿದೆ.
ಎನ್.ವೈ. ಗೋಪಾಲಕೃಷ್ಣ ಅವರ ಅಣ್ಣ, ಮಾಜಿ ಸಂಸದ, ನಿವೃತ್ತ ನ್ಯಾಯಮೂರ್ತಿ ಎನ್ ವೈ ಹನುಮಂತಪ್ಪ ಸೋನಿಯಾ ಗಾಂಧಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bellari Rural assembly constituency Congress MLA N.Y.Gopalakrishna missed party ticket in Karnataka assembly elections 2018.Dr. B. Yogish Babu will contest form BellarI Rural.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ