ರಸ್ತೆಗೆ ಇಳಿದು ಸಮಾವೇಶಕ್ಕೆ ಜನ ಕಳಿಸುತ್ತಿರುವ ಸಚಿವ ಸಂತೋಷ್ ಲಾಡ್

By: ಜಿ.ಎಂ.ರೋಹಿಣಿ, ಬಳ್ಳಾರಿ
Subscribe to Oneindia Kannada

ಬಳ್ಳಾರಿ, ಫೆಬ್ರವರಿ 10 : ಕಾಂಗ್ರೆಸ್ ನ ಜನಾಶೀರ್ವಾದ ಸಮಾವೇಶದಲ್ಲಿ ಪಾಲ್ಗೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೊಸಪೇಟೆಗೆ ಬಂದಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದ ಎಲ್ಲ ಪ್ರಮುಖ ಸಚಿವರು, ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಪಕ್ಷಕ್ಕೆ ಶಕ್ತಿ ಪ್ರದರ್ಶನ ಮಾಡಬೇಕಾಗಿರುವುದು ಅನಿವಾರ್ಯ ಆಗಿದೆ.

ಜನಾಶಿರ್ವಾದ ಸಭೆಗೆ ಜನಸಾಗರ ಹರಿದು ಬರುತ್ತಿದ್ದು, ಸಚಿವ ಸಂತೋಷ್ ಲಾಡ್ ಸ್ವತಃ ರಸ್ತೆಗೆ ರಸ್ತೆಗೆ ಇಳಿದು, ಜನರನ್ನು ಸಮಾವೇಶದ ಸ್ಥಳಕ್ಕೆ ಕಳುಹಿಸುತ್ತಿದ್ದಾರೆ. ಇನ್ನು ವೇದಿಕೆ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಆದರೆ ಸಚಿವರೊಬ್ಬರು ಹೀಗೆ ರಸ್ತೆಯಲ್ಲಿ ನಿಂತು ಜನರನ್ನು ಸಭೆಯ ಕಾರ್ಯಕ್ರಮಕ್ಕೆ ಕಳಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

LIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ

Minister Santhosh Lad sent people to Congress rally

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಆ ಸಮಾವೇಶದಲ್ಲಿ ನಾಲ್ಕು ಲಕ್ಷ ಮಂದಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದ ಯಶಸ್ಸು ಮೀರಿಸುವಂತೆ ಜನರನ್ನು ಸೇರಿಸುವ ಸವಾಲು ಈಗ ಕಾಂಗ್ರೆಸ್ ಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minister Santhosh Lad sent people who are in road to Congress rally in Hospet. Congress Janashirvada rally on Saturday in Hospet, AICC president Rahul Gandhi participating in rally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ