ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ : ಎಟಿಎಂನಲ್ಲಿ 500 ರೂ. ನೋಟಿನ ಬದಲು ಕಾಗದ ಬಂತು!

By ನಮ್ಮ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಅಕ್ಟೋಬರ್ 15 : ಎಟಿಎಂನಲ್ಲಿ ಹಣ ಪಡೆಯಲು ಹೋದ ಗ್ರಾಹಕರೊಬ್ಬರು ಹಣದ ಜೊತೆ ಕಾಗದ ಬಂದಿದ್ದು ನೋಡಿ ಗಾಬರಿ ಆಗಿದ್ದಾರೆ. 500 ರೂ. ನೋಟುಗಳ ಜೊತೆ ಪೇಪರ್ ಬಂದಿರುವ ಘಟನೆ ಬಳ್ಳಾರಿ ಎಸ್‌ಬಿಎಂ ಎಟಿಎಂನಲ್ಲಿ ನಡೆದಿದೆ.

ಬಳ್ಳಾರಿ ನಗರದ ಮಾರುತಿ ಕಾಲೋನಿಯ ಎಸ್‌ಬಿಐ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಹಣದ ಬದಲು ಪೇಪರ್ ಬಂದಿದ್ದರಿಂದ ರಮೇಶ ಬಾಬು ಎಂಬ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ. ರಮೇಶ್ ಎಟಿಎಂನಿಂದ 8000 ಸಾವಿರ ರೂ. ಡ್ರಾ ಮಾಡಿದ್ದರು.

ಪ್ರಸಿದ್ಧಿ ಚಿಟ್ ಫಂಡ್ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರಪ್ರಸಿದ್ಧಿ ಚಿಟ್ ಫಂಡ್ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರ

money

ಆದರೆ, 7,500 ರೂ. ನೋಟು ಬಂದರೆ ಉಳಿದ 500 ರೂ. ಬದಲು ಖಾಲಿ ಪೇಪರ್ ಬಂದಿದೆ. ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ರಮೇಶ ಅವರು ಎಸ್‌ಬಿಐ ಬ್ಯಾಂಕ್‌ ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ. ಆದರೆ, ಐನೂರು ರೂ. ಬದಲು ಖಾಲಿ ಬಿಳಿ ಕಾಗದ ಬಂದಿದೆ.

ಈ ರೀತಿಯ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣು, ತನಿಖೆಈ ರೀತಿಯ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣು, ತನಿಖೆ

ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಸ್ಥಳಕ್ಕೆ ಅವರು ಬಂದಿಲ್ಲ ಎಂದು ರಮೇಶ ಅವರು ಆಕ್ರೋಶ ವ್ಯಕ್ತಪಡಿಸಿದರು.

English summary
Ballari based Ramesh received white paper instead of 500 Rs note at SBI ATM Ballari, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X