ಬಿಜೆಪಿಯ ಮುಖ್ಯಮಂತ್ರಿಗಳೇ ಇರುವ ಉ.ಪ್ರ, ಮ.ಪ್ರ ಹೇಗಿದೆ ನೋಡಿ: ಪರಂ

By: ಜಿ.ಎಂ.ರೋಹಿಣಿ, ಬಳ್ಳಾರಿ
Subscribe to Oneindia Kannada

ಬಳ್ಳಾರಿ, ಫೆಬ್ರವರಿ 10 : ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದಲ್ಲಿ ಹತ್ತು ಪರ್ಸೆಂಟ್ ಕಮಿಷನ್ ತೆಗೆದುಕೊಂಡು ಕೆಲಸಗಳನ್ನು ಮಾಡಲಾಗುತ್ತಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

ಹೊಸಪೇಟೆಯಲ್ಲಿ ಶನಿವಾರ ಕಾಂಗ್ರೆಸ್ ಜನಾಶೀರ್ವಾದ ಸಭೆಯಲ್ಲಿ ಮಾತನಾಡಿದ ಅವರು, ಹತ್ತು ಪರ್ಸೆಂಟ್ ತೆಗೆದುಕೊಂಡಿದ್ದು ಯಾರು ಅನ್ನೋದನ್ನು ನರೇಂದ್ರ ಮೋದಿ ಅವರು ಬಹಿರಂಗ ಮಾಡಬೇಕು. ಅತೀ ಹೆಚ್ಚು ಅಪರಾಧ ನಡೆಯುವ ರಾಜ್ಯಗಳು ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ. ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳು ಇದ್ದಾರೆ. ಅದನ್ನ ಮರೆತು ಕರ್ನಾಟಕದ ಜನರಿಗೆ ಸುಳ್ಳು ಹೇಳಿ, ಮರುಳು ಮಾಡುವ ಪ್ರಯತ್ನ ಮಾಡುತ್ತಿದ್ದೀರಾ ಎಂದರು.

LIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ

ಕರ್ನಾಟಕದಲ್ಲಿ ನಿಮ್ಮ ಬೇಳೆ ಬೇಯಲ್ಲ. ಮತ್ತೊಮ್ಮೆ ಜನರ ಬಳಿ ಹೋಗುತ್ತಿದ್ದೇವೆ. ರಣಕಹಳೆ ಊದುತ್ತಿದ್ದೇವೆ. ಉದ್ಯೋಗ ಕೊಡುವುದಾಗಿ ಹೇಳಿದ ಪ್ರಧಾನಿಗಳು ಈಗ ಪಕೋಡ ಮಾರಿ ಎನ್ನುತ್ತಾರೆ ಎಂದರು.

Look at UP, MP state crime rate, where BJP ruling: Parameshwar

In Pics : ಹೊಸಪೇಟೆಯಲ್ಲಿ ರಾಹುಲ್ ಜನಾಶೀರ್ವಾದ ಯಾತ್ರೆ

ಕರ್ನಾಟಕದಲ್ಲಿ ಅತಿ ಹೆಚ್ಚು ಅಪರಾಧಗಳು ನಡೆಯುತ್ತವೆ, ಅಪರಾಧಗಳ ರಾಜಧಾನಿ ಎಂದು ಕರೆಯುತ್ತಾರೆ. ಅತಿ ಹೆಚ್ಚು ಅಪರಾಧ ನಡೆಯುವುದು ಉತ್ತರ ಪ್ರದೇಶ - ಮಧ್ಯಪ್ರದೇಶದಲ್ಲಿ. ನಿಮ್ಮದೇ ರಾಜ್ಯಗಳ ಅಂಕಿ- ಅಂಶಗಳು ಇದನ್ನು ಹೇಳುತ್ತವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Look at UP, MP state crime rate, where BJP ruling, said KPCC president Parameshwar at Hospet Congress Janashirvada yatre on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ