ರೆಡ್ಡಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದದ್ದು ಏಕೆ?

Posted By:
Subscribe to Oneindia Kannada

ಬಳ್ಳಾರಿ, ಡಿಸೆಂಬರ್ 29 : ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ ನಡೆದಿದೆ. 54ಕ್ಕೂ ಅಧಿಕ ಅಧಿಕಾರಿಗಳು ರೆಡ್ಡಿ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬಳ್ಳಾರಿಯ ಲೋಕಾಯುಕ್ತ ಎಸ್ಪಿ ಸಂಪತ್ ಕುಮಾರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಬಳ್ಳಾರಿಯ ಸಿರಗುಪ್ಪ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿಯೂ ಎಸ್ಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಅಧಿಕಾರಿಗಳು ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ್ದಾರೆ. [ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು]

janardhana reddy

ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಂದು ದಾಳಿ ನಡೆಸಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಅವರು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದು, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. [ಬಳ್ಳಾರಿಗೆ ಹೋಗಲು ಅವಕಾಶ ಕೇಳಿದ್ದ ರೆಡ್ಡಿ ಅರ್ಜಿ ವಾಪಸ್]

2007 ರಿಂದ 20111ರ ತನಕ ಜನಾರ್ದನ ರೆಡ್ಡಿ ಅವರು 11 ಕಂಪನಿಗಳ ಮೂಲಕ 362.78 ಕೋಟಿ ಆಸ್ತಿ ಸಂಪಾದಿಸಿದ್ದಾರೆ. ಆದರೆ, ಈ ಕಂಪನಿಗಳು ನಕಲಿ ಕಂಪನಿಗಳಾಗಿದ್ದು, ಅಕ್ರಮ ಗಣಿಗಾರಿಕೆ ಮೂಲಕ ಬಂದ ಹಣವನ್ನು ಕಂಪನಿಗಳ ಆದಾಯ ಎಂದು ತೋರಿಸಲಾಗಿದೆ ಎಂಬುದು ಆರೋಪವಾಗಿದೆ.[ಧರ್ಮಸ್ಥಳದ ಮಂಜುನಾಥನಿಗೆ ನಮೋ ನಮಃ ಎಂದ ರೆಡ್ಡಿ]

ಟುಬ್ಲರಿ ಪಾಪರ್ಟಿ ಪ್ರೈ. ಲಿಮಿಟೆಡ್, ಪಾರಿಜಾತ ಅಪಾರ್ಟ್‌ಮೆಂಟ್ ಪ್ರೈ.ಲಿಮಿಟೆಡ್, ಶ್ರೀ ರಾಘವೇಂದ್ರ ಬ್ಯುಸಿನೆಸ್ ಲಿಮಿಡೆಡ್, ಎನೋಬಲ್ ಇಂಡಿಯಾ ಚಿಟ್‌ಫಂಡ್ ಪ್ರೈ. ಲಿಮಿಟೆಡ್ ಸೇರಿದಂತೆ 11 ಕಂಪನಿಗಳ ಮೂಲಕ ಆದಾಯ ಬಂದಿದೆ ಎಂದು ರೆಡ್ಡಿ ಹೇಳಿದ್ದಾರೆ. ಈ ಕಂಪನಿಗಳ ಬಗ್ಗೆ ಪರಿಶೀಲನೆ ನಡೆಸಲು ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Lokayukta police on Tuesday raided the house of former Minister and mining baron G.Janardhana Reddy's residence located on Siraguppa road in Ballari district. The team headed by lokayukta SP Sampath Kumar seized documents in house.
Please Wait while comments are loading...