ಹಂಪಿ ಉತ್ಸವದಲ್ಲಿ 'ಲೈಟ್ ಅಂಡ್ ಸೌಂಡ್' ಶೋ

Posted By: Prithviraj
Subscribe to Oneindia Kannada

ಬಳ್ಳಾರಿ, ಅಕ್ಟೋಬರ್, 12 : ಮುಂದಿನ ನವೆಂಬರ್ 3ರಿಂದ 5 ರವರೆಗೆ ಮೂರು ದಿನಗಳ ಕಾಲ ಹಂಪಿ ಉತ್ಸವದ ಭಾಗವಾಗಿ 'ಲೈಟ್ ಅಂಡ್ ಸೌಂಡ್ ಶೋ' ನಡೆಯಲಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ, ನೃತ್ಯ, ಸಂಗೀತ ಪ್ರಕಾರದ ಕಾರ್ಯಕ್ರಮಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.[ನವೆಂಬರ್‌ನಲ್ಲಿ ಹಂಪಿ ಉತ್ಸವ : ಸಂತೋಷ್ ಲಾಡ್]

ಎಂಟು ವರ್ಷಗಳ ನಂತರ ಈ ಶೋ ನಡೆಯುತ್ತಿದ್ದು, ಸಂಗೀತ ರಸಿಕರ ಸಂತಸವನ್ನು ಇಮ್ಮಡಿಗೊಳಿಸಲು ಸಜ್ಜಾಗಿದೆ. ಅಕ್ಟೋಬರ್ 7ರಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಶೋ ನಡೆಯುವ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಹಂಪಿ ಉತ್ಸವದಲ್ಲಿ 'ಲೈಟ್ ಅಂಡ್ ಸೌಂಡ್' ಶೋ

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರಶಾಖೆ ಸಚಿವಾಲಯದ ಸಂಗೀತ ಮತ್ತು ನೃತ್ಯವಿಭಾಗವು ಆಯೋಜಿಸುವ ಈ ಲೈಟ್ ಅಂಡ್ ಷೋ ಕಾರ್ಯಕ್ರಮವು 2008ರ ನಂತರ ಲೈಟ್ ಅಂಡ್ ಸೌಂಡ್ ಶೋ ಹಂಪಿ ಉತ್ಸವದಲ್ಲಿ ನಡೆದಿರಲಿಲ್ಲ.

ಈ ಶೋಗೆ 'ವಿಜಯನಗರ ವೈಭವ' ಎಂಬ ಹೆಸರನ್ನು ಇಡಲಾಗಿದ್ದು, ಸಂಜೆ 7ರಿಂದ 9ರವರೆಗೆ ಶೋ ನಡೆಯಲಿದೆ ಎಂದು ಇಲಾಖೆಯ ನೃತ್ಯ ಮತ್ತು ಸಂಗೀತ ವಿಭಾಗದ ಜಂಟಿ ಆಯುಕ್ತ ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.

ವೇದಿಕೆ ನಿರ್ಮಾಣದ ಕಾರ್ಯಗಳು ಅಕ್ಟೋಬರ್ 20ರಿಂದ ನಡೆಯಲಿವೆ, ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಹೆಚ್ಚು ಅವಕಾಶ ನೀಡಲಾಗುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A very populer cultural event 'Light and sound' show would be held as part of Hampi Utsav. from November 3 to 5, in Hampi
Please Wait while comments are loading...