ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಜೈ ಎಂದ ಮತದಾರ

By Ashwath
|
Google Oneindia Kannada News

ಬಳ್ಳಾರಿ, ಮೇ.16: ಅಂತಿಮ ಹಂತದಲ್ಲಿ ಬಿಜೆಪಿಯನ್ನು ಸೇರಿದ ಶ್ರೀರಾಮುಲು ಬಳ್ಳಾರಿಯಲ್ಲಿ ವಿಜಯದ ಪತಾಕೆಯನ್ನು ಹಾರಿಸಿದ್ದಾರೆ. ತನ್ನ ಸಮೀಪದ ಅಭ್ಯರ್ಥಿ‌ ಕಾಂಗ್ರೆಸ್‌ನ ಎನ್‌.ವೈ ಹನುಮಂತಪ್ಪರನ್ನು 85,144 ಮತಗಳ ಅಂತರದಿಂದ ಸೋಲಿಸಿ ಪ್ರಥಮ ಬಾರಿಗೆ ಸಂಸತ್‌ಗೆ ಆಯ್ಕೆಯಾಗಿದ್ದಾರೆ.

ಎನ್‌ವೈ ಹನುಮಂತಪ್ಪ ಪರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬಳ್ಳಾರಿಗೆ ಮತ ಪ್ರಚಾರಕ್ಕೆ ಬಂದಿದ್ದರೂ ಜನತೆ ಬಿಜೆಪಿಗೆ ಮತ ನೀಡಿದ್ದಾರೆ. ಈ ಮೂಲಕ ಎರಡನೇ ಬಾರಿ ಬಿಜೆಪಿಯನ್ನು ಬಳ್ಳಾರಿಯ ಜನತೆ ಕೈ ಹಿಡಿದಿದ್ದಾರೆ.

2009ರಲ್ಲಿ ಜನಾರ್ದನ ರೆಡ್ಡಿ ಸಹೋದರಿ ಜೆ. ಶಾಂತ ಬಳ್ಳಾರಿಯಿಂದ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಜೆ.ಶಾಂತಾ 4,02,213 ಮತಗಳನ್ನು ಪಡೆದಿದ್ದರೆ, ಎನ್‌.ವೈ ಹನುಮಂತಪ್ಪ 3,99,970 ಮತಗಳನ್ನು ಪಡೆದಿದ್ದರು. ಕೇವಲ 2,243 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಎನ್‌ವೈ ಹನುಮಂತಪ್ಪ ಈ ಬಾರಿ 85,144 ಮತಗಳ ಅಂತರದಿಂದ ಸೋತಿದ್ದಾರೆ.

ಬಳ್ಳಾರಿಯಲ್ಲಿ ಮೂರನೇ ಸ್ಥಾನವನ್ನು ಜೆಡಿಎಸ್‌ನ ಆರ್‌ ರವಿನಾಯಕ ಪಡೆದುಕೊಂಡಿದ್ದಾರೆ. ನೋಟಾಕ್ಕೆ 11320 ಮತಗಳು ಬಿದ್ದಿದೆ.

Bellary BJP candidate B. Sreeramulu win
ಬಳ್ಳಾರಿ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಬಿ.ಶ್ರೀರಾಮುಲು 1 ಬಿಜೆಪಿ 534406
ಎನ್.ವೈ ಹನುಮಂತಪ್ಪ
2 ಕಾಂಗ್ರೆಸ್ 449262
ಆರ್‌. ರವಿನಾಯಕ 3 ಜೆಡಿಎಸ್ 12613
ಎ.ದೇವ್‌ದಾಸ್‌ 4 ಎಸ್‌ಯುಸಿಐ 8486

.

English summary
BJP candidate, B. Sreeramulu- wins Bellary. He defeated N Y Hanumantappa Congress. B. Sreeramulu secured votes 5,34,406, while N Y Hanumantappa got 4,49,262.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X