ಸಿದ್ದು- ಖರ್ಗೆ ಫೈಟಲ್ಲಿ ಹಗರಿಬೊಮ್ಮನಹಳ್ಳೀಲಿ ಕಾಂಗ್ರೆಸ್ ಪೀಸ್ ಪೀಸ್

Posted By: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಹಗರಿಬೊಮ್ಮನಹಳ್ಳಿ (ಬಳ್ಳಾರಿ), ಏಪ್ರಿಲ್ 14: ಹಗರಿಬೊಮ್ಮನಹಳ್ಳಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಾರೆಂದು ಘೋಷಣೆ ಮಾಡುವಲ್ಲಿ ಪಕ್ಷದ ಹೈ ಕಮಾಂಡ್ ಗೆ ತಲೆನೋವಾಗಿದೆ.

ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆ ಆಗಿರುವ ಮಾಜಿ ಶಾಸಕ ಭೀಮಾನಾಯ್ಕ್ ಅವರಿಗೇ ಟಿಕೆಟ್ ಕೊಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಪಟ್ಟು ಹಿಡಿದಿದ್ದರೆ, ಸಾಮಾಜಿಕ ನ್ಯಾಯ ನೀತಿ ಅಡಿಯಲ್ಲಿ ಅಸ್ಪೃಶ್ಯ ವರ್ಗದ ದಲಿತರಿಗೇ ಟಿಕೆಟ್ ಕೊಡಿಸಲು ಮಲ್ಲಿಕಾರ್ಜುನ ಖರ್ಗೆ ಹಠ ತೊಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಖರ್ಗೆ ಬೇಡಿಕೆಗೆ ಕೆ.ಸಿ. ವೇಣುಗೋಪಾಲ್, ಮಧುಸೂಧನ್ ಮಿಸ್ತ್ರಿ ಸಂಪೂರ್ಣ ಬೆಂಬಲ ನೀಡಿದ್ದು, ಸಿದ್ಧರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿದೆ. ಮಾಜಿ ಶಾಸಕ ಸಿರಾಜ್ ಶೇಖ್ ಬೆಂಬಲ ಪಡೆದು ಕಾಂಗ್ರೆಸ್ ಟಿಕೆಟ್ ಗಾಗಿ ಹರಸಾಹಸ ಪಡುತ್ತಿರುವ ನಿವೃತ್ತ ಆರ್‍ಟಿಒ ಪರಮೇಶ್ವರಪ್ಪ ಹೊಸ ಮುಖವಾಗಿ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ.

Karnataka elections: Confusion in Hagaribommanahalli Congress ticket

ಹಗರಿಬೊಮ್ಮನಹಳ್ಳಿ ವಿಚಾರದಲ್ಲಿ ಸಿದ್ದು ಹಾಗೂ ಖರ್ಗೆ ಮುಖ ಮುರಿದುಕೊಳ್ಳುತ್ತಿದ್ದಾರೆ. ಹೂವಿನಹಡಗಲಿ ಪರಿಶಿಷ್ಟ ಜಾತು ಮೀಸಲು ಕ್ಷೇತ್ರದಲ್ಲಿ ಪಿ.ಟಿ. ಪರಮೇಶ್ವರನಾಯ್ಕ ಅವರಿಗೆ ಟಿಕೆಟ್ ಖಚಿತವಾಗಿದೆ. ಏಕೆಂದರೆ ಮತ್ತೊಮ್ಮ ಲಂಬಾಣಿ ಸಮುದಾಯಕ್ಕೆ ಟಿಕೆಟ್ ನೀಡಬಾರದು ಎನ್ನುವುದು ಎಲ್ಲರ ವಾದ. ಸಿದ್ದರಾಮಯ್ಯ ಮಾತ್ರ ಇದಕ್ಕೆ ಅಪವಾದ.

ಏಕೆಂದರೆ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಮಟ್ಟಿಗೆ ದೊಡ್ಡ ತಲೆ ನೋವಾಗಿದೆ. ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದ ಎಲ್. ಮಾರೆಣ್ಣ ಅವರಿಗೆ ಟಿಕೆಟ್ ನೀಡಬೇಕು, ಇಲ್ಲವಾದಲ್ಲಿ ಎಡ - ಬಲಗೈ ಪಂಗಡದ ದಲಿತರಿಗೇ ಟಿಕೇಟ್ ದೊರಕಿಸಬೇಕು ಎಂದು ಪಕ್ಷದ ಬಹುತೇಕ ಮುಖಂಡರು ತಮ್ಮ ತೀರ್ಮಾನ ತಿಳಿಸಿದ್ದಾರೆ.

ಏಕೆಂದರೆ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮಟ್ಟಿಗೆ ಕಾಂಗ್ರೆಸ್ ಒಡೆದ ಮನೆಯಾಗಿದೆ. ಒಂದೇ ಮನೆಗೆ ನಾಲ್ಕಾರು ಬಾಗಿಲುಗಳು ಬಂದಿವೆ. ದಿನಕ್ಕೊಬ್ಬ ಹೊಸ ಟಿಕೆಟ್ ಆಕಾಂಕ್ಷಿ ಹುಟ್ಟಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Elections 2018: There is a difference of opinion between Siddaramaiah and Mallikarjuna Kharge in ticket issue, confusion arising in Ballari district Hagaribommanahalli assembly constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ