ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಾದೇಶಿಕ ಪಕ್ಷಗಳಿಗೆ ಮತ ಹಾಕಿ: ಹೊತ್ತೂರು ಇಕ್ಬಾಲ್ ಅಹ್ಮದ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಏಪ್ರಿಲ್ 20 : ಗಣಿ ಉದ್ಯಮಿ ಹೊತ್ತೂರು ಇಕ್ಬಾಲ್ ಅಹ್ಮದ್ ಬಳ್ಳಾರಿ ನಗರ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ಸಕ್ರಿಯ ರಾಜಕಾರಣಕ್ಕೆ ತೀರ ಹೊಸಬರಾಗಿದ್ದರೂ ಕರ್ನಾಟಕ ರಾಜ್ಯದ ರಾಜಕೀಯ ಏಳುಬೀಳನ್ನು ಅತಿ ಸಮೀಪದಿಂದ ಕಂಡವರು.

ಎಎಪಿಯ ಪೃಥ್ವಿ ರೆಡ್ಡಿ, ದಾಸರಿ ನಾಮಪತ್ರ ಸಲ್ಲಿಕೆಗೆ ಡೊಳ್ಳು, ಕಂಸಾಳೆ ಮೆರವಣಿಗೆ ಎಎಪಿಯ ಪೃಥ್ವಿ ರೆಡ್ಡಿ, ದಾಸರಿ ನಾಮಪತ್ರ ಸಲ್ಲಿಕೆಗೆ ಡೊಳ್ಳು, ಕಂಸಾಳೆ ಮೆರವಣಿಗೆ

ಬೆಳಗ್ಗೆ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮಹಾನಗರ ಪಾಲಿಕೆ ಕಚೇರಿಗೆ ಪಾದಯಾತ್ರೆಯಲ್ಲಿ ಅಪಾರ ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಬಂದ ಅವರು, ನಾಮಪತ್ರ ಸಲ್ಲಿಸಿ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದು ಹೀಗೆ...

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ನಿಮ್ಮ ಪ್ರತಿಸ್ಪರ್ಧಿ ಯಾರು?
ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳು ನನ್ನ ಪ್ರತಿಸ್ಪರ್ಧಿಗಳೇ. ಕ್ಷೇತ್ರದಾದ್ಯಂತ ಪ್ರಚಾರ ನಡೆಸಿ, ಮತ ಕೇಳುತ್ತೇನೆ. ಸೋಲು - ಗೆಲುವು ಮತದಾರರನನ್ನು ಅವಲಂಬಿಸಿದೆ.

JDS candidate Hottur Iqbal Ahmed filed nomination

ನಗರದ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ನಾನು ಬಳ್ಳಾರಿಯವ. ಕ್ಷೇತ್ರದ ಅನೇಕ ಸಮಸ್ಯೆಗಳ ಅರಿವಿದೆ. ಅಧ್ಯಯನ ನಡೆಸಿದ್ದೇನೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಬಳ್ಳಾರಿ ನಗರಕ್ಕೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳು ಬಂದಿದ್ದರೂ ಸಮಸ್ಯೆಗಳು ಹಾಗೇ ಇವೆ.

ನಿಮಗೆ ಏತಕ್ಕಾಗಿ ಮತ ಹಾಕಬೇಕು?
ಪ್ರಾದೇಶಿಕ ಪಕ್ಷಗಳಿಗೆ ಮತದಾರರು ಮತ ನೀಡಿದಲ್ಲಿ ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ. ಜನಸೇವೆ ಮಾಡಲು ಮತದಾರರು ಮತ ಹಾಕಬೇಕಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ, ಉತ್ತಮ ಆಡಳಿತಕ್ಕಾಗಿ ನನಗೆ ಮತ ನೀಡಬೇಕಿದೆ.

JDS candidate Hottur Iqbal Ahmed filed nomination

ಕ್ಷೇತ್ರದ ಅಭಿವೃದ್ಧಿ ಕುರಿತು ನಿಮ್ಮ ಕನಸು ಏನಿದೆ?
ಕ್ಷೇತ್ರದ ಅಭಿವೃದ್ಧಿಗಾಗಿ ಸ್ಥಳೀಯ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಬಿಡುಗಡೆ ಮಾಡುವೆ. ಪ್ರಣಾಳಿಕೆಯಲ್ಲಿ ನನ್ನ ಕನಸಿನ ಅಭಿವೃದ್ಧಿ ಮತ್ತು ಯೋಜನೆಗಳನ್ನು ವಿವರಿಸಿದ್ದೇನೆ. ಕ್ಷೇತ್ರದ ಬಹುತೇಕ ಮತದಾರರನ್ನು ಭೇಟಿ ಮಾಡಿ, ಪ್ರಣಾಳಿಕೆಯನ್ನು ನೀಡಿ, ವಿವರಿಸುವೆ. ಜಾಗೃತ ಮತದಾರರು ನನ್ನೊಂದಿಗಿದ್ದಾರೆ.

English summary
Mine businessman, JDS candidate Hottur Iqbal Ahmed filed nomination in Bellary on Thursday. after that talked with media, Vote for regional parties.regional parties only improve constituency. Conscious voters are with me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X