ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಮಗಳ ಮದುವೆ ಒಟ್ಟು ಎಷ್ಟು ದಿನ?

By Ananthanag
|
Google Oneindia Kannada News

ಬಳ್ಳಾರಿ, ನವೆಂಬರ್ 8: ಕರ್ನಾಟಕದ ದುಬಾರಿ ಮದುವೆ ಎಂಬ ಕಾರಣಕ್ಕೆ ಲಗ್ನ ಪತ್ರಿಕೆಯಿಂದಲೇ ಜನರ ಮನಸ್ಸಿನಲ್ಲಿ ಆಶ್ಚರ್ಯ ಮೂಡಿಸಿದ್ದ ಜನಾರ್ದನ ರೆಡ್ಡಿ ಮಗಳ ಮದುವೆ ಕಾರ್ಯಕ್ರಮ ಶುರುವಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹೈದರಾಬಾದ್‌ ಮೂಲದ ಉದ್ಯಮಿಯ ಪುತ್ರ ರಾಜೀವ್‌ ರೆಡ್ಡಿ ಅವರೊಂದಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿಗೆ ನವೆಂಬರ್‌ 16ರ ವರೆಗೆ ವಿವಾಹ ಮಹೋತ್ಸವ ನಡೆಯಲಿದೆ.

ಬಳ್ಳಾರಿಯಿಂದ ಸುಮಾರು ವರ್ಷಗಳಿಂದ ದೂರವಿದ್ದ ಜನಾರ್ದನ ರೆಡ್ಡಿಯವರಿಗೆ ಶ್ರೀರಾಮುಲು ಅವರಿಂದ ಅಭೂತ ಪೂರ್ವವಾದ ಸ್ವಾಗತವೂ ಸಿಕ್ಕಿತ್ತು.

ಇನ್ನು ಮದುವೆ ಸಿದ್ಧತೆ ಬಗ್ಗೆ ಅನೇಕ ತಯಾರಿ ಮಾಡಿಕೊಂಡಿರುವ ಅವರು ಅನೇಕ ರಾಜಕೀಯ ಗಣ್ಯರು, ಮುಖಂಡರು, ಸಮಾಜ ಪ್ರಮುಖರನ್ನು ಮದುವೆಗೆ ಆಮಂತ್ರಿಸಲಾಗಿದೆ.[ಜನಾ ರೆಡ್ಡಿಗೆ ಕುಡಿದು-ಕುಣಿದು ಅದ್ಧೂರಿ ಸ್ವಾಗತ, ಕೇಸು ಹಾಕಿದ ಪೊಲೀಸರು]

ಮದುವೆ ಎಷ್ಟು ದಿನ ನಡೆಯುತ್ತದೆಯೋ ಎಂದು ಕೊಂಡವರಿಗೆ ಬರೋಬ್ಬರಿ 9 ದಿನಗಳು ಎನ್ನಲಾಗಿದೆ. ಸೋವಾರದಿಂದ ಮದುವೆಯ ಕಾರ್ಯಕ್ರಮ ಶುರುವಾಗಿದೆ. ಮದುವೆಗೆ ಅಂದಾಜು 250 ಕೋಟಿ ರೂ ವೆಚ್ಚವಾಗಲಿದ್ದು, ಮದುವೆ ಭೋಜನಕ್ಕೆ 100 ಕೋಟಿ ರೂ ವೆಚ್ಚದಲ್ಲಿ ಸಾವಿರಕ್ಕೂ ಹೆಚ್ಚು ಮಾದರಿಯ ಖಾದ್ಯಗಳು ಔತಣದಲ್ಲಿ ಇರುತ್ತದೆ ಎನ್ನಲಾಗುತ್ತಿದೆ. [ಟ್ರೋಲ್ ಹೈಕ್ಳಿಗೆ ಆಹಾರವಾದ ಜನಾರ್ದನ ರೆಡ್ಡಿ ಪುತ್ರಿಯ ಮದುವೆ!]

ಮದುವೆ ಎಷ್ಟು ದಿನ ಗೊತ್ತಾ ?

ಮದುವೆ ಎಷ್ಟು ದಿನ ಗೊತ್ತಾ ?

9 ದಿನದ ಮದುವೆಗೆ ಸೋಮವಾರ ಮೊದಲನೇ ದಿನ ಪೂಜಾ ಕಾರ್ಯಕ್ರಮಗಳು ಜರುಗಿದವು.

9:30ಕ್ಕೆ ವಿಶೇಷ ಗಣೇಶಪೂಜೆ, ಗಣಹೋಮ, ಹಂದರ್ ಪೂಜೆಗಳು ನೆರವೇರಿದವು. ಮಧ್ಯಾಹ್ನ 1 ಗಂಟೆಗೆ ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.

ನಂತರ 1:30 ಕ್ಕೆ ಬಂದ ಎಲ್ಲ ಬಂಧುಗಳು ಮತ್ತು ಗಣ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಮಂಗಳವಾರ ಮದುವೆಯ ವಧು ವರರ ಮಂಗಳ ಸ್ನಾನಕ್ಕೆ ಕಾವೇರಿ ಕೃಷ್ಣ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ ದಿಂದ 100 ಲೀಟರ್ ನಷ್ಟು ನೀರನ್ನು ಸಂಗ್ರಹಿಸಿಡಲಾಗಿತ್ತು.

ಬಳ್ಳಾರಿಗೆ ಭವ್ಯ ಸ್ವಾಗತ

ಬಳ್ಳಾರಿಗೆ ಭವ್ಯ ಸ್ವಾಗತ

ಮಾಜಿ ಸಚಿವ ಜನಾರ್ದನ ರೆಡ್ಡಿ 5 ವರ್ಷದ ನಂತರ ಬಳ್ಳಾರಿ ತೆರಳಿದಾಗ ಭವ್ಯ ಸ್ವಾಗತ ಸಿಕ್ಕಿತ್ತು. ಅಲ್ಲದೆ ಶ್ರೀರಾಮುಲು ಅವರೊಂದಿಗೆ ಮಾತಕತೆ ನಡೆಸಿದ್ದರು. ಜತೆಗೆ ತುಂಗಭದ್ರೆಗೆ ನಮಿಸಿ ಬಳ್ಳಾರಿಯಲ್ಲಿ ಎಲ್ಲರಿಗೂ ಮದುವೆಯ ಆಮಂತ್ರಣ ನೀಡಿದ್ದರು. ಅಲ್ಲದೆ ಬಳ್ಳಾರಿಗೆ ಬರಲು ಕೋರ್ಟಿನಿಂದ ಅನುಮತಿ ಪಡೆದಿದ್ದರು.

ದಾಳಿಯಾದ ಮೇಲೆ ಬಂತು ಅನುಮಾನ?

ದಾಳಿಯಾದ ಮೇಲೆ ಬಂತು ಅನುಮಾನ?

ರೆಡ್ಡಿ ಮನೆ ಮೇಲೆ ದಾಳಿ ನಡೆದ ಮೇಲೂ ಇಷ್ಟೊಂದು ಅದ್ಧೂರಿ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರಲ್ಲಾ! ಇವರಿಗೆ ಎಲ್ಲಿಂದ ಇಷ್ಟೊಂದು ದುಡ್ಡು ಬಂತು ಎಂಬ ಬಗ್ಗೆ ಸಾಕಷ್ಟು ಟ್ರೋಲ್ ಗಳು ವಾಟ್ಸಪ್ , ಫೇಸ್‍ ಬುಕ್ ಗಳಲ್ಲಿ ಹರಿದಾಡಿದ್ದವು.

ಆಮಂತ್ರಣಕ್ಕೆ ಹೊಸ ವಿಡಿಯೋ ಐಡಿಯಾ

ಆಮಂತ್ರಣಕ್ಕೆ ಹೊಸ ವಿಡಿಯೋ ಐಡಿಯಾ

ಬನ್ನಿ ಬನ್ನಿ ಎಂದು ಹಾಡುತ್ತಾ ಹೊಸ ಗೆಟ್ ಅಪ್ ನಲ್ಲಿ ಗಾಲಿ ರೆಡ್ಡಿ ಹಾಗೂ ಅವರ ಪತ್ನಿ, ಪುತ್ರ ನಿಮ್ಮ ಮುಂದೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.ಅಲ್ಲದೆ ಈ ರೀತಿಯ ತಂತ್ರಜ್ಞಾನ ಬಳಸಿದ್ದು ಇದೇ ಮೊದಲು. ರೆಡ್ಡಿ ಕುಟುಂಬ ವಿಶಿಷ್ಟ ಆಹ್ವಾನ ಪತ್ರಿಕೆ ಕಮ್ ವಿಡಿಯೋ ವಾಟ್ಸಪ್, ಫೇಸ್ ಬುಕ್‌ ಇತರೆಡೆ ಹರಿದಾಡಿದ್ದಾಯಿತು. ಇನ್ನು ಯಾರು ಯಾರು ಹೋಗ ಬಹುದು ಎಂಬ ಕುತೂಹಲ ಮಾತ್ರ ಉಳಿದಿದೆ.

ಯಾರು ಯಾರು ಬರಬಹುದು?

ಯಾರು ಯಾರು ಬರಬಹುದು?

ಮದುವೆ ಆಮಂತ್ರಣವನ್ನು ರಡ್ಡಿಯವರು ಪ್ರಧಾನಿ ಮೋದಿಯವರಿಗೂ ಕಳುಹಿಸಿದ್ದಾರೆ. ಅಲ್ಲದೆ ರಾಜ್ಯ ರಾಜಕಾರಣದ ಎಲ್ಲ ಮುಖಂಡರಿಗೂ ತಲುಪಿದೆ. ಬಾಲಿವುಡ್‌ ಕೆಲ ಮಂದಿಗೆ ತಲುಪಿದೆ ಎನ್ನಲಾಗುತ್ತಿದೆ. ಸ್ಯಾಂಡಲ್ ವುಡ್ನ ಪ್ರಮುಖರು ಮದುವೆಗೆ ಬರಲಿದ್ದಾರೆ.

English summary
Ex minister ballari gali Janardhana reddy daughter marriage started on monday. The marriage programe also comens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X