ಅಕ್ರಮ ಗಣಿಗಾರಿಕೆ : ಶಾಸಕ ಅನಿಲ್ ಲಾಡ್ ವಿರುದ್ಧ ಎಫ್ ಐಆರ್

Posted By:
Subscribe to Oneindia Kannada

ಬಳ್ಳಾರಿ, ಡಿಸೆಂಬರ್ 08:ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣದ ತನಿಖೆಯನ್ನು ಸಿಬಿಐ ತಂಡ ತೀವ್ರಗೊಳಿಸಿದ್ದು, ಪ್ರಕರಣದಲ್ಲೂ ಆರೋಪಿಯಾಗಿರುವ ಶಾಸಕ ಅನಿಲ್ ಲಾಡ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಬೇಲೇಕೇರಿ ಕೇಸ್: ಅನಿಲ್ ಲಾಡ್ ಅಂಡ್ ಫ್ಯಾಮಿಲಿಗೆ ಜಾಮೀನು

ಬಳ್ಳಾರಿ ಶಾಸಕ ಅನಿಲ್ ಲಾಡ್ ಮಾಲೀಕತ್ವದ ಕೆನರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಅನಿಲ್ ಲಾಡ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

Illegal Mining : FIR against Ballari MLA Anil Lad

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕಂಪನಿ 2010 ರಿಂದ 2012 ರ ವರೆಗೆ 82,275 ಮೆಟ್ರಿಕ್ ಟನ್ ಅದಿರು ಸಾಗಣೆ ಮಾಡಿದ್ದು, ಪರವಾನಗಿ ಇಲ್ಲದಿದ್ದರೂ ನಿಯಮ ಮೀರಿ ಅದಿರು ತೆಗೆದಿರುವ ಆರೋಪ ಕೇಳಿಬಂದಿದೆ.

ಎಫ್ಐಆರ್ ದಾಖಲಿಸಿರುವ ಎಸ್ಐಟಿ ಐಜಿಪಿ ಚರಣ್ ರೆಡ್ಡಿ ನೇತೃತ್ವದ ತಂಡ ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ. ಸುಮಾರು 13 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಎಸ್​ಐಟಿ ಮಾಹಿತಿ ಕಲೆಹಾಕಿದೆ.

ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ರಫ್ತು ಪ್ರಕರಣದಲ್ಲೂ ಆರೋಪಿಯಾಗಿದ್ದ ಅನಿಲ್ ಲಾಡ್, 2015ರ ಜುಲೈನಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ಸುಪ್ರೀಂಕೋರ್ಟ್​ ನಿರ್ದೇಶನದಂತೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Illegal Mining : FIR against Ballari MLA Anil Lad for allegedly involved in illegal transport of Iron ore in Tumakuru district Gubbi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ