ಬಳ್ಳಾರಿಯಿಂದ ಭಟ್ಕಳಕ್ಕೆ ಹೊರಟ ಅನುಪಮಾ ಶೆಣೈ

Posted By:
Subscribe to Oneindia Kannada

ಬಳ್ಳಾರಿ, ಜೂನ್ 09 : ಗುರುವಾರ ಮುಂಜಾನೆ ಕೂಡ್ಲಿಗಿಯಲ್ಲಿರುವ ಪೊಲೀಸ್ ವಸತಿ ಗೃಹಕ್ಕೆ ಆಗಮಿಸಿದ ಅನುಪಮಾ ಶೆಣೈ ಅವರು ಭಟ್ಕಳಕ್ಕೆ ಹೊರಟಿದ್ದಾರೆ. 'ಬಳ್ಳಾರಿ ಎಸ್‌ಪಿ ಅವರನ್ನು ನಾನು ಸಂಜೆ ಭೇಟಿ ಮಾಡುವುದಿಲ್ಲ' ಎಂದು ಅನುಪಮಾ ಸ್ಪಷ್ಟಪಡಿಸಿದರು.

ಜೂನ್ 4ರ ಶನಿವಾರ ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಾಪತ್ತೆಯಾಗಿದ್ದ ಅನುಪಮಾ ಶೆಣೈ ಅವರು, ಗುರುವಾರ ಮುಂಜಾನೆ ಕೂಡ್ಲಿಗಿಗೆ ಬಂದಿದ್ದರು. ಸಂಜೆ ಅವರು ಬಳ್ಳಾರಿ ಎಸ್‌ಪಿ ಆರ್.ಚೇತನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ['ಫೇಸ್ಬುಕ್ ಎಂದ್ರೇನು?' ಕೂಡ್ಲಿಗಿಯಲ್ಲಿ ಅನುಪಮಾ ಕೇಳಿದ ಪ್ರಶ್ನೆ]

anupama shenoy

ಗುರುವಾರ ಮಧ್ಯಾಹ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾನು ಭಟ್ಕಳದ ಸಂಬಂಧಿಕರ ಮನೆಗೆ ಹೋಗುತ್ತಿದ್ದೇನೆ. ಎಸ್‌ಪಿ ಅವರನ್ನು ಭೇಟಿ ಮಾಡಲು ತೆರಳುವುದಿಲ್ಲ' ಎಂದು ಸ್ಪಷ್ಟಪಡಿಸಿದರು. [ಅನುಪಮಾ ಅವರೇ, ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!]

ಫೇಸ್‌ಬುಕ್ ಖಾತೆ ನನ್ನದಲ್ಲ : 'ಸರಿ, ಯಾರಿಗೂ ನನ್ನ ಮಾತು ಅರ್ಥ ಆಗುತ್ತಿಲ್ಲ: ನ್ಯೂಸ್ ಚಾನಲ್ ಗಳಿಗೆ ನ್ಯೂಸ್ ಮಾತ್ರ ಬೇಕು. ಅಧಿಕಾರಿಗಳಿಗೆ ಅವರ ದರ್ಪ ಬೇಕು. ಜನರಿಗೆ ಅವರ ಹಠ ಸಾಧನೆ ಆಗಬೇಕು. ನನಗೆ ನನ್ನ ಪ್ರಾಣ ಉಳೀಬೇಕು. #‎ಯಾಕೋಡಿಕೆರವಿನೆನಪಾಗ್ತಿದ್ದಾರೆ‬' ಎಂದು 2 ಗಂಟೆಗಳ ಮುಂಚೆ ಅನುಪಮಾ ಅವರ ಫೇಸ್‌ಬುಕ್ ಖಾತೆಯಲ್ಲಿ ಸ್ಟೇಟಸ್ ಅಪ್‌ಡೇಟ್ ಆಗಿದೆ.['ದಯವಿಟ್ಟು ಕ್ಷಮಿಸಿ, ಕೂಡ್ಲಿಗಿಗೆ ಬರುವುದು ತಡವಾಯಿತು'!]

ಆದರೆ, ಮಾಧ್ಯಮಗಳ ಜೊತೆ ಮಾತನಾಡಿದ ಅನುಪಮಾ ಅವರು 'ಫೇಸ್‌ ಬುಕ್ ಖಾತೆ ನನ್ನದಲ್ಲ' ಎಂದು ಹೇಳಿದರು. ಯಾರು ಸ್ಟೇಟಸ್ ಅಪ್ ಡೇಟ್ ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಅವರನ್ನೇ ಕೇಳಿ' ಎಂದು ಉತ್ತರ ಕೊಟ್ಟರು. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

'ರಾಜೀನಾಮೆಗೆ ಬದ್ಧವಾಗಿದ್ದೇನೆ' : 'ನಾನು ಎಸ್‌ಪಿ ಅವರನ್ನು ಭೇಟಿ ಮಾಡುವುದಿಲ್ಲ. ನಾನು ಈಗಾಗಲೇ ರಾಜೀನಾಮೆ ಕೊಟ್ಟಿದ್ದೇನೆ. ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿದ್ದೇನೆ, ಅದಕ್ಕೆ ಬದ್ಧವಾಗಿದ್ದೇನೆ' ಎಂದು ಅನುಪಮಾ ಹೇಳಿದರು.

ಸಿಎಂ, ಪರಮೇಶ್ವರ ಸಭೆ ಮುಕ್ತಾಯ : ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸಭೆ ನಡೆಸಿ ಅನುಪಮಾ ಶೆಣೈ ಅವರ ರಾಜೀನಾಮೆ ಬಗ್ಗೆ ಚರ್ಚೆ ನಡೆಸಿದರು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪರಮೇಶ್ವರ ಅವರು ಈವರೆಗಿನ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DySP Anupama Shenoy will not meet Ballari Superintendent of police R. Chetan on evening. Anupama Shenoy traveling to Bhatkal.
Please Wait while comments are loading...