ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ಉತ್ಸವಕ್ಕೆ ಹೋಗುವುದು ಹೇಗೆ? ನೆಲೆಸುವುದು ಎಲ್ಲಿ?

By Mahesh
|
Google Oneindia Kannada News

ಬೆಂಗಳೂರು, ಜ.9: ಜಗತ್ತಿನ ಅತ್ಯಂತ ವಿಶಾಲ ಜೀವಂತ ಬಯಲು ವಸ್ತು ಸಂಗ್ರಹಾಲಯ ಎಂದು ಪ್ರಸಿದ್ಧವಾಗಿರುವ ಇಡೀ ಭೂ ಮಂಡಲದಲ್ಲೇ ಇದನ್ನು ಹೋಲುವಂಥ ಸ್ಥಳವನ್ನು ಕಣ್ಣುಗಳು ನೋಡಿಲ್ಲ; ಕಿವಿಗಳು ಕೇಳಿಲ' ಎಂದು ಪರ್ಷಿಯಾದ ರಾಯಭಾರಿ ಅಬ್ದುಲ್ ರಜಾಕ್ ವರ್ಣಿಸಿರುವ ಹಂಪಿಗೆ ವಿಶ್ವದೆಲ್ಲೆಯ ಪ್ರವಾಸಿಗರನ್ನು ಹಂಪಿ ಉತ್ಸವ ಆಕರ್ಷಿಸುತ್ತಿದೆ.

ದೇಶದ ಉದ್ದಗಲದ ಸಾಂಸ್ಕೃತಿಕ ಸಿರಿವೈಭವದ ಅನುಭವವನ್ನು ಮಾಡಿಕೊಡಲಿರುವ ಈ ಉತ್ಸವವನ್ನು ದಿನನಿತ್ಯದ ನೋವು ನಲಿವು ದುಡಿಮೆಗಳ ನಡುವೆ ಜನತೆಗೆ ಒಂದಿಷ್ಟು ಸಂತಸ ನೀಡಲಿ ಎಂಬ ಆಶಯದೊಂದಿಗೆ ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಈ ಉತ್ಸವವನ್ನು ಹಮ್ಮಿಕೊಂಡಿದೆ. ಜ.9ರಿಂದ ಮೂರು ದಿನಗಳ ಕಾಲ ವಿವಿಧ ವೇದಿಕೆಗಳಲ್ಲಿ ಕಲೆ, ಸಂಸ್ಕೃತಿ, ಇತಿಹಾಸ, ಮನರಂಜನೆ ಅನಾವರಣಗೊಳ್ಳಲಿದೆ.

How to Reach Hampi Where to Stay

ಹಂಪಿ ಉತ್ಸವಕ್ಕೆ ಬರುವುದು ಹೇಗೆ
ರೈಲು ಮಾರ್ಗ: ಹೋಸಪೇಟೆಗೆ ಬಿಜಾಪುರ, ಬೆಂಗಳೂರು, ಹುಬ್ಬಳ್ಳಿ, ಗುಂತಕಲ್ ಮುಂತಾದ ಸ್ಥಳಗಳಿಂದ ನೇರ ರೈಲು ಸಂಪರ್ಕವಿದೆ. ಹೊಸಪೇಟೆಯಿಂದ ಹಂಪಿಗೆ 13 ಕಿ.ಮೀ ಮತ್ತು ಗಂಗಾವತಿಗೆ 12 ಕಿ.ಮೀ ದೂರವಿದೆ. ಬೆಂಗಳೂರಿಗೆ 335 ದೂರದಲ್ಲಿದೆ.[ಹಂಪಿ ಇತಿಹಾಸವೇ ಬೇರೆ...ವಿಜಯಗರದ ಇತಿಹಾಸವೇ ಬೇರೆ...]

ಬಸ್ ಮಾರ್ಗ: ಹೊಸಪೇಟೆ ಹಾಗೂ ಗಂಗಾವತಿಗೆ ಬಿಜಾಪುರ, ಬೆಂಗಳೂರು, ಹುಬ್ಬಳ್ಳಿ, ಗುಂತಕಲ್, ಕೊಪ್ಪಳ ಮುಂತಾದೆಡೆಗಳಿಂದ ಬಸ್ ಸಂಪರ್ಕವಿದೆ. ಇದಲ್ಲದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬಸ್ ಗಳನ್ನು ಪಡೆದುಕೊಳ್ಳಬಹುದು. [ಹಂಪೆ ಉತ್ಸವ 2015]

ಕೆಎಸ್ ಟಿಡಿಸಿ ಬಸ್ ಗಳಿಗಾಗಿ ಪ್ರವಾಸಿಗರ ಗೈಡ್: 08394-241339

ಮಾಹಿತಿ ಕೇಂದ್ರ
ರಾಘವೇಂದ್ರ ಕಾಂಪೌಂಡ್, ಹೊಸಪೇಟೆ,
08394 -228537

ಅರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ, ಕಮಲಾಪುರ: 08394-2441237

ಉಳಿದು ಕೊಳ್ಳುವುದು ಎಲ್ಲಿ? (ಲ್ಯಾಂಡ್ ಲೈನ್ ಕೋಡ್ 08394)
* ಮಲ್ಲಿಗೆ ಹೋಟೆಲ್ : 228101-06; M:9845277117
* ಕೃಷ್ಣ ಪ್ಯಾಲೇಸ್ : 294300; M:9901912127
* ಹಂಪಿ ಇಂಟರ್ ನ್ಯಾಷನಲ್ : 222070/ M:9243164444
* ರಾಯಲ್ ಆರ್ಕಿಡ್ : 9886070593
* ಹೋಟೆಲ್ ರಾಕ್ ರೆಜೆನ್ಸಿ : 08395-250991/ 08395-250925/9243620999
* ವಿಜಯಶ್ರೀ ಹೆರಿಟೇಜ್ : 9980127633
* ಕಾರ್ತಿಕ್ ಹೋಟೆಲ್ : 220038; 224938; : 9886505539
* ಪೈ ಲಾಡ್ಜ್ : 228514; M:9448989247

English summary
Bangalore(335 kms) serves as an important gateway to access Hampi. There is an excellent road from Bangalore to Hampi and the journey approximately takes seven hours. Busses going to the heritage site leave from the Bangalore Inter-state Bus stand and Karnataka State Tourism Development Corporation(KSTDC) also runs a deluxe overnight bus service to Hospet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X