ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ರಾಜಕೀಯ : ಹೊಸ ದಾಳ ಉರುಳಿಸಿದ ದೇವೇಗೌಡರು!

|
Google Oneindia Kannada News

ಬಳ್ಳಾರಿ, ಡಿಸೆಂಬರ್ 05 : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಳ್ಳಾರಿ ರಾಜಕೀಯದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ಕೊಟ್ಟು, ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ದೇವೇಗೌಡರು ಬಳ್ಳಾರಿಗೆ ಭೇಟಿ ನೀಡಿದ್ದಾರೆ. ಬೆಳಗ್ಗೆ ಗಣಿ ಉದ್ಯಮಿ, ಕಾಂಗ್ರೆಸ್ ನಾಯಕ ಇಕ್ಬಾಲ್ ಹೊತ್ತೂರ್ ಅವರ ನಿವಾಸಕ್ಕೆ ಅವರು ಭೇಟಿ ನೀಡಿ, ಉಪಹಾರ ಸೇವಿಸಿದರು.

ಮೈಸೂರು ರಾಜಕೀಯ : ಚಾಮರಾಜ ಕ್ಷೇತ್ರದ ಜೆಡಿಎಸ್ ಬಂಡಾಯ ಅಂತಿಮ ಘಟ್ಟಕ್ಕೆ!ಮೈಸೂರು ರಾಜಕೀಯ : ಚಾಮರಾಜ ಕ್ಷೇತ್ರದ ಜೆಡಿಎಸ್ ಬಂಡಾಯ ಅಂತಿಮ ಘಟ್ಟಕ್ಕೆ!

HD Deve Gowda invites Congress leader Iqbal Hattur to party

ದೇವೇಗೌಡರ ಈ ಭೇಟಿ ಅಚ್ಚರಿಗೆ ಕಾರಣವಾಗಿದೆ. ಇಕ್ಬಾಲ್ ಹೊತ್ತೂರ್ ಅವರನ್ನು ಪಕ್ಷಕ್ಕೆ ದೇವೇಗೌಡರು ಆಹ್ವಾನಿಸಿದ್ದಾರೆ. ಅವರು ಪಕ್ಷ ಸೇರಿದರೆ 2018ರ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಟಿಕೆಟ್ ನೀಡುವ ಸಾಧ್ಯತೆ ಇದೆ.

ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರುಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು

2013ರ ಚುನಾವಣೆಯಲ್ಲಿ ಇಕ್ಬಾಲ್ ಹೊತ್ತೂರ್ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಇಕ್ಬಾಲ್ ಸಹೋದರ ಅಬ್ದುಲ್ ವಹಾಬ್ ಅವರಿಗೆ ಹೊಸಪೇಟೆ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ, ಸೋಲು ಅನುಭವಿಸಿದ್ದರು.

ಈಗ ದೇವೇಗೌಡರು ಇಕ್ಬಾಲ್ ಹೊತ್ತೂರ್ ಅವರನ್ನು ಭೇಟಿಯಾಗಿ, ಪಕ್ಷಕ್ಕೆ ಆಹ್ವಾನಿಸಿ ಜಿಲ್ಲೆಯ ರಾಜಕೀಯದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಡಿಸೆಂಬರ್‌ ಅಂತ್ಯದಲ್ಲಿ ಇಕ್ಬಾಲ್ ಪಕ್ಷ ಸೇರಬಹುದು ಎಂಬ ಸುದ್ದಿಗಳಿ ಹಬ್ಬಿವೆ.

English summary
JDS supremo H.D.Deve Gowda on December 5, 2017 met Mining baron and Ballari Congress leader Iqbal Hattur and invited him to join party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X