ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪೆಯಲ್ಲಿ ಪ್ರವಾಸಿ ವಿಶ್ವವಿದ್ಯಾಲಯ: ಮೆಚ್ಚುಗೆ ವ್ಯಕ್ತಪಡಿಸಿದ ಗೈಡ್ ಗಳು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ 05: ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ ಪ್ರವಾಸಿ ಗೈಡುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿಗೊಳಿಸಲಿಕ್ಕಾಗಿ ಹಂಪೆಯಲ್ಲಿ ಪ್ರವಾಸಿ ವಿಶ್ವವಿದ್ಯಾಲಯ' ಪ್ರಾರಂಭಿಸಲು ಮುಂದಾಗಿರುವುದನ್ನು ಗೈಡ್ ಗಳು ಸ್ವಾಗತಿಸಿದ್ದಾರೆ.

ಹಂಪೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಗೈಡ್ ಕೋರ್ಸ್ ಪ್ರಸ್ತುತ ಬೋಧಿಸಲಾಗುತ್ತಿದೆ. ಈ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನೀಡುವ ಒಂದು ತಿಂಗಳ ಪ್ರವಾಸಿ ಗೈಡ್' ತರಬೇತಿ ಪಡೆದು, ಅಧಿಕೃತವಾಗಿ ಗುರುತಿನ ಚೀಟಿ (ಐಡಿ ಕಾರ್ಡ್) ಪಡೆದು, ಗೈಡ್ ಕೆಲಸ ನಿರ್ವಹಿಸುತ್ತಿದ್ದಾರೆ.

ಕುಮಾರಸ್ವಾಮಿ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?ಕುಮಾರಸ್ವಾಮಿ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?

ಪ್ರವಾಸೋದ್ಯಮ ಇಲಾಖೆ ನೀಡುವ ತರಬೇತಿಯಿಂದ ಕೌಶಲ್ಯಭರಿತ ಗೈಡ್ ಗಳಾಗಿರುವ 100 - 150 ಗೈಡುಗಳು ಹಂಪೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ, 60 -75 ಗೈಡ್ ಗಳು ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ.

Guides have welcomed the initiative to set up a tourist university

ಕೆಲ ಗೈಡುಗಳು ದೇಶೀ ಭಾಷೆಗಳ ಜೊತೆ ಜೊತೆಯಲ್ಲಿ ವಿದೇಶೀ ಭಾಷೆಗಳನ್ನು ಕಲಿತು, ವಿದೇಶಿ ಪ್ರವಾಸಿಗರ ಮೆಚ್ಚುಗೆ ಗಳಿಸಿದ್ದಾರೆ.

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

ಇಂಥಹ ಸಂದರ್ಭದಲ್ಲಿ ಹಂಪೆಯಲ್ಲಿ ಪ್ರವಾಸಿ ವಿಶ್ವವಿದ್ಯಾಲಯ ಪ್ರಾರಂಭವಾಗಲು ಗೈಡ್ ಗಳಿಗೆ ರಾಷ್ಟ್ರೀಯ ಮನ್ನಣೆ ಸಿಗುತ್ತಿರುವುದಕ್ಕೆ ಎಸ್ಸಿ/ಎಸ್ಟಿ ಗೈಡ್ ಗಳ ಸಂಘಟನೆಯ ಕಾರ್ಯದರ್ಶಿ ವಾಲ್ಮೀಕಿ ಅಂಬರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlightsಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಕನ್ನಡ ವಿಶ್ವವಿದ್ಯಾಲಯ ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಗಳಿವೆ. ಈಗ ಪ್ರವಾಸಿ ವಿಶ್ವವಿದ್ಯಾಲಯ ಪ್ರಾರಂಭವಾದರೆ ಮೂರು ವಿಶ್ವವಿದ್ಯಾಲಯಗಳನ್ನು ಹೊಂದಿದ ಕೀರ್ತಿ ಜಿಲ್ಲೆಗೆ ಸಿಗಲಿದೆ.

English summary
Karnataka Budget 2018:Guides have welcomed the initiative to set up a 'tourist university' in Hampi. H.D. Kumaraswamy mentioned this subject in budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X