ಟಿಕೇಟ್ ಘೋಷಿಸದಿದ್ದರೂ ನಾಮಪತ್ರ ಸಲ್ಲಿಕೆಗೆ ಸಿದ್ಧರಾದ ಸೋಮಶೇಖರರೆಡ್ಡಿ!

Posted By: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಏಪ್ರಿಲ್ 15 : ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರಿಗೆ ಪಕ್ಷದಿಂದ ಅಧಿಕೃತ ಟಿಕೇಟ್ ಘೋಷಣೆ ಆಗದಿದ್ದರೂ ಏಪ್ರಿಲ್ 21 ರಂದು ನಾಮಪತ್ರ ಸಲ್ಲಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು, ಬಳ್ಳಾರಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿ ತಾವೊಬ್ಬರೇ ಅರ್ಜಿ ಸಲ್ಲಿಸಿದ ನಂತರ, ತಮಗೇ ಟಿಕೇಟ್ ಎನ್ನುವ ಅಪಾರ ವಿಶ್ವಾಸದಲ್ಲಿದ್ದ ಜಿ. ಸೋಮಶೇಖರರೆಡ್ಡಿ, ಈಗಾಗಲೇ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

G. Somashekar Reddy ready to prepare Filing nomination

ಕ್ಷೇತ್ರ ಪರಿಚಯ : ಬಳ್ಳಾರಿ ನಗರದಲ್ಲಿ ಲಾಡ್ ವಿರುದ್ಧ ರೆಡ್ಡಿ ಹಣಾಹಣಿ

ಅವಿರತವಾಗಿ ಪ್ರಚಾರದಲ್ಲಿ ಪಾಲ್ಗೊಂಡು, ಇಡೀ ಕ್ಷೇತ್ರ ಸುತ್ತಿರುವ ಜಿ. ಸೋಮಶೇಖರರೆಡ್ಡಿ ಅವರು ಟಿಕೇಟ್ ಬಗ್ಗೆ ಆರಂಭದಲ್ಲಿ ತೀವ್ರ ಒತ್ತಡ, ಗೊಂದಲ ಮತ್ತು ಆತಂಕದಲ್ಲಿದ್ದರು. ಆದರೆ ಅವರೊಬ್ಬರೇ ಅರ್ಜಿ ಸಲ್ಲಿಸಿದ ನಂತರ, ಟಿಕೇಟ್ ಖಾತರಿ ಮಾಡಿಕೊಂಡು ಉತ್ಸಾಹದಿಂದ ಪ್ರಚಾರ ನಿರ್ವಹಿಸುತ್ತಿದ್ದಾರೆ.

G. Somashekar Reddy ready to prepare Filing nomination

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಆದರೂ ನನಗೆ ಮತ ನೀಡಿ ಅನ್ನದೆ ಬಿಜೆಪಿಗೆ ಮತ ನೀಡಿ ಎಂದು ಮತ ಕೇಳುತ್ತಿರುವುದು ವಿಶೇಷ. ಬಿಜೆಪಿ ಈವರೆಗೆ ಟಿಕೇಟ್ ಕುರಿತಾಗಿ ಗ್ರೀನ್‍ ಸಿಗ್ನಲ್ ನೀಡದಿದ್ದರೂ ಏಪ್ರಿಲ್ 21 ರಂದು ನಾಮಪತ್ರ ಸಲ್ಲಿಸುವುದು ಗ್ಯಾರಂಟಿ ಆಗಿದೆ.

G. Somashekar Reddy ready to prepare Filing nomination

ಇದೆಲ್ಲದರ ನಡುವೆ ನಾನು ಈ ಬಾರಿ ಸ್ಪರ್ಧಿಸುತ್ತೇನೆ. ಬಿಜೆಪಿ ಟಿಕೇಟ್ ನನ್ನದೇ. ಗೆಲುವೂ ನನ್ನದೇ. ಕಸಾಪುರ ಆಂಜನೇಯಸ್ವಾಮಿ ನನ್ನೊಂದಿಗಿದ್ದಾನೆ' ಎಂದು ಸೋಮಶೇಖರರೆಡ್ಡಿ ಆತ್ಮವಿಶ್ವಾಸದಿಂದ ಹೇಳುತ್ತಿರುವುದಂತು ಸುಳ್ಳಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former MLA G. Somashekar Reddy ready to prepare Filing nomination. Somashekar Reddy declared himself I will compete election from Bellary assembly constituency. Ticket is mine, definitely i will win. Thus Reddy said confidently April 21 I will submit a nomination. please vote to bjp.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ