ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ಗುಡಿಯಲ್ಲಿ ಬಿಯರ್ ಬಾಟ್ಲು ಹಿಡಿದ ವಿದೇಶಿಗರು ಹಾಜರ್

ವಿಶ್ವ ವಿಖ್ಯಾತ ಹಂಪಿ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ, ಬಿಯರ್ ಬಾಟಲ್ ಹಿಡಿದು ಓಡಾಡುತ್ತಿದ್ದ ವಿದೇಶಿಯರಿಂದಾಗಿ ಹಂಪಿಯ ಘನತೆಗೇ ಕುಂದುಂಟಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಏಪ್ರಿಲ್ 19: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕತೆಯ ತಾಣವಾಗುತ್ತಿದೆಯಾ? ಹೌದು, ಇಂಥ ಅನುಮಾನಗಳು ಇದೀಗ ಮೂಡಿವೆ, ನಿನ್ನೆ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಬೀರು ಕುಡಿಯುತ್ತಾ ಓಡಾಡುತ್ತಿದ್ದುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಭಾರತದ ಇತಿಹಾಸದ ಭದ್ರ ಕೊಂಡಿ ಎಂದೇ ಕರೆಸಿಕೊಳ್ಳುವ ಹಂಪಿ ವಿಶ್ವ ಪಾರಂಪರಿಕ ತಾಣವಾಗಿ ಯುನೆಸ್ಕೋ ಮಾನ್ಯತೆಯನ್ನೂ ಪಡೆದಿದೆ. ಭಾರತೀಯ ಇತಿಹಾಸದ ಮಹೋನ್ನತಿಗೆ ಸಾಕ್ಷ್ಯವೆನ್ನಿಸಿರುವ ಹಂಪಿ ಈಗಾಗಲೇ ಹಾಳುಹಂಪಿಯಾಗಿದ್ದರೂ ಅಳಿದುಳಿದಿದ್ದನ್ನೇ ಜೋಪಾನ ಮಾಡುವ ಹೊಣೆ ಪ್ರತಿಯೊಬ್ಬ ನಾಗರಿಕರ ಮೇಲೂ ಇದೆ.[ವಿದೇಶಿಗರ ಕಣ್ಣಲ್ಲಿ ಗತಕಾಲದ ವೈಭೋಗದ ಹಂಪಿ : ಮಾತುಕತೆ]

ಹೀಗಿರುವಾಗ ವಿದೇಶಿ ಪ್ರವಾಸಿಗರ ಅಸಭ್ಯ ವರ್ತನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸುವುದು ಸಹಜವೇ. ಹಿಂದುಗಳ ಪಳಿಗೆ ದೇವಸ್ಥಾನವೆಂದರೆ ಅತ್ಯಂತ ಪವಿತ್ರ ತಾಣ. ದೇವಾಲಯದೊಳಗೆ ಚಪ್ಪಲಿ ಧರಿಸಿ ಬರುವುದು, ಮದ್ಯ ಸೇವನೆ, ಅಸಭ್ಯ ವರ್ತನೆಗಳೆಲ್ಲವೂ ನಿಷಿದ್ಧ. ಈ ಕುರಿತು ಹಲವು ಸೂಚನಾ ಫಲಕಗಳಿದ್ದರೂ ಅವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ರಾಜಾರೋಷವಾಗಿ ಹಂಪಿಯ ಪಾವಿತ್ರ್ಯವನ್ನೇ ಹಾಳುಗೆಡವಲು ಹೊರಟ ಇಂಥ ಪ್ರವಾಸಿಗರಿಂದ ಪ್ರವಾಸಿ ತಾಣಗಳ ಘನತೆಗೇ ಧಕ್ಕೆ ಬರುವುದು ಖಂಡಿತ.

ಚಪ್ಪಲಿ ಧರಿಸಿಯೇ ದೇವಾಲಯ ಪ್ರವೇಶ

ಚಪ್ಪಲಿ ಧರಿಸಿಯೇ ದೇವಾಲಯ ಪ್ರವೇಶ

ದೇವಾಲಯಕ್ಕೆ ಬಂದಿದ್ದ ನೂರಾರು ಭಕ್ತರು ಯಾರೂ ಚಪ್ಪಲಿ ಧರಿಸದೆ ಓಡಾಡುತ್ತಿರುವುದನ್ನು ನೋಡಿಯೂ, 'leave your footwear here' ಎಂಬ ಸೂಚನಾ ಫಲಕವನ್ನು ಗಮನಿಸಿಯೂ ಇಬ್ಬರು ವಿದೇಶಿ ಮಹಿಳೆಯರು ಚಪ್ಪಲಿ ಧರಿಸಿಯೇ ದೇವಾಲಯದ ಆವರಣದಲ್ಲಿ ಸುತ್ತಿದ್ದಾರೆ.[ಹಂಪಿ ಉತ್ಸವ ಪ್ರಯುಕ್ತ ಶಿಲಾಶಿಲ್ಪ ಮತ್ತು ಕಾಷ್ಠಶಿಲ್ಪ ಶಿಬಿರ]

ಒಬ್ಬರೂ ವಿರೋಧಿಸಲಿಲ್ಲ!

ಒಬ್ಬರೂ ವಿರೋಧಿಸಲಿಲ್ಲ!

ಚಪ್ಪಲಿ ಧರಿಸಿ ದೇವಾಲಯದ ಪ್ರಾಂಗಣದಲ್ಲಿ ವಿದೇಶಿಯರು ಓಡಾಡುತ್ತಿರುವುದನ್ನು ಕಂಡರೂ ದೇವಸ್ಥಾನದಲ್ಲಿದ್ದ ಹತ್ತಾರು ಕಾವಲುಗಾರರಾಗಲಿ, ಧಾರ್ಮಿಕ ಧತ್ತಿ ಕಚೇರಿಯ ಸಿಬ್ಬಂದಿಗಳಾಗಲಿ ಯಾರೊಬ್ಬರೂ ಅವರ ಸ್ವೇಚ್ಛಾರವನ್ನು ವಿರೋಧಿಸದಿರುವುದು ಮತ್ತಷ್ಟು ಅಚ್ಚರಿಯನ್ನುಂಟೂ ಮಾಡಿದೆ.[ವಿಶ್ವ ಪಾರಂಪರಿಕ ದಿನಕ್ಕೆ ನಿಮ್ಮ ಸಂಕಲ್ಪವೇನು?]

ದೇವಾಲಯದಲ್ಲೇ ಮದ್ಯಪಾನ

ದೇವಾಲಯದಲ್ಲೇ ಮದ್ಯಪಾನ

ವಿದೇಶಿ ಯುವಕನೊಬ್ಬ ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಅದನ್ನು ಕುಡಿಯುತ್ತಲೇ ದೇವಾಲಯದ ಆವರಣದಲ್ಲಿ ಓಡಾಡುತ್ತಿದ್ದುದನ್ನು ನೋಡಿಯೂ ಯಾರೊಬ್ಬರೂ ವಿರೋಧಿಸದಿರುವುದು ದೇವಾಲಯದ ಆಡಳಿತ ಮಂಡಳಿಯ ಬಗ್ಗೆ ಜನರು ಮುನಸಿಕೊಳ್ಳುವಂತೆ ಮಾಡಿದೆ.[ಹಂಪಿ ಇತಿಹಾಸವೇ ಬೇರೆ...ವಿಜಯಗರದ ಇತಿಹಾಸವೇ ಬೇರೆ]

ಹಂಪಿಯ ಘನತೆಗೆ ಪೆಟ್ಟು

ಹಂಪಿಯ ಘನತೆಗೆ ಪೆಟ್ಟು

ವಿದೇಶಿಯರ ಈ ವರ್ತನೆಯಿಂದಾಗಿ ವಿಶ್ವ ಮಟ್ಟದಲ್ಲಿ ತನ್ನದೇ ಹೆಸರು ಪಡೆದಿರುವ ಹಂಪಿಯ ಘನತೆಗೆ ಕುಂದುಂಟಾಗಿದೆ. ಇಂಥ ವರ್ತನೆ ಮರುಕಳಿಸದಂತೆ ದೇವಾಲಯದ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.[ನಿಮ್ಮ ಕಣ್ಣಮುಂದೆ ಬರಲಿದೆ ಪುರಾತನ ಹಂಪಿ!]

ವಿಜಯನಗರದ ಹಿರಿಮೆ

ವಿಜಯನಗರದ ಹಿರಿಮೆ

ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಇತಿಹಾಸದ ಹಲವು ಏಳುಬೀಳುಗಳನ್ನು ಕಂಡಿದೆ. ತನ್ನ ಅಭೂತಪೂರ್ವ ವಾಸ್ತುಶಿಲ್ಪದಿಂದಾಗಿ ಇಂದು ಜಗತ್ತಿನ ಘಟಾನುಘಟಿ ಪಾರಂಪರಿಕ ತಾಣಗಳಿಗೆ ಪೈಪೋಟಿ ನೀಡುತ್ತಿದೆ.

English summary
Some forein tourists misbehaved in world famous Hampi yesterday. The foreign tourists entered the world famous viroopaksha temple without removing footwear, and they were holding beer bottle in their hand. The incident will destroy dignity of the Hampi, localites told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X