ಗಣಿ ನಾಡಿಗೆ ಸರ್ಕಾರ ಕೊಟ್ಟದ್ದೆಷ್ಟು? ಬಾಕಿ ಉಳಿದದ್ದೆಷ್ಟು?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಗಣಿ ನಾಡು ಬಳ್ಳಾರಿ ಅದಿರಿನ ಕಾರಣದಿಂದ ಶ್ರೀಮಂತ. ಇಲ್ಲಿನ ಗಣಿ ಮಾಲೀಕರು ಅದರ ಲಾಭ ಪಡೆದು ಸಿರಿವಂತರಾದರು. ಒಂದು ಕಾಲದಲ್ಲಿ ಚಿನ್ನದ ಆಭರಣಗಳನ್ನು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲಾಗುತ್ತಿತ್ತು ಎನ್ನಲಾದ ವಿಜಯನಗರ ಸಾಮ್ರಾಜ್ಯದ ಸಮೃದ್ಧಿಯನ್ನು ಕಂಡಿದ್ದ ಜಿಲ್ಲೆಯಿದು.

ಬದಲಾದ ಕಾಲದಲ್ಲಿ ಇಲ್ಲಿನ ಸನ್ನಿವೇಶವೂ ಬದಲಾಗಿದೆ. ಗಣಿ ಸಂಪತ್ತಿನ ಹಿಂಬದಿಯಲ್ಲಿ ಇತಿಹಾಸದ ವೈಭವವನ್ನು ಮರೆಮಾಚುವಂತೆ 'ದೂಳು' ಆವರಿಸಿದೆ.

ತುಮಕೂರು ಜಿಲ್ಲೆಯಲ್ಲಿ ಶಾಸಕರ ನಿಧಿ ಬಳಕೆ: ಸುರೇಶ್ ಗೌಡ ನಂಬರ್ ಒನ್

ಇಲ್ಲಿನ ಕೊರತೆಗಳನ್ನು ಸರಿಪಡಿಸಲು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಇಲ್ಲಿನ ಶಾಸಕರು, ತಮಗೆ ಬಂದ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಎಷ್ಟು ಹಣವನ್ನು ಬಳಸಿಕೊಂಡಿದ್ದಾರೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಹುಡುಕಿದಾಗ, ಒನ್ ಇಂಡಿಯಾಕ್ಕೆ ದೊರೆತ ಮಾಹಿತಿ ಹೀಗಿದೆ.

Details of Bellary MLAs fund usage

ಶಾಸಕರ ಅಭಿವೃದ್ಧಿ ನಿಧಿಯ ಅನುದಾನ ಭಾರಿ ಪ್ರಮಾಣದಲ್ಲಿ ಬಳಕೆಯಾಗಿದೆ ಕೊಳೆಯುತ್ತಿದೆ ಎನ್ನುತ್ತವೆ ವರದಿಗಳು. ಹಲವು ಶಾಸಕರು ಬಿಡುಗಡೆಯಾದ ಅನುದಾನವನ್ನು ಬಳಸಿಕೊಳ್ಳಲು ಯೋಜನಾಪಟ್ಟಿಯನ್ನೇ ಸಲ್ಲಿಸಿರುವುದಿಲ್ಲ. ಆದರೆ, ಬಳ್ಳಾರಿ ಜಿಲ್ಲೆಯ ಶಾಸಕರು ಅನುದಾನವನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಎಲ್ಲ ಶಾಸಕರೂ ಅನುದಾನವನ್ನು ಬಹುತೇಕ ಬಳಸಿಕೊಂಡಿರುವುದು ವಿಶೇಷ. ಸರ್ಕಾರ ನೀಡಿರುವ ಹಣವನ್ನು ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.

ಅನುದಾನ ಬಳಕೆಯಲ್ಲಿ ದತ್ತಾ ಮುಂದೆ, ಸಿ.ಟಿ. ರವಿ ಹಿಂದೆ

ಬಾಕಿ ಇರುವ ಅನುದಾನ ಶೂನ್ಯ!
ವಿವಿಧ ಶಾಸಕರು ಅನುದಾನ ಬಳಕೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದರೆ, ಬಳ್ಳಾರಿ ಜಿಲ್ಲೆಯ ಶಾಸಕರು ಪೈಪೋಟಿಗೆ ಬಿದ್ದವರಂತೆ ಅನುದಾನ ಬಳಕೆ ಮಾಡಿದ್ದಾರೆ.

ಸಿರಗುಪ್ಪ ಶಾಸಕ, ಕಾಂಗ್ರೆಸ್‌ನ ಬಿ.ಎನ್. ನಾಗರಾಜ್ ಮುಂಚೂಣಿಯಲ್ಲಿದ್ದಾರೆ. 2013ರಿಂದ 2017-18ನೇ ಸಾಲಿನವರೆಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಸಂಪೂರ್ಣ ಹಣವನ್ನು ವಿವಿಧ ಕಾಮಗಾರಿಗಳಿಗೆ ತೊಡಗಿಸಿ ಅವರು ಪ್ರಸ್ತಾವ ಸಲ್ಲಿಸಿದ್ದಾರೆ.

ರಾಯಚೂರಿಗೆ ಸರ್ಕಾರ ಕೊಟ್ಟದ್ದೆಷ್ಟು? ಖರ್ಚಾದದ್ದೆಷ್ಟು? ಒನ್ಇಂಡಿಯಾ ಕನ್ನಡ' ನೀಡುತ್ತಿದೆ ಮಾಹಿತಿ

ಐದೂ ಅವಧಿಯಲ್ಲಿ ಅವರು ಅನುದಾನದಲ್ಲಿ ಒಂದು ಪೈಸೆ ಹಣವನ್ನೂ ಬಾಕಿ ಉಳಿಸಿಕೊಂಡಿಲ್ಲ. ವಿಧಾನಪರಿಷತ್ ಸದಸ್ಯರು ಸೇರಿದಂತೆ ಇತರೆ ಯಾವ ಶಾಸಕರೂ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ವಿವಿಧ ಕ್ಷೇತ್ರಗಳ ಶಾಸಕರು ಕೋಟ್ಯಂತರ ರೂಪಾಯಿ ಅನುದಾನ ಬಳಸಿಕೊಳ್ಳದೆ ಬಾಕಿ ಉಳಿಸಿಕೊಂಡಿದ್ದರೆ, ಬಳ್ಳಾರಿಯ ಶಾಸಕರು ಕೆಲವೇ ಲಕ್ಷಗಳಷ್ಟು ಹಣ ಉಳಿಸಿಕೊಂಡಿದ್ದಾರೆ.

ಬಿಡುಗಡೆಯಾಗಿದ್ದು ಎಷ್ಟು ಹಣ, ಬಾಕಿ ಇರುವುದೆಷ್ಟು?
2013ರಲ್ಲಿ ಬಿಡುಗಡೆಯಾದ ಹಣ 19.59 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 19.74 ಕೋಟಿ.
2014ರಲ್ಲಿ ಬಿಡುಗಡೆಯಾದ ಹಣ 20 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 19.97 ಕೋಟಿ.
2015ರಲ್ಲಿ ಬಿಡುಗಡೆಯಾದ ಹಣ 20 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 19.95 ಕೋಟಿ.
2016ರಲ್ಲಿ ಬಿಡುಗಡೆಯಾದ ಹಣ 22 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 21.82 ಕೋಟಿ.
2017ರಲ್ಲಿ ಬಿಡುಗಡೆಯಾದ ಹಣ 22 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 18.21 ಕೋಟಿ.

ಕಂಪ್ಲಿ ಶಾಸಕ ಸುರೇಶ್ ಬಾಬು 2013ರಲ್ಲಿ 4.87 ಲಕ್ಷ, 2016ರಲ್ಲಿ 4.66 ಲಕ್ಷ ಮತ್ತು 2017ನೇ ಸಾಲಿನಲ್ಲಿ 80 ಸಾವಿರ ರೂಪಾಯಿ ಅನುದಾನ ಉಳಿಸಿಕೊಂಡಿದ್ದಾರೆ.

ಹಗರಿಬೊಮ್ಮನಹಳ್ಳಿಯ ಶಾಸಕ ಭೀಮಾ ನಾಯ್ಕ್, 2014ನೇ ಸಾಲಿನಲ್ಲಿ 1.44 ಲಕ್ಷ ಬಳಕೆ ಮಾಡಿಕೊಂಡಿಲ್ಲ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಎನ್‌.ವೈ. ಗೋಪಾಲಕೃಷ್ಣ ಒಟ್ಟಾರೆ 8 ಲಕ್ಷ ಅನುದಾನವನ್ನು ಉಳಿಸಿಕೊಂಡಿದ್ದಾರೆ.

ಗಡಿ ಜಿಲ್ಲೆ ಬೆಳಗಾವಿಗೆ ಸರ್ಕಾರ ಕೊಟ್ಟ ಅನುದಾನವೆಷ್ಟು?

ಅತಿ ಹೆಚ್ಚು ಅನುದಾನ ಬಾಕಿ ಉಳಿಸಿಕೊಂಡಿರುವವರ ಸಾಲಿನಲ್ಲಿ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಅವರ ಹೆಸರಿದೆ. 2017ನೇ ಸಾಲಿಗೆ ಅವರು 1.29 ಕೋಟಿ ಮೊತ್ತ ಉಳಿಸಿಕೊಂಡಿದ್ದಾರೆ. 2015ರಲ್ಲಿ 1.48 ಲಕ್ಷ, 2016ರಲ್ಲಿ 2.85 ಲಕ್ಷ ಖರ್ಚಾಗದೆ ಉಳಿದಿದೆ.

ವಿಧಾನರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ 2017-18ನೇ ಸಾಲಿನಲ್ಲಿ 1.04 ಕೋಟಿ ಅನುದಾನಕ್ಕೆ ಇನ್ನೂ ಪ್ರಸ್ತಾವ ಸಲ್ಲಿಸಿಲ್ಲ. ಅಲ್ಲಂ ವೀರಭದ್ರಪ್ಪ 1.23 ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದ್ದಾರೆ.

ಐದು ವರ್ಷದ ಅವಧಿಯಲ್ಲಿ 9 ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ಒಟ್ಟಾರೆ 4.10 ಕೋಟಿ ರೂಪಾಯಿ ಅನುದಾನ ಉಳಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MLA's from bellary district are utilizing there fund most among the other MLA's from the state. Only 4 crores of fund is not used in last five years

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ