ಮನಮೋಹನ್ ನೋಡಿದರೆ ಅಯ್ಯೋ ಅನಿಸುತ್ತೆ ಎಂದ ಅಂಬರೀಶ್

Posted By:
Subscribe to Oneindia Kannada
   ಮನಮೋಹನ್ ಸಿಂಗ್ ಅವರನ್ನ ನೋಡಿದರೆ ಅಂಬಿ ಅವರಿಗೆ ಪಾಪ ಅನ್ನಿಸುತ್ತಂತೆ | Oneindia Kannada

   ಬಳ್ಳಾರಿ, ಫೆಬ್ರವರಿ 10 : ದೇಶದಲ್ಲೇ ಕಾಂಗ್ರೆಸ್ ನಂಬರ್ ಒನ್ ಪಕ್ಷ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಈ ದೇಶಕ್ಕಾಗಿ ರಕ್ತ ನೀಡಿದ್ದಾರೆ. ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಪಾಲಿಗೆ ಭದ್ರಕೋಟೆ ಎಂದು ಭಾಷಣ ಆರಂಭಿಸಿದರು ಶಾಸಕ- ನಟ ಅಂಬರೀಶ್. ಹೊಸಪೇಟೆಯಲ್ಲಿ ಕಾಂಗ್ರೆಸ್ ಜನಾಶೀರ್ವಾದ ಸಭೆಯಲ್ಲಿ ರಾಹುಲ್ ಗಾಂಧಿ ಆಗಮನಕ್ಕೆ ಮುನ್ನ ಅವರು ಮಾತನಾಡಿದರು.

   ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ "ಕಾಂಗ್ರೆಸ್ ನಿಂದ ವಲ್ಲಭಭಾಯ್ ಪಟೇಲ್ ಅವರು ಪ್ರಧಾನಿ ಆಗುವದನ್ನು ತಡೆಯಲಾಯಿತು" ಎಂಬ ಆರೋಪಕ್ಕೆ ಉತ್ತರಿಸುವಾಗ, ಅಡ್ವಾಣಿ ಅವರ ಈಗಿನ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ ಎಂದ ಅವರು, ಮನಮೋಹನ್ ಅವರನ್ನು ನೋಡಿದರೂ ಅಯ್ಯೋ ಎನಿಸುತ್ತದೆ" ಎಂದು ಹೇಳಿದರು.

   LIVE : ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ

   Congress is number one party in country: Ambareesh

   ಬಿಜೆಪಿಯ ಹಿರಿಯ ಮುಖಂಡರಾದ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಹೆಸರನ್ನು ಹೇಳಬೇಕಿದ್ದ ಅವರು, ಮನಮೋಹನ್ ಎನ್ನುವ ಮೂಲಕ ಅಚ್ಚರಿಗೆ ದೂಡಿದರು. ಇತ್ತೀಚೆಗೆ ಸಂಸತ್ ನಲ್ಲಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಕಟುವಾದ ಟೀಕೆ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Congress is number one party in country. Indira Gandhi, Rajiv Gandhi sacrifices for country, says MLA- Actor Ambareesh in Hospet, Ballari on Saturday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ