'ಸುರೇಶಬಾಬು ಸೋಲಿಗೆ ಅವರೇ ಕಾರಣ, ಕಾಂಗ್ರೆಸ್ ಅಲ್ಲ'

Posted By: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಮೇ 15 : ಕರ್ನಾಟಕ ಇತಿಹಾಸದಲ್ಲೇ ಕಿರಿಯ ವಯಸ್ಸಿನ ಶಾಸಕ ಎಂದು ಹೆಸರು ಮಾಡಿ, ಅಂದು ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೇ ಸವಾಲು ಹಾಕಿ, ಕಾಂಗ್ರೆಸ್ ಸರ್ಕಾರ ರಚನೆಗೆ ಕಾರಣವಾಗಿದ್ದ ಕಂಪ್ಲಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಚ್. ಸುರೇಶಬಾಬು ಹ್ಯಾಟ್ರಿಕ್ ಅವಕಾಶ ತಪ್ಪಿಸಿಕೊಂಡಿದ್ದಾರೆ.

2008 ರಲ್ಲಿ, 2013 ರಲ್ಲಿ ಅಭೂತಪೂರ್ವವಾಗಿ ಗೆಲುವು ಸಾಧಿಸಿ, ಎದುರಾಳಿಗಳನ್ನು ಧೂಳೀಪಟ ಮಾಡಿದ್ದ ಟಿ.ಎಚ್. ಸುರೇಶಬಾಬು ಅವರು, ಎದುರಾಳಿಗಳನ್ನು ತೀರ ನಿರ್ಲಕ್ಷಿಸಿ, ಬೇಜವಾಬ್ದಾರಿ ತೋರುವವರು.

ಕಾಂಗ್ರೆಸ್ಸಿನ ಹಿಂಬಾಗಿಲ ರಾಜಕಾರಣಕ್ಕೆ ಸಂಸದ ಅನಂತಕುಮಾರ್ ಕಿಡಿ

ಎರಡು ಅವಧಿಯಲ್ಲಿಯೂ ಶಾಸಕರಾಗಿ ಇವರು ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡಿದ್ದಕ್ಕಿಂತಲೂ ಚಿತ್ರನಟನ ರೀತಿಯಲ್ಲಿ ವೇಷಭೂಷಣ ಮಾಡಿಕೊಂಡು, ಯವಶಕ್ತಿಯನ್ನು ಸೆಳೆದು, ಕಡೆಗಣಿಸಿ, ನಾಟಕೀಯವಾಗಿ ವ್ಯವಹರಿಸುವಲ್ಲಿ ಖ್ಯಾತಿ ಪಡೆದಿದ್ದರು.

Congress is not responsible for Suresh Babus defeat.

ಅಲ್ಲದೇ, ಕ್ಷೇತ್ರದ ಆಗುಹೋಗುಗಳ ಬಗ್ಗೆ ಗಮನ ನೀಡದೇ ವೇದಿಕೆಗಳಲ್ಲಿ ಸಭ್ಯತೆ ಪಾಲಿಸದೇ ಅನೇಕರಲ್ಲಿ ಬೇಸರ ಮೂಡಿಸಿದ್ದರು. ಇದೇ ಅವರಿಗೆ ಸೋಲಿಗೆ ಕಾರಣ ಎಂದು ಬಿಜೆಪಿ ಮುಖಂಡರುಗಳೇ ಹೇಳುತ್ತಿದ್ದಾರೆ.

ಟಿ.ಎಚ್. ಸುರೇಶಬಾಬು ಅವರ ಸೋಲಿಗೆ ಅವರೇ ಕಾರಣ, ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ ಅಭ್ಯರ್ಥಿಯೂ ಅಲ್ಲ ಎನ್ನುವುದು ಕಾಂಗ್ರೆಸ್ಸಿಗರ ಅಭಿಪ್ರಾಯವಾಗಿದೆ. ಟಿ.ಎಚ್. ಸುರೇಶಬಾಬು ಅವರ ಎದುರಾಳಿ ಕಾಂಗ್ರೆಸ್ ನ ಜೆ.ಎನ್. ಗಣೇಶ್ ಅವರು 80,590 ಮತಗಳನ್ನು ಪಡೆದು, ಬಿಜೆಪಿಯ ಸುರೇಶಬಾಬು 75037 ಮಗಳನ್ನು ಪಡೆದಿದ್ದಾರೆ.

ಜೆ.ಎನ್. ಗಣೇಶ್ ಅವರ ಗೆಲುವಿನ ಅಂತರ 5,555.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Election Results 2018:Congress is not responsible for Suresh Babu's defeat. Not a congress candidate. Suresh Babu himself lost his win. Everyone is talking in the constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X