ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿ ಉತ್ಸವ: ರಂಜಿಸಿದ ಜಾನಪದ ಕಲಾಯಾತ್ರೆ

By ಜಿಎಂ ರೋಹಿಣಿ, ಬಳ್ಳಾರಿ
|
Google Oneindia Kannada News

ಹಂಪಿ, ನವೆಂಬರ್, 6: ವರ್ಣರಂಜಿತ ಜಾನಪದ ವಾಹಿನಿಯ ಆಕರ್ಷಕ ಕಲಾಯಾತ್ರೆಗೆ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಶನಿವಾರ ಚಾಲನೆ ನೀಡಲಾಯಿತು.

ಅಪರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಅವರು ತಾಯಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಆಕರ್ಷಕ ಕಲಾಯಾತ್ರೆಯೂ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ತಲುಪಿತು.

ಯಾತ್ರೆಯಲ್ಲಿ ನಂದಿಧ್ವಜ, ನಾದಸ್ವರ, ಉರುಮೆವಾದ್ಯ, ಹಲಗೆವಾದನ, ಕಹಳೆ ವಾದನ, ಸಿಂದೋಳ ಕುಣಿತ, ಕರಡಿ ಕುಣಿತ, ತಾಷರಂಡೋಲು, ಡೊಳ್ಳುಕುಣಿತ, ಉಮ್ಮತಾಟ, ಗೊರವರ ಕುಣಿತ, ಹುಲಿವೇಷ ಕಲಾತಂಡಗಳು ತಮ್ಮ ಪ್ರತಿಭೆಯನ್ನು ಯಾತ್ರೆಯಲ್ಲಿ ಅನಾವರಣಗೊಳಿಸಿದವು.

ಯಾತ್ರೆಯನ್ನು 10 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದರು.ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ಲಕ್ಷ್ಮೀ ಯಾತ್ರೆಯಲ್ಲಿ ಗಾಂಭೀರ್ಯದಿಂದ ಸಾಗಿದಿದ್ದು ಕಂಡುಬಂದಿತು.

ಮೇಳೈಸಿದ ವಿವಿಧ ಕಲಾಪ್ರಕಾರಗಳು

ಮೇಳೈಸಿದ ವಿವಿಧ ಕಲಾಪ್ರಕಾರಗಳು

ಪೂಜಾ ಕುಣೀತ, ಕರಡಿ ಮಜಲು,ಕರಗ ಕುಣಿತ,ಚಿಟ್ಟಿಮೇಳ,ಕಂಗೀಲು ನೃತ್ಯ,ಸಿಂಹನೃತ್ಯ,ಮುಖವಾಡ, ಕೀಲು ಕುದುರೆ,ಮಲಿಕಿನ ಕೋಲಾಟ,ಮಹಿಳಾ ಡೊಳ್ಳು ಕುಣಿತ, ಕೊಂಬುವಾಲಗ, ನೀಲಗಾರ ಮೇಳ, ಕಥಕ್ಕಳಿ ಗೊಂಬೆನೃತ್ಯ,ಮರಗಾಲು ಕುಣಿತ,ಸುಗ್ಗಿ ಕುಣಿತ ಸೇರಿದಂತೆ 45ಕ್ಕೂ ಹೆಚ್ಚು ಕಲಾತಂಡಗಳು ಕಲಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.

ಸಹಾಯಕ ಆಯುಕ್ತ ಅವಿನಾಶ ಮೇನನ್, ಕನ್ನಡ ಮತ್ತು ಸಂಸ್ಕೇತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೊಟ್ರಪ್ಪ ಸೇರಿದಂತೆ ಅನೇಕರು ಇದ್ದರು.

ಕೆಸರುಗದ್ದೆ ಓಟಕ್ಕೆ ಅಭೂತಪೂರ್ವ ಸ್ಪಂದನೆ

ಕೆಸರುಗದ್ದೆ ಓಟಕ್ಕೆ ಅಭೂತಪೂರ್ವ ಸ್ಪಂದನೆ

ಇದೇ ಮೊದಲ ಬಾರಿಗೆ ಹಂಪಿ ಉತ್ಸವದಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಓಟ ಸ್ಪರ್ಧೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಡ್ಡಿರಾಂಪುರ ಗ್ರಾಮದ ಶ್ರೀನಿವಾಸ ಅವರ ಗದ್ದೆಯಲ್ಲಿ ನಿರ್ಮಿಸಲಾಗಿದ್ದ ಸ್ಪರ್ಧಾಂಗಣದಲ್ಲಿ ಪುರುಷರ 100 ಮೀಟರ್ ಹಾಗೂ ಮಹಿಳೆಯರ 50 ಮೀಟರ್ ಕೆಸರುಗದ್ದೆ ಓಟದ ಸ್ಪರ್ಧೆ ನಡೆಯಿತು.

ಬಳ್ಳಾರಿ,ರಾಯಚೂರು,ಕೊಪ್ಪಳ,ಗದಗ,ಬಾಗಲಕೋಟ ಮತ್ತಿತರ ಜಿಲ್ಲೆಗಳಿಂದ ಆಗಮಿಸಿದ್ದಸುಮಾರು 138 ಪುರುಷ ಹಾಗೂ 17 ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು.

ಉತ್ತರ ಕರ್ನಾಟಕಕ್ಕೂ ಪರಿಚಯವಾದ ಕಂಬಳ

ಉತ್ತರ ಕರ್ನಾಟಕಕ್ಕೂ ಪರಿಚಯವಾದ ಕಂಬಳ

ಕರಾವಳಿ ಭಾಗದ ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿರುವ ಕಂಬಳ ಎಂದು ಕರೆಯಲ್ಪಡುವ ಕೆಸರುಗದ್ದೆ ಒಟವನ್ನು ಉತ್ತರ ಕರ್ನಾಟಕಕ್ಕೂ ಪರಿಚಯಿಸುವದು ಸ್ಪರ್ಧೆಯ ಆಶಯವಾಗಿತ್ತು. ಸ್ಥಳೀಯ ಮುಖಂಡ ದೀಪಕ್‍ಸಿಂಗ್ ಅವರು ಕೆಸರು ಗದ್ದೆ ಓಟಕ್ಕೆ ಹಸಿರು ನಿಶಾನೆ ನೀಡಿದರು.

ಪುರುಷ ಸ್ಪರ್ಧಾಳುಗಳ ಸಂಖ್ಯೆ ಅಧಿಕವಾಗಿದ್ದರಿಂದ ಸುಮಾರು 10 ಕ್ಕೂ ಹೆಚ್ಚು ಪ್ರಾಥಮಿಕ ಸುತ್ತುಗಳನ್ನು ನಡೆಸಲಾಯಿತು. ಅವುಗಳಲ್ಲಿ ವಿಜೇತರಾದವರಿಗೆ ಉಪಾಂತ್ಯ ಹಾಗೂ ಅಂತಿಮ ಸುತ್ತಿನ ಸ್ಪಧೆಗಳನ್ನು ನಡೆಸಲಾಯಿತು.

ಚಪ್ಪಾಳೆ, ಶಿಳ್ಳೆ ಹೊಡೆದು ಕೆಸರು ಗದ್ದೆಗೆ ಓಟಕ್ಕೆ ಪ್ರೋತ್ಸಾಹ

ಚಪ್ಪಾಳೆ, ಶಿಳ್ಳೆ ಹೊಡೆದು ಕೆಸರು ಗದ್ದೆಗೆ ಓಟಕ್ಕೆ ಪ್ರೋತ್ಸಾಹ

ಕಡ್ಡಿರಾಂಪುರ,ಮಲಪನಗುಡಿ ,ಹಂಪಿ,ಕಮಲಾಪುರ ,ಕೊಂಡನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ಪರ್ಧಾಳುಗಳ ಉತ್ಸಾಹಕ್ಕೆ ಸಿಳ್ಳೆ,ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರು.

ಮಹಿಳಾ ವಿಭಾಗದ ಸ್ಪರ್ಧೆಗಳಲ್ಲಿ ಮುಂಡರಗಿಯ ಬಶೀರಾ ವಕಾರದ ಪ್ರಥಮ, ಶಾಹೀದಾಬೇಗಂ ಬಳಿಗಾರ ವೆಂಕಟಾಪುರ ದ್ವಿತೀಯ, ಬಾಗಲಕೋಟೆಯ ಸೋನಿಯಾ ಜಾಧವ ತೃತೀಯ ಸ್ಥಾನ ಪಡೆದರು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಹೊಸಮಲಪನಗುಡಿಯ ವಿ.ಶಿವರಾಜ ಪ್ರಥಮ, ಕುರೆಕೊಪ್ಪದ ರವಿಕುಮಾರ ದ್ವಿತೀಯ,ಹಳೆಮಲಪನಗುಡಿಯ ಕೆ.ರಮೇಶ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ನಗದು ಬಹುಮಾನ

ವಿಜೇತರಿಗೆ ನಗದು ಬಹುಮಾನ

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಹೊಸಮಲಪನಗುಡಿಯ ವಿ.ಶಿವರಾಜ ಪ್ರಥಮ, ಕುರೆಕೊಪ್ಪದ ರವಿಕುಮಾರ ದ್ವಿತೀಯ,ಹಳೆಮಲಪನಗುಡಿಯ ಕೆ.ರಮೇಶ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ಪ್ರಥಮ 5 ಸಾವಿರ, ದ್ವಿತೀಯ 3 ಮತ್ತು ತೃತೀಯ ಸ್ಥಾನ ಪಡೆದವರಿಗೆ 1 ಸಾವಿರ ರೂ.ನಗದು ಮತ್ತು ಫಲಕ ಹಾಗೂ ಪ್ರಮಾಣಪತ್ರ ವಿತರಿಸಿ ಅಭಿನಂದಿಸಲಾಯಿತು.

ಶರಣೇಗೌಡ ಬೇಲೆರಿ ಹಾಗೂ ಇನ್ನಿತರರು ಕೆಸರುಗದ್ದೆ ಓಟದ ನಿರ್ಣಾಯರಾಗಿದ್ದರು.ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ ಮತ್ತಿತರರು ಇದ್ದರು.

ಆಕರ್ಷಿಸಿದ ವಿಶೇಷ ಮಳಿಗೆಗಳು

ಆಕರ್ಷಿಸಿದ ವಿಶೇಷ ಮಳಿಗೆಗಳು

ಹಂಪಿ ಉತ್ಸವದ ನಿಮಿತ್ತ ಹಂಪಿಯ ಪ್ರಧಾನ ವೇದಿಕೆ ಎದುರುಗಡೆ ಹಾಕಲಾಗಿರುವ ಪುಸ್ತಕ ಮಳಿಗೆ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ,ಕೈಗಾರಿಕೆ, ತೋಟಗಾರಿಕೆ, ಪ್ರವಾಸೋದ್ಯ,ಚಿತ್ರಕಲಾ,ಕಾಷ್ಟಶಿಲ್ಪ ಸೇರಿದಂತೆ ವಿವಿಧ ಮಳಿಗೆಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು.

ಸರ್ಕಾರದ ವಿವಿಧ ಜನಪರ ಯೋಜನೆಯ ಕುರಿತು ಮಾಹಿತಿ ಹೊಂದಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಥಾಪಿಸಿದ್ದ ಹಂಪಿಯ ಶಿಲ್ಪ ವೈಭವ ಬಿಂಬಿಸಿಸುವ ಮಳಿಗೆ ಆಕರ್ಷಕವಾಗಿತ್ತು.

ವಿವಿದ ಭಾಗ್ಯಗಳ ವಿವರಣೆ

ವಿವಿದ ಭಾಗ್ಯಗಳ ವಿವರಣೆ

ನಿರ್ಮಲ ಭಾಗ್ಯ. ಅನ್ನ ಭಾಗ್ಯ. ಕ್ಷೀರಭಾಗ್ಯ. ಕ್ಷೀರಧಾರೆ, ಮನಸ್ವಿನಿ, ಕೃಷಿ ಭಾಗ್ಯ, ಹೆಣ್ಣು ಮಕ್ಕಳ ಉತ್ತೆಜನಕ್ಕೆ ಪ್ರೋತ್ಸಾಹ ಸೇರಿದಂತೆ ವಿವಿಧ ಯೋಜನೆಗಳ ಫೋಟೋ ಸಹಿತ ವಿವರಣಾತ್ಮಕ ಫಲಕಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಸರಕಾರದ ಯೋಜನೆಗಳ ಮಾಹಿತಿಗಾಗಿ ಎಲ್‍ಇಡಿ ಟಿವಿಯ ಪ್ರದರ್ಶನವು ಈ ಬೃಹತ್ ಮಳಿಗೆಯಲ್ಲಿ ಏರ್ಪಡಿಸಲಾಗಿದೆ.

ಜನರು ಈ ಮಳಿಗೆ ಎದುರುಗಡೆ ಇರುವ ಸಾಸಿವೆ ಕಾಳು ಗಣಪನ ಮೂರ್ತಿ ಎದುರುಗಡೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು ಮತ್ತು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ಹಂಚಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.

ಪುಸ್ತಕ ಮಾರಾಟ ಮಳಿಗೆ

ಪುಸ್ತಕ ಮಾರಾಟ ಮಳಿಗೆ

ಈ ಬಾರಿಯ ಹಂಪಿ ಉತ್ಸವದಲ್ಲಿ ಪುಸ್ತಕ ಮಳಿಗೆಗಳಿಗೆ ದಿನಕ್ಕೆ ಒಂದು ರೂ.ನಿಗದಿ ಪಡಿಸಿರುವುದಕ್ಕೋ ಏನೋ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಪುಸ್ತಕ ಪ್ರಕಾಶಕರು ಆಗಮಿಸಿರುವುದು ವಿಶೇಷ.

ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ಜನಪದ, ಜನಾಂಗಿಯ ಅಧ್ಯಾಯನ, ಜನಪದ ಕೋಶಗಳು, ಕರ್ನಾಟಕದ ಭವ್ಯ ಪರಂಪರೆ, ದಾಸರು, ಶರಣರ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ವಿಷಯಗಳ ಸಂಬಂಧಿಸಿದ ಪುಸ್ತಕಗಳು ಮಳಿಗೆಗಳಲ್ಲಿ ಲಭ್ಯವಿವೆ.

ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನ

ತೋಟಗಾರಿಕಾ ಇಲಾಖೆ ಫಲಪುಷ್ಪ ಪ್ರದರ್ಶನ

ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಫಲ ಪುಷ್ಪ ಪ್ರದರ್ಶನ ಆಕರ್ಷಕವಾಗಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವಂತೆ ಮಾಡಿದ್ದು ವಿಶೇಷ. ತರಕಾರಿಯಲ್ಲಿ ಮಾಡಿದ ಗಣಪತಿ, ಸೌತೆಕಾಯಿಯಿಂದ ಮಾಡಿದ ಮಹಿಳೆಯರ ಗೊಂಬೆ, ಹಾಗಲೇ ಕಾಯಿಯಿಂದ ಮಾಡಿದ ಮೊಸಳೆ, ಚೆಂಡು ಹೂವಿನಿಂದ ಮಾಡಿದ ಉಗ್ರ ನರಸಿಂಹನ ಮೂರ್ತಿ, ವಿವಿಧ ಪುಷ್ಪ್ಪಗಳಿಂದ ಮಾಡಿದ ಆನೆಗಳು, ನವಿಲು ಇತರ ಪಕ್ಷಿಗಳು ಹಾಗೂ ಮಳಿಗೆಯ ಮಧ್ಯೆ ಫಲಪುಷ್ಪಗಳಿಂದ ಮಾಡಲಾಗಿದ್ದ ಶ್ರೀ ಕೃಷ್ಣದೇವರಾಯ ಪ್ರತಿಮೆ ನೋಡುಗರನ್ನು ತನ್ನಡೆಗೆ ಆಕರ್ಷಿಸುತ್ತಿದೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವಸ್ತು ಪ್ರದರ್ಶನ

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವಸ್ತು ಪ್ರದರ್ಶನ

ಹಂಪಿ ಉತ್ಸವಕ್ಕೆ ಆಗಮಿಸಿದ ಪ್ರವಾಸಗರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೈಗಾರಿಕಾ ಇಲಾಖೆ ವತಿಯಿಂದ ಕೈಗಾರಿಕೆ ಮತ್ತು ವಾಣಿಜ್ಯಗಳ ಕುರಿತು ಪ್ರದರ್ಶನ ಏರ್ಪಡಿಸಲಾಗಿತ್ತು.

ಅಂಚೆ ಇಲಾಖೆಯಿಂದ ಯೋಜನೆಗಳ ಮಾಹಿತಿ

ಅಂಚೆ ಇಲಾಖೆಯಿಂದ ಯೋಜನೆಗಳ ಮಾಹಿತಿ

ಅಂಚೆ ಇಲಾಖೆಯಿಂದ ಅಟಲ್ ಪೆನಷನ್ ಯೋಜನೆ, ಕಾರ್ಮಿಕ ವರ್ಗದವರೆಗೆ ಹಾಗೂ ಸುಕನ್ಯ ಸಮೃದ್ಧಿ ಯೋಜನೆ, ಹೆಣ್ಣು ಮಕ್ಕಳ ರಕ್ಷಣೆಯ ಬಗ್ಗೆ ಹಾಗೂ ಮೈ ಸ್ಟಾಂಪ್ (ನಮ್ಮ ಭಾವಚಿತ್ರವನ್ನು) ಕುರಿತು ಮಾಹಿತಿಯನ್ನು ಈ ಮಳಿಗೆಯಲ್ಲಿ ಏರ್ಪಡಿಸಲಾಗಿತ್ತು.

ವೀಕ್ಷಿಸಿದ ಅನೇಕ ಜನರು ಈ ರೀತಿಯ ಮಳಿಗೆಗಳನ್ನು ಸ್ಥಾಪಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ತಾಣಗಳ ಚಿತ್ರಪಟ

ಪ್ರವಾಸೋದ್ಯಮ ಇಲಾಖೆಯಿಂದ ತಾಣಗಳ ಚಿತ್ರಪಟ

ಹಂಪಿ ವಿರೂಪಾಕ್ಷ ದೇವಾಲಯ, ಮೈಸೂರು ಅರಮನೆ, ಗೊಮ್ಮಟೇಶ್ವರ ಮೂರ್ತಿ, ಬೀದರ ಕೋಟೆ ಸೇರಿದಂತೆ ರಾಜ್ಯದ ವಿವಿಧ ಪ್ರವಾಸೋದ್ಯಮ ತಾಣಗಳ ವಿವರಣಾತ್ಮಕ ಚಿತ್ರಪಟಗಳನ್ನು ಪ್ರವಾಸೋದ್ಯಮ ಇಲಾಖೆಯ ಮಳಿಗೆಯಲ್ಲಿ ಏರ್ಪಡಿಸಲಾಗಿತ್ತು. ಜೋಗಜಲಪಾತವು ಜನರ ಮನಸೆಳೆಯುವ ಕೇಂದ್ರವಾಗಿತ್ತು.

ಕೃಷಿ ವಸ್ತು ಪ್ರದರ್ಶನ ಮಳಿಗೆ

ಕೃಷಿ ವಸ್ತು ಪ್ರದರ್ಶನ ಮಳಿಗೆ

ನೀರಾವರಿ ಇಲಾಖೆಗೆ ಸಂಬಂಧಿಸಿದ ಹನಿ ನೀರಾವರಿ ಉಪಯೋಗಗಳ ಕುರಿತು ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ವಿವಿಧ ಮೀನಿನ ತಳಿಗಳಾದ ಕಾಂಡ್ಲಾ, ರೋಹು, ಮೃಣಾಲ್ ತಳಿಗಳನ್ನು ಈ ಮಳಿಗೆಯಲ್ಲಿ ಪ್ರದರ್ಶೀಸಲಾಗಿತ್ತು.

ಸಬ್ಸಿಡಿ ದರದಲ್ಲಿ ದೊರಕುವ ಕೃಷಿ ಉಪಕರಣ ಕುರಿತ ಮಾಹಿತಿಯನ್ನು ಈ ಮಳಿಗೆಗಳಲ್ಲಿ ಅಳವಡಿಸಲಾಗಿದೆ.

ಸಾವಯವ ಕೃಷಿ ಹಾಗೂ ಎರೆಹುಳು ಗೊಬ್ಬರದ ಕುರಿತು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಮಾಹಿತಿಯನ್ನು ನೀಡಲಾಯಿತು.

English summary
‘Janapada Vahini’, a colourful procession of folk artistes, was taken out on the concluding day of three-day Hampi Utsav on Saturday. Thousands of people from within and outside the district witnessed the procession that began from Uddhana Veerbhadra Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X