ಬಳ್ಳಾರಿ-ಹೊಸಪೇಟೆ 4 ಪಥದ ರಸ್ತೆಗೆ ಕೇಂದ್ರದ ಒಪ್ಪಿಗೆ

Posted By:
Subscribe to Oneindia Kannada

ಬಳ್ಳಾರಿ, ಏಪ್ರಿಲ್ 07 : ಬಳ್ಳಾರಿ ಭಾಗದ ಜನರಿಗೆ ಕೇಂದ್ರ ಸರ್ಕಾರ ಯುಗಾದಿ ಕೊಡುಗೆ ನೀಡಿದೆ. ಬಳ್ಳಾರಿ-ಹೊಸಪೇಟೆ ನಡುವೆ 4 ಪಥದ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಸುಮಾರು 1,621 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 4 ಪಥದ ರಸ್ತೆ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಹೊಸಪೇಟೆ-ಬಳ್ಳಾರಿ ಮೂಲಕ ಆಂಧ್ರಪ್ರದೇಶ ಗಡಿಯ ತನಕ ಸಾಗುವ ರಾಷ್ಟ್ರೀಯ ಹೆದ್ದಾರಿ 63ರ ಈ ರಸ್ತೆಯನ್ನು 4 ಪಥವಾಗಿ ಪರಿವರ್ತಿಸಲಾಗುತ್ತದೆ. [ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]

narendra modi

ಸುಮಾರು 95.37 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣ ಯೋಜನೆಗೆ, 1621.96 ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಭೂಸ್ವಾಧೀನ, ಪುನರ್‌ವಸತಿ, ಪ್ರಾಥಮಿಕ ಕಾಮಗಾರಿ, ಪರಿಹಾರ ಎಲ್ಲವೂ ಸೇರಿ ಇಷ್ಟು ವೆಚ್ಚವಾಗಲಿದೆ. [ರಾಜ್ಯದ ರಸ್ತೆ ಯೋಜನೆಗಳಿಗೆ ನೆರವು ಕೇಳಿದ ಸಿದ್ದರಾಮಯ್ಯ]

ರಾಷ್ಟ್ರೀಯ ಹೆದ್ದಾರಿ 63ರ ಈ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲು ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. [ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cabinet Committee on Economic Affairs, chaired by the PM Narendra Modi, has given its approval for development of the 4 laning of the Hospet-Bellary-Andhra Pradesh Border section of National Highway 63 in Karnataka. The cost is estimated to be Rs 1621.96 core.
Please Wait while comments are loading...