ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮುಲು v/s ಡಿಕೆಶಿ: ಬಳ್ಳಾರಿಯಲ್ಲಿ ಬೀಳುವರು ಯಾರು, ಏಳುವರು ಯಾರು?

|
Google Oneindia Kannada News

Recommended Video

Bellary By-elections 2018 : ಬಳ್ಳಾರಿಯಲ್ಲಿ ಬಿ ಶ್ರೀರಾಮುಲು v/s ಡಿ ಕೆ ಶಿ | ಯಾರಿಗೆ ಸೋಲು? ಯಾರಿಗೆ ಗೆಲುವು?

ಬಳ್ಳಾರಿ, ಅಕ್ಟೋಬರ್ 30: ಉಪಚುನಾವಣೆ 2018ರ ಅತಿ ಪ್ರತಿಷ್ಠಿತ ಕಣವೆಂದರೆ ಅದುವೆ ಬಳ್ಳಾರಿ. ಲೋಕಸಭೆ ಸದಸ್ಯ ಸ್ಥಾನಕ್ಕಾಗಿ ಬಿಜೆಪಿಯ ಜೆ.ಶಾಂತಾ ಹಾಗೂ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರು ಕಣದಲ್ಲಿದ್ದಾರೆ. ಆದರೆ ನಿಜವಾದ ಸ್ಪರ್ಧೆ ನಡೆದಿರುವುದು ಶ್ರೀರಾಮುಲು ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ.

ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರವಾದ ಸ್ಥಾನವಾದ ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕೆಂಬ ಉದ್ದೇಶದಿಂದ ರಾಮುಲು ಅವರು ತಮ್ಮ ಸಹೋದರೆ ಕೆ.ಶಾಂತಾ ಅವರನ್ನು ಕಣಕ್ಕಿಳಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ದಿನೇ ದಿನೇ ಪ್ರಗತಿ ಸಾಧಿಸಿ ಹಿಂದುಳಿದ ನಾಯಕ ಪಟ್ಟದತ್ತ ದಾಪುಗಾಲು ಹಾಕುತ್ತಿರುವ ರಾಮುಲುರನ್ನು ಕಟ್ಟಿ ಹಾಕುವ ಸಲುವಾಗಿ ಕಾಂಗ್ರೆಸ್ ಪಕ್ಷವು ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ರಾಮುಲು ವೇಗಕ್ಕೆ ಬ್ರೇಕ್ ಹಾಕಲು ಬಳ್ಳಾರಿ ಉಸ್ತುವಾರಿಯನ್ನು ರಾಜಕೀಯ ಚತುರ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ಹಾಕಿದೆ.

ಮಂಡ್ಯ ಉಪ ಚುನಾವಣೆ : ಬಿಜೆಪಿ, ಜೆಡಿಎಸ್ ಬಲಾಬಲ ಮಂಡ್ಯ ಉಪ ಚುನಾವಣೆ : ಬಿಜೆಪಿ, ಜೆಡಿಎಸ್ ಬಲಾಬಲ

ಕಳೆದ ಮೂರು ಲೋಕಸಭಾ ಚುನಾವೆಯಲ್ಲಿ ಬಳ್ಳಾರಿಯಲ್ಲಿ ಬಿಜೆಪಿಯೇ ಗೆದ್ದಿದೆ. ರಾಮುಲು, ಕರುಣಾಕರ ರೆಡ್ಡಿ ಮತ್ತು ಈಗಿನ ಅಭ್ಯರ್ಥಿ ಕೆ.ಶಾಂತಾ ಒಂದು ಬಾರಿ ಗೆದ್ದಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿಯ ಪಾರಮ್ಯ ಇಲ್ಲಿ ಕಾಣುತ್ತದೆಯಾದರೂ ಈ ಉಪಚುನಾವಣೆಯ ಲೆಕ್ಕಾಚಾರ ಕೇವಲ ಪಕ್ಷದ ಚಿಹ್ನೆಯ ಮೇಲೆ ನಡೆಯುತ್ತಿಲ್ಲವೆಂಬುದು ಗಮನಿಸಬೇಕಾದ ಅಂಶ.

ಬಳ್ಳಾರಿ ಚುನಾವಣೆ ಮುನ್ನೆಲೆಯ ವಿಷಯಗಳು

ಬಳ್ಳಾರಿ ಚುನಾವಣೆ ಮುನ್ನೆಲೆಯ ವಿಷಯಗಳು

ಬಳ್ಳಾರಿ ಚುನಾವಣೆ ಕಾಂಗ್ರೆಸ್-ಬಿಜೆಪಿ ನಡುವಿನ ಚುನಾವಣೆ ಮಾತ್ರವೇ ಅಲ್ಲ. ಇಲ್ಲಿ ಜಾತಿ, ಸ್ಥಳೀಯತೆ, ಹಣ, ಪ್ರಭಾವಗಳೆಲ್ಲವೂ ಚುನಾವಣೆಯಲ್ಲಿ ಪರಿಗಣಿತವಾಗುತ್ತಿವೆ ಜೊತೆಗೆ ಅಭಿವೃದ್ಧಿಯೂ ಅಲ್ಪ ಸ್ವಲ್ಪ ಪರಿಗಣೆನೆಗೆ ಒಳಪಡುತ್ತಿದೆ. ಆದರೆ ಬಳ್ಳಾರಿ ಉಪಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ವಿಷಯವೆಂದರೆ ಜಾತಿ ಮತ್ತು ಸ್ಥಳೀಯತೆ.

ರಾಮನಗರ ಉಪ ಚುನಾವಣೆ : ಜೆಡಿಎಸ್, ಬಿಜೆಪಿ ಬಲಾಬಲವೇನು?ರಾಮನಗರ ಉಪ ಚುನಾವಣೆ : ಜೆಡಿಎಸ್, ಬಿಜೆಪಿ ಬಲಾಬಲವೇನು?

ಕೆ.ಶಾಂತಾ ಮತ್ತು ಉಗ್ರಪ್ಪ: ತುಲನೆ

ಕೆ.ಶಾಂತಾ ಮತ್ತು ಉಗ್ರಪ್ಪ: ತುಲನೆ

ಕೆ.ಶಾಂತಾ ಒಮ್ಮೆ ಇದೇ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆ ಆಗಿದ್ದಾರೆ ಆದರೂ ಅವರು ಪ್ರಬುದ್ಧ ರಾಜಕಾರಣಿ ಅಲ್ಲ. ರಾಮುಲು ಅವರ ಸಹೋದರಿ ಎಂಬ ಕಾರಣಕ್ಕೆ ರಾಜಕಾರಣದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ವಕೀಲಿಕೆ ಕಲಿತಿರುವ ಉಗ್ರಪ್ಪ ಅವರು ಉತ್ತಮ ರಾಜಕಾರಣಿ ಎಂದು ಹೆಸರು ಗಳಿಸಿದವರು. ಆದರೆ ಅವರು ಮಾಸ್ ಲೀಡರ್ ಅಲ್ಲ ಎಂಬ ಕೊಂಕು ಬೆನ್ನಿಗಿದೆ. ಉಗ್ರಪ್ಪ ಅವರು ಈ ವರೆಗೆ ಒಂದೂ ಚುನಾವಣೆ ಗೆದ್ದಿಲ್ಲ ಎಂಬ ಕು-ಇತಿಹಾಸ ಸಹ ಅವರಿಗಿದೆ.

ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲುಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು

ಚುನಾವಣಾ ವಿಷಯಗಳು ಏನೇನು?

ಚುನಾವಣಾ ವಿಷಯಗಳು ಏನೇನು?

ರಾಜ್ಯದಲ್ಲಿ ಯಾವುದೇ ಚುನಾವಣೆ ಆದರೂ ಮೊದಲು ಚರ್ಚೆಗೆ ಬರುವುದು ಜಾತಿಯೇ. ಇಲ್ಲಿಯೂ ಸಹ ಜಾತಿಯೇ ಮೊದಲ ಆದ್ಯತೆ ಆಗಿಬಿಟ್ಟಿರುವುದು ದೌಭಾಗ್ಯ. ಇಬ್ಬರೂ ನಾಯಕ ಸಮುದಾಯದವರೇ ಸ್ಪರ್ಧೆಗೆ ಇಳಿದಿದ್ದಾರಾದರೂ, ಸ್ಪರ್ಧಿಗಳ ಹಿಂದಿರುವ ಗಾಡ್‌ಫಾದರ್‌ಗಳ ಜಾತಿಗಳೂ ಪ್ರಚಾರ ಸಂದರ್ಭದಲ್ಲಿ ಚರ್ಚೆಗೆ ಬರುತ್ತಿರುವುದು ವಿಪರ್ಯಾಸ. ನಾಯಕ ಸಮುದಾಯವನ್ನು ಅವಮಾನಿಸಿದ್ದೀರಿ ಎಂದು ರಾಮುಲು ಸಿದ್ದರಾಮಯ್ಯ ಅವರನ್ನು ಕೇಳಿದರೆ. ನನ್ನನ್ನು ಬೈದರೆ ಕುರುಬ ಸಮುದಾಯವನ್ನು ಬೈದಂತೆಯೇ ಎಂದು ಎದಿರೇಟು ಕೊಟ್ಟಿದ್ದಾರೆ.

ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲುಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು

ಸ್ಥಳೀಯತೆಯ ವಿಷಯ ಚರ್ಚೆ

ಸ್ಥಳೀಯತೆಯ ವಿಷಯ ಚರ್ಚೆ

ಕೆ.ಶಾಂತಾ ಅವರು ಬಳ್ಳಾರಿಯವರು ಹಾಗಾಗಿ ಬಿಜೆಪಿಯು ತನ್ನ ಪ್ರಚಾರದಲ್ಲಿ ಆ ವಿಷಯವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದೆ. ಮತ್ತು ಅದರ ಲಾಭವೂ ಅಲ್ಪ ಮಟ್ಟಿದೆ ಬಿಜೆಪಿಗೆ ದೊರಕುವ ಸಾಧ್ಯತೆ ಇದೆ. ಆದರೆ ಸ್ಥಳೀಯತೆ ವಿಷಯವನ್ನು ಚಿತ್‌ ಮಾಡುವಲ್ಲಿ ಕಾಂಗ್ರೆಸ್ ಸಹ ಹಲವು ಯತ್ನಗಳನ್ನು ಮಾಡಿದ್ದು, ಈ ಹಿಂದೆ ಇದೇ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಸುಷ್ಮಾಸ್ವರಾಜ್ ಇಲ್ಲಿನವರೇ ಎಂದು ಪ್ರಶ್ನೆ ಮಾಡಿದೆ. ಅಷ್ಟೆ ಅಲ್ಲ ರಾಮುಲು ಸಹ ಆಂಧ್ರಪ್ರದೇಶದವರು ಎಂದು ಕಾಂಗ್ರೆಸ್ ತಿರುಗೇಟು ನೀಡುತ್ತಿದೆ.

ಮಂಡ್ಯ ಉಪ ಚುನಾವಣೆ : ಜೆಡಿಎಸ್-ಕಾಂಗ್ರೆಸ್‌ ಮುನಿಸು ಬಿಜೆಪಿಗೆ ಸೊಗಸು?ಮಂಡ್ಯ ಉಪ ಚುನಾವಣೆ : ಜೆಡಿಎಸ್-ಕಾಂಗ್ರೆಸ್‌ ಮುನಿಸು ಬಿಜೆಪಿಗೆ ಸೊಗಸು?

ದಿಗ್ಗಜರು ಕತ್ತಿ ಬೀಸುತ್ತಿರುವ ಅಂಗಳ

ದಿಗ್ಗಜರು ಕತ್ತಿ ಬೀಸುತ್ತಿರುವ ಅಂಗಳ

ಸ್ವಾತಂತ್ರ್ಯ ಬಂದಾಗಿನಿಂದ 2000 ದ ವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿದೆ. ಹಾಗಾಗಿ ಮತ್ತೆ ಈ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಹಾಗೂ ರಾಮುಲುಗೆ ಲಗಾಮು ಹಾಕಲು ಕಾಂಗ್ರೆಸ್‌ನ ದಿಗ್ಗಜರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಈ ಯುದ್ಧವನ್ನು ಮುನ್ನಡೆಸುತ್ತಿದ್ದಾರೆ. ಹಲವು ಶಾಸಕರು, ಮಾಜಿ ಶಾಸಕರು, ಮಂತ್ರಿಗಳು ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ ದಿಗ್ಗಜರು ಬೀಸುತ್ತಿರುವ ಕತ್ತಿಗೆ ರಾಮುಲು ಸಿಗುತ್ತಾರೆಯೇ ಎಂಬುದು ಕಾದು ನೋಡಬೇಕು.

ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು?ಜಮಖಂಡಿ ಉಪ ಚುನಾವಣೆ : ಕಾಂಗ್ರೆಸ್‌, ಬಿಜೆಪಿ ಬಲಾಬಲವೇನು?

ಬಳ್ಳಾರಿಯ ಐದು ವಿಧಾನಸಭೆ ಕಾಂಗ್ರೆಸ್‌ ತೆಕ್ಕೆಯಲ್ಲಿ

ಬಳ್ಳಾರಿಯ ಐದು ವಿಧಾನಸಭೆ ಕಾಂಗ್ರೆಸ್‌ ತೆಕ್ಕೆಯಲ್ಲಿ

ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹಾಗಾಗಿ ಬಿಜೆಪಿಗೆ ಇದು ಸುಲಭದ ಉಪಚುನಾವಣೆಯಂತೂ ಅಲ್ಲ. ಪ್ರತಿ ಕ್ಷೇತ್ರಕ್ಕೂ ಸಚಿವರನ್ನು ಉಸ್ತುವಾರಿಗಳನ್ನಾಗಿ ಮಾಡಿ 'ಮೈಕ್ರೋ' ರಣತಂತ್ರವನ್ನು ಡಿ.ಕೆ.ಶಿವಕುಮಾರ್‌ ಬಳಸುತ್ತಿದ್ದಾರೆ ಹಾಗಾಗಿ ಬಿಜೆಪಿ ಗೆಲ್ಲಲು ಡಿ.ಕೆ.ಶಿವಕುಮಾರ್ ರಣತಂತ್ರವನ್ನು ಬೇಧಿಸಬೇಕಾಗುತ್ತದೆ.

ಶಿವಮೊಗ್ಗ ಉಪ ಚುನಾವಣೆ : ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ!ಶಿವಮೊಗ್ಗ ಉಪ ಚುನಾವಣೆ : ಬಿಜೆಪಿಗೆ ಗೆಲುವು ಅಷ್ಟು ಸುಲಭವಲ್ಲ!

ಕಾಂಗ್ರೆಸ್‌ಗೆ ಬಂಡಾಯದ ಬೇಗುದಿ

ಕಾಂಗ್ರೆಸ್‌ಗೆ ಬಂಡಾಯದ ಬೇಗುದಿ

ಬಳ್ಳಾರಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಸಹ ಲೋಕಸಭೆ ಟಿಕೆಟ್‌ ವಿಷಯವಾಗಿ ಅವರು ಅಸಮಧಾನ ಹೊಂದಿದ್ದಾರೆ. ಪ್ರಚಾರ ಆರಂಭದ ಸಮಯದಲ್ಲಿಯೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಅಸಮಾಧಾನ ಸರಿ ಮಾಡಿದರಾದರೂ ಪೂರ್ಣ ಮನಸ್ಸಿನಿಂದ ಪ್ರಚಾರ ಮಾಡುತ್ತಿಲ್ಲ ಎಂಬ ಮಾತುಗಳಿವೆ. ಅಲ್ಲದೆ ಕಾಂಗ್ರೆಸ್‌ನ ಒಳಜಗಳಗಳು ಸಹ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ.

ಬಿಜೆಪಿಗೂ ಇವೆ ಸಮಸ್ಯೆಗಳು

ಬಿಜೆಪಿಗೂ ಇವೆ ಸಮಸ್ಯೆಗಳು

ಬಳ್ಳಾರಿಯ ಅನಭಿಷಿಕ್ತ ದೊರೆಯಂತೆ ರೆಡ್ಡಿ ಸಹೋದರರು ಮತ್ತು ಅರ ಪ್ರಿಯ ಮಿತ್ರ ಶ್ರೀರಾಮುಲು ಮೆರೆದ ದಿನಗಳು ಈಗ ಇತಿಹಾಸ. ಈ ಸರ್ವಾಧಿಕಾರದ ವಿರುದ್ಧ ಧನಿ ಎತ್ತುತ್ತಿರುವ ಸಮುದಾಯ ಈಗೀಗ ಬಲಗೊಳ್ಳುತ್ತಿದೆ. ಅಲ್ಲದೆ ಜನಾರ್ಧನ ರೆಡ್ಡಿ ನೇರ ಬೆಂಬಲ ಇಲ್ಲದಿರುವುದು ಸಹ ಬಿಜೆಪಿಗೆ ಋಣಾತ್ಮಕವೇ. ಜೊತೆಗೆ ರಾಮುಲು ಅವರು ಬಳ್ಳಾರಿಯಲ್ಲಿ ಒಂಟಿ ಆಗಿದ್ದಾರೆ ಎನ್ನಲಾಗುತ್ತಿದೆ. ಪ್ರಮುಖ ನಾಯಕರುಗಳು ಬಳ್ಳಾರಿಗೆ ಪ್ರಚಾರದಿಂದ ದೂರ ಉಳಿದಿದ್ದಾರೆ ಇದು ಸಹ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.

English summary
Bellary Lok Sabha by election is tough one in by election 2018. Sriramulu's sister J Shantha is BJP's candidate and Ugrappa is congress candidate. DK Shivakumar is congress in charge for Bellary election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X