ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ: ಬಳ್ಳಾರಿ ಟಿಕೆಟ್‌ ಗೊಂದಲ, ಸಿದ್ದರಾಮಯ್ಯ ಮಧ್ಯ ಪ್ರವೇಶ

|
Google Oneindia Kannada News

ಬಳ್ಳಾರಿ, ಅಕ್ಟೋಬರ್ 12: ಇತ್ತೀಚೆಗಷ್ಟೆ ತಮ್ಮನ್ನು ತಾವು 'ನಾನು ಮೈತ್ರಿ ಸರ್ಕಾರದ ಟ್ರಬಲ್ ಶೂಟರ್' ಎಂದು ಕರೆದುಕೊಂಡಿದ್ದ ಸಿದ್ದರಾಮಯ್ಯ ಟ್ರಬಲ್‌ಶೂಟಿಂಗ್‌ಗೆ ಮುಂದಾಗಿದ್ದಾರೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಕಾಂಗ್ರೆಸ್‌ನ ಸಾಮರಸ್ಯ ಕೆಟ್ಟಿರುವ ಕಾರಣ ಬಳ್ಳಾರಿಯತ್ತ ಪ್ರಯಾಣ ಬೆಳೆಸಿರುವ ಸಿದ್ದರಾಮಯ್ಯ ಇಂದು ಬಳ್ಳಾರಿ ಕಾಂಗ್ರೆಸ್‌ ಶಾಸಕರ ಹಾಗೂ ಮುಖಂಡರ ಸಭೆ ನಡೆಸಿದರು.

ಉಪ ಚುನಾವಣೆ : ಕಗ್ಗಂಟಾದ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ!ಉಪ ಚುನಾವಣೆ : ಕಗ್ಗಂಟಾದ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ!

ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ಅವರ ಇದ್ದರೂ ಸಹ ಸಮಸ್ಯೆ ಸರಿಹೋಗುತ್ತಿಲ್ಲ ಹಾಗಾಗಿ ಸಿದ್ದರಾಮಯ್ಯ ಕಣಕ್ಕಿಳಿದಿದ್ದಾರೆ. ನಾಳೆ ಅಥವಾ ಭಾನುವಾರ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ.

ಸಚಿವ ಸ್ಥಾನಕ್ಕೆ ಪಟ್ಟು

ಸಚಿವ ಸ್ಥಾನಕ್ಕೆ ಪಟ್ಟು

ಬಳ್ಳಾರಿಯಲ್ಲಿ ಐದು ಕಾಂಗ್ರೆಸ್ ಶಾಸಕರಿದ್ದಾರೆ ಅಷ್ಟರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದರೆ ಮಾತ್ರವೇ ಚುನಾವಣೆಯಲ್ಲಿ ಸಕ್ರಿಯವಾಗುವುದಾಗಿ ಶಾಸಕರು ಪಟ್ಟು ಹಿಡಿದಿದ್ದಾರೆ ಅಲ್ಲದೆ ಅಲ್ಲಿ ಆಕಾಂಕ್ಷಿಗಳು ಸಹ ಹೆಚ್ಚಿಗಿದ್ದಾರೆ.

ಶಾಸಕರನ್ನು ಒಲಿಸಿಕೊಳ್ಳಲು ಡಿ.ಕೆ.ಶಿ ವಿಫಲ

ಶಾಸಕರನ್ನು ಒಲಿಸಿಕೊಳ್ಳಲು ಡಿ.ಕೆ.ಶಿ ವಿಫಲ

ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ಲೋಕಸಭೆ ಉಪಚುನಾವಣೆ ಉಸ್ತುವಾರಿ ಆಗಿದ್ದರು. ಆದರೆ ಅವರು ಶಾಸಕರನ್ನು ಒಲಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿತ್ತು ಹಾಗಾಗಿ ಇಂದು ಸಿದ್ದರಾಮಯ್ಯ ಅವರೇ ಬಳ್ಳಾರಿಗೆ ತೆರಳಿ ಸ್ಥಳೀಯ ಮುಖಂಡರು ಹಾಗೂ ಶಾಸಕರೊಂದಿಗೆ ಮಾತನಾಡಿದ್ದಾರೆ.

ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು ಸಂಪುಟ ವಿಸ್ತರಣೆ ವಿಳಂಬ:ಉಪಚುನಾವಣೆಯಲ್ಲಿ 'ಕೈ' ಕೊಡಲಿದ್ದಾರಾ ಶಾಸಕರು

ಸಿದ್ದರಾಮಯ್ಯ ಕರೆಗೆ ಓಗೊಟ್ಟ ಶಾಸಕರು

ಸಿದ್ದರಾಮಯ್ಯ ಕರೆಗೆ ಓಗೊಟ್ಟ ಶಾಸಕರು

ಇಂದಿನ ಸಭೆ ಪೂರ್ಣ ಫಲಪ್ರಧವಾಗದಿದ್ದರೂ ಸಹಿತ ಶಾಸಕರೆಲ್ಲಾ ಒಟ್ಟಾಗಿ ಸಭೆಗೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎನ್ನಲಾಗಿದೆ. ಈ ಹಿಂದೆ ಡಿ.ಕೆ.ಶಿ ಕರೆದಿದ್ದ ಸಭೆಗೆ ಮೂರು ಜನ ಶಾಸಕರು ಗೈರಾಗಿ ಅಸಮಾಧಾನ ಹೊರಹಾಕಿದ್ದರು. ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ಅನಿಲ್‌ ಲಾಡ್‌ ಅವರು ಗೈರಾಗಿದ್ದರು. ಶಾಸಕ ಸ್ಥಾನದಲ್ಲಿ ಇಲ್ಲದ ಹಾಗೂ ಕೇಂದ್ರ ಸ್ಥಾನದಿಂದ ದೂರ ಉಳಿದಿರುವ ಅವರ ಹಾಜರಿ ಕಡ್ಡಾಯವಾಗಿಯೇನು ಇರಲಿಲ್ಲ ಎನ್ನಲಾಗಿದೆ.

ಶ್ರೀರಾಮುಲು ಒಬ್ಬ ದುರ್ಬಲ ನಾಯಕ: ಅನಿಲ್ ಲಾಡ್ ವಾಗ್ದಾಳಿಶ್ರೀರಾಮುಲು ಒಬ್ಬ ದುರ್ಬಲ ನಾಯಕ: ಅನಿಲ್ ಲಾಡ್ ವಾಗ್ದಾಳಿ

ಡಿ.ಕೆ.ಶಿವಕುಮಾರ್ vs ಶ್ರೀರಾಮುಲು

ಡಿ.ಕೆ.ಶಿವಕುಮಾರ್ vs ಶ್ರೀರಾಮುಲು

ಬಳ್ಳಾರಿ ಲೋಕಸಭೆ ಉಪಚುನಾವಣೆಯನ್ನು ಡಿ.ಕೆ.ಶಿವಕುಮಾರ್‌ vs ಶ್ರೀರಾಮುಲು ಎಂದೇ ಹೇಳಲಾಗುತ್ತಿದೆ. ಬಿಜೆಪಿಯಿಂದ ರಾಮುಲು ಅವರ ಸಹೋದರಿ ಶಾಂತಾ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಬಿಜೆಪಿ ಕಡೆಯಿಂದ ಬಳ್ಳಾರಿ ಉಪಚುನಾವಣೆಯ ಉಸ್ತುವಾರಿಯನ್ನು ಶ್ರೀರಾಮುಲು ಅವರೇ ವಹಿಸಿಕೊಂಡಿದ್ದಾರೆ ಹಾಗಾಗಿ ಈ ಕ್ಷೇತ್ರ ಜಿದ್ದಾಜಿದ್ದಿ ಎನಿಸಿದೆ.

ಬಳ್ಳಾರಿ ಉಪಚುನಾವಣೆ: ಡಿಕೆಶಿ ವಿರುದ್ದ ತೊಡೆತಟ್ಟಿದ ಶ್ರೀರಾಮುಲುಬಳ್ಳಾರಿ ಉಪಚುನಾವಣೆ: ಡಿಕೆಶಿ ವಿರುದ್ದ ತೊಡೆತಟ್ಟಿದ ಶ್ರೀರಾಮುಲು

English summary
Siddaramaiah today had meeting with Ballary dissident congress MLAs. Congress facing problems in announcing Ballary MP candidate. There is s many aspirants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X