ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಂಡತಿ, ಮಕ್ಕಳಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದಾರೆ ಕೈ ಅಭ್ಯರ್ಥಿ ಉಗ್ರಪ್ಪ!

|
Google Oneindia Kannada News

Recommended Video

Bellary Lok Sabha By-elections 2018 : ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪನವರ ಆಸ್ತಿ ವಿವರ

ಬಳ್ಳಾರಿ, ಅಕ್ಟೋಬರ್ 17: ಬಳ್ಳಾರಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್‌ ಪಕ್ಷದಿಂದ ಅಚ್ಚರಿಯ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪ ಕಣಕ್ಕಿಳಿದಿದ್ದಾರೆ.

ಸ್ಥಳೀಯರಾದ ರಾಮುಲು ಅವರ ಸಹೋದರಿ ಜೆ.ಶಾಂತಾ ಅವರ ವಿರುದ್ಧ ಉಗ್ರಪ್ಪ ಅವರು ಸ್ಪರ್ಧಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಉಗ್ರಪ್ಪ ಬೆನ್ನಿಗೆ ನಿಂತಿದ್ದು ಅವರನ್ನು ಗೆಲ್ಲಿಸಿಯೇ ತೀರುವೆಂದು ಹಠಕ್ಕೆ ಬಿದ್ದಿದ್ದಾರೆ.

ಮೈಸೂರು ದಸರಾ - ವಿಶೇಷ ಪುರವಣಿ

ಬಳ್ಳಾರಿ ಉಪಚುನಾವಣೆ ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡಲೆ. ಮೊದಲಿಗೆ ಜಿಲ್ಲೆಯ ಅತೃಪ್ತ ಶಾಸಕರನ್ನು ಸರಿದಾರಿಗೆ ತರಬೇಕಾಯಿತು. ಆನಂತರ ಅಭ್ಯರ್ಥಿಯ ಆಯ್ಕೆ ಗೊಂದಲ, ಇದೀಗ ಪ್ರಚಾರದ ಗೊಂದಲ.

ಬಳ್ಳಾರಿ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ ವಿ.ಎಸ್.ಉಗ್ರಪ್ಪ!ಬಳ್ಳಾರಿ ಬಿಜೆಪಿ ನಾಯಕರ ಬಾಯಿ ಮುಚ್ಚಿಸಿದ ವಿ.ಎಸ್.ಉಗ್ರಪ್ಪ!

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಗ್ರಪ್ಪ ಕಣಕ್ಕೆ ಇಳಿದಿದ್ದರೂ ಸಹಿತ ನಿಜವಾದ ಅಗ್ನಿಪರೀಕ್ಷೆ ಇರುವುದು ಡಿ.ಕೆ.ಶಿವಕುಮಾರ್‌ ಗೆ ಉಗ್ರಪ್ಪ ಗೆದ್ದರೆ ಡಿ.ಕೆ.ಶಿ ಗೆದ್ದಂತೆ ಸೋತರೆ ಅದು ಡಿ.ಕೆ.ಶಿವಕುಮಾರ್‌ ಅವರ ಸೋಲೇ ಆಗಲಿದೆ.

ಉಗ್ರಪ್ಪ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ಒಟ್ಟು ನಾಲ್ಕು ನಾಮಪತ್ರಗಳನ್ನು ಅವರು ಸಲ್ಲಿಸಿದ್ದಾರೆ. ಅದರ ಜೊತೆ ವಿದ್ಯಾಭ್ಯಾಸ ಮಾಹಿತಿ, ಜಾತಿ ಪ್ರಮಾಣ ಪತ್ರ, ಆಸ್ತಿ ವಿವರ ಎಲ್ಲವನ್ನೂ ಸಲ್ಲಿಸಿದ್ದಾರೆ. ಉಗ್ರಪ್ಪ ಅವರ ಆಸ್ತಿ ವಿವಿರ ಇಲ್ಲಿ ನೀಡಲಾಗಿದೆ.

ಉಗ್ರಪ್ಪ ಅವರಿಗಿಂತ ಪತ್ನಿಯ ಆದಾಯವೇ ಹೆಚ್ಚು

ಉಗ್ರಪ್ಪ ಅವರಿಗಿಂತ ಪತ್ನಿಯ ಆದಾಯವೇ ಹೆಚ್ಚು

* ವಿ.ಎಸ್.ಉಗ್ರಪ್ಪ ಅವರ 2016-17 ನೇ ಸಾಲಿನ ವಾರ್ಷಿಕ ಆದಾಯ 4,77,600. ಅವರು ಎಂಎಲ್‌ಸಿ ಸಹ ಆಗಿದ್ದು, ಅದರಿಂದ ವಾರ್ಷಿಕ 4.80 ಲಕ್ಷ, ಕೃಷಿ ಮೂಲದಿಂದ 9 ಲಕ್ಷ ಹಾಗೂ ಬ್ಯಾಂಕ್ ಬಡ್ಡಿಯಿಂದ 2.60 ಲಕ್ಷ ಆದಾಯ ಬರುತ್ತದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.

* ಉಗ್ರಪ್ಪ ಅವರ ಮಡದಿ ಮಂಜುಳಾ ಅವರು ವೈದ್ಯರಾಗಿದ್ದ ಅವರ 2016-17ರ ಆದಾಯ ತೆರಿಗೆ ಲೆಕ್ಕಪತ್ರದಲ್ಲಿ 5,37,940 ಲಕ್ಷ ತೋರಿಸಿದ್ದಾರೆ. ಅವರಿಗೆ ಉದ್ಯೋಗದಿಂದ ವಾರ್ಷಿಕ 3 ಲಕ್ಷ ಆದಾಯ ಬಂದರೆ ಬಾಡಿಗೆಗಳಿಂದ 3 ಲಕ್ಷ ಆದಾಯ ಬರುತ್ತದೆ. ಬ್ಯಾಂಕ್ ಬಡ್ಡಿಯಿಂದ 23, 000 ಬರುತ್ತದೆ.

ಉಗ್ರಪ್ಪ ಅವರ ಕುಟುಂಬದ ಇರುವ ನಗದು

ಉಗ್ರಪ್ಪ ಅವರ ಕುಟುಂಬದ ಇರುವ ನಗದು

* ಉಗ್ರಪ್ಪ ಅವರ ಮೊದಲ ಮಗ ನಿತಿನ್‌ಗೆ ವಾರ್ಷಿಕ 3.92 ಲಕ್ಷ ಆದಾಯ ಬರುತ್ತಿದೆ. ಮಗಳು ದೀಪಿಕಾಗೆ ಯಾವುದೇ ಆದಾಯ ತೋರಿಸಿಲ್ಲ.

* ಉಗ್ರಪ್ಪ ಅವರ ಬಳಿ ಪ್ರಸ್ತುತ 1.80 ಲಕ್ಷ ನಗದಿದೆ. ಪತ್ನಿ ಬಳಿಯೂ ಅಷ್ಟೆ ನಗದಿದೆ. ಮಗನ ಬಳಿ 50 ಸಾವಿರ ಇದ್ದರೆ ಮಗಳು ದೀಪಿಕಾ ಬಳಿ 10 ಸಾವಿರ ನಗದಿದೆ.

* ಉಗ್ರಪ್ಪ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ 28.80 ಲಕ್ಷ ಹಣ ಇಟ್ಟಿದ್ದಾರೆ. ಪತ್ನಿ ಮಂಜುಳಾ 8.46 ಲಕ್ಷ ಹಣ ಇಟ್ಟಿದ್ದಾರೆ. ಮಗ ನಿತಿನ್ 12.38 ಲಕ್ಷ ಹಣ ಇರಿಸಿದ್ದಾರೆ. ಮಗಳು ದೀಪಿಕಾ ಖಾತೆಯಲ್ಲಿ 8.34 ಲಕ್ಷ ಹಣ ಇದೆ.

ಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರಬಳ್ಳಾರಿ ಉಪಚುನಾವಣೆ: ಶ್ರೀರಾಮುಲು ಸಹೋದರಿ ಶಾಂತಾ ಆಸ್ತಿ ವಿವರ

ಉಗ್ರಪ್ಪ ಕುಟುಂಬ ಮಾಡಿರುವ ಹೂಡಿಕೆ ಎಷ್ಟು?

ಉಗ್ರಪ್ಪ ಕುಟುಂಬ ಮಾಡಿರುವ ಹೂಡಿಕೆ ಎಷ್ಟು?

* ಉಗ್ರಪ್ಪ ಅವರು ಕೆಎಚ್‌ಬಿ ಯಲ್ಲಿ 10,000 ಸಾವಿರ ಹೂಡಿಕೆ ಮಾಡಿದ್ದಾರೆ ಅಷ್ಟೆ ಅವರಿಗೆ ಪಾಲಿಸಿ ಸಹ ಇಲ್ಲ. ಮಡದಿ ಮಂಜುಳಾ ಹೆಸರಲ್ಲಿ 11 ಸಾವಿರದ ಪಾಲಿಸಿ ಇದೆ. ಮಗ ನಿತಿನ್‌ ಫರ್ಸ್ಟ್‌ ಸ್ಪೇಸ್‌ ಫಿಟ್‌ನೆಸ್‌ಗೆ 93 ಲಕ್ಷ ಹೂಡಿಕೆ ಮಾಡಿದ್ದಾರೆ. ಸ್ವಾಭಿಮಾನಿ ವೇರ್‌ಹೌಸ್‌ಗೆ 1.65 ಕೋಟಿ ಬಂಡವಾಳ ಹೂಡಿದ್ದಾರೆ. ಮಗಳು ದೀಪಿಕಾ ಫರ್ಸ್ಟ್‌ ಸ್ಪೇಸ್‌ ಫಿಟ್‌ನೆಸ್‌ಗೆ 5 ಲಕ್ಷ ಹೂಡಿಕೆ ಮಾಡಿದ್ದಾರೆ. ಮಕ್ಕಳಿಬ್ಬರಿಗೂ ವಿಮೆ ಇದೆ.

ಹೆಂಡತಿ ಮಕ್ಕಳಿಗೇ ಸಾಲ ನೀಡಿದ್ದಾರೆ ಉಗ್ರಪ್ಪ

ಹೆಂಡತಿ ಮಕ್ಕಳಿಗೇ ಸಾಲ ನೀಡಿದ್ದಾರೆ ಉಗ್ರಪ್ಪ

* ಉಗ್ರಪ್ಪ ಅವರು ತಮ್ಮ ಹೆಂಡತಿಗೆ 65.80 ಲಕ್ಷ ಸಾಲ ನೀಡಿದ್ದಾರೆ. ಮಗ ನಿತಿನ್‌ಗೆ 49.60 ಲಕ್ಷ ಸಾಲ ನೀಡಿದ್ದಾರೆ. ಮಗಳು ದೀಪಿಕಾಗೆ 10 ಲಕ್ಷ ಸಾಲ ನೀಡಿದ್ದಾರೆ. ಜೊತೆಗೆ 6.43 ಲಕ್ಷ ಕಾರು ಸಾಲ ಉಗ್ರಪ್ಪ ಮೇಲಿದೆ. ಅಲ್ಲದೆ 98.30 ಲಕ್ಷ ಖಾಸಗಿಯವರಿಂದ ಸಾಲ ಪಡೆದಿದ್ದಾರೆ. ಒಟ್ಟು 1.04 ಲಕ್ಷ ಸಾಲ ಉಗ್ರಪ್ಪ ತಲೆ ಮೇಲಿದೆ.

* ಉಗ್ರಪ್ಪ ಅವರ ಮಡದಿ ಮಂಜುಳಾ ಅವರ ಮೇಲೆ 91.80 ಲಕ್ಷ ಸಾಲ ಇದೆ. ಅದರಲ್ಲಿ ಉಗ್ರಪ್ಪ ನೀಡಿರುವ 65.80 ಸೇರಿದೆ. ಜೊತೆಗೆ 26 ಲಕ್ಷ ಸಾಲವನ್ನು ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದಾರೆ. ಮಗ ನಿತಿನ್ ಕರ್ನಾಟಕ ಫೈನಾನ್ಸ್‌ ಕಾರ್ಪೊರೇಷನ್‌ನಿಂದ 1.14 ಕೋಟಿ ಸಾಲ ಪಡೆದಿದ್ದಾರೆ. ತಂದೆಯಿಂದ 49.60 ಲಕ್ಷ ಹಾಗೂ ಖಾಸಗಿ ವ್ಯಕ್ತಿಗಳಿಂದ 87 ಲಕ್ಷ ಸಾಲ ಪಡೆದಿದ್ದಾರೆ. ಒಟ್ಟು ಅವರ ಮೇಲೆ 2.50 ಕೋಟಿ ಸಾಲ ಇದೆ. ಮಗಳು ದೀಪಿಕಾ ಅಪ್ಪನಿಂದ 10 ಲಕ್ಷ ಸಾಲ ಪಡೆದಿದ್ದಾರೆ ಅಷ್ಟೆ.

ಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿಜಮಖಂಡಿ ಕ್ಷೇತ್ರದ ಕೈ ಅಭ್ಯರ್ಥಿ ಆಸ್ತಿ, ಆದಾಯ, ಶಿಕ್ಷಣ, ಪ್ರಕರಣಗಳ ಮಾಹಿತಿ

ಉಗ್ರಪ್ಪ ಕುಟುಂಬಕ್ಕಿರುವುದು ಒಂದೇ ಕಾರು!

ಉಗ್ರಪ್ಪ ಕುಟುಂಬಕ್ಕಿರುವುದು ಒಂದೇ ಕಾರು!

* ಉಗ್ರಪ್ಪ ಅವರ ಬಳಿ 35 ಲಕ್ಷ ಮೌಲ್ಯ ಟೊಯೊಟಾ ಫಾರ್ಚುನರ್ ಕಾರಿದೆ. ಅದರ 6 ಲಕ್ಷ ಸಾಲ ಇನ್ನೂ ಬಾಕಿ ಇದೆ. ಕುಟುಂಬದ ಇನ್ನಾರ ಹೆಸರಲ್ಲು ಕಾರಿಲ್ಲ.

* ಉಗ್ರಪ್ಪ ಅವರ ಬಳಿ 50,000 ಮೌಲ್ಯದ ಚಿನ್ನ ಇದೆ. ಪತ್ನಿ ಬಳಿ 8.5 ಲಕ್ಷ ಮೌಲ್ಯದ ಇನ್ನ. 7.50 ಲಕ್ಷದ ಬೆಳ್ಳಿ ಇದೆ. ಮಗನ ಬಳಿ 2.50 ಲಕ್ಷದ ಚಿನ್ನ, 50 ಸಾವಿರ ಮೌಲ್ಯದ ಬೆಳ್ಳಿ ಇದೆ. ಮಗಳ ಬಳಿ 5 ಲಕ್ಷದ ಚಿನ್ನ, 75,000 ಬೆಳ್ಳಿ ಇದೆ.

* ಉಗ್ರಪ್ಪ ಅವರ ಒಟ್ಟು ಚರಾಸ್ತಿ ಮೌಲ್ಯ 1.87 ಕೋಟಿ, ಪತ್ನಿ ಮಂಜುಳಾ ಅವರ ಚರಾಸ್ತಿ 22.38 ಲಕ್ಷ. ಮಗ ನಿತಿನ್ ಚರಾಸ್ತಿ 2.75 ಕೋಟಿ. ಮಗಳು ದೀಪಿಕಾ ಚರಾಸ್ತಿ ಮೌಲ್ಯ 19.26 ಲಕ್ಷ ಇದೆ.

ಉಗ್ರಪ್ಪ ಕುಟುಂಬದ ಸ್ಥಿರಾಸ್ತಿ ಎಷ್ಟು?

ಉಗ್ರಪ್ಪ ಕುಟುಂಬದ ಸ್ಥಿರಾಸ್ತಿ ಎಷ್ಟು?

* ಉಗ್ರಪ್ಪ ಅವರ ಬಳಿ 15.14 ಎಕರೆ ಕೃಷಿ ಜಮೀನಿದೆ ಇದರ ಇಂದಿನ ಮೌಲ್ಯ 40 ಲಕ್ಷ ಆಗುತ್ತದೆ. ಜೊತೆಗೆ 2.5 ಎಕರೆ ಕೃಷಿ ಯೇತರ ಪಿತ್ರಾರ್ಜಿತ ಜಮೀನಿದೆ. ಇದರ ಇಂದಿನ ಮೌಲ್ಯ 15 ಲಕ್ಷ ಆಗುತ್ತದೆ. ಮಗನ ಹೆಸರಲ್ಲಿ 3.9 ಎಕರೆ ಸ್ವಯಾರ್ಜಿತ ಕೃಷಿಯೇತರ ಜಮೀನಿಗೆ ಜೊತೆಗೆ ಒಂದು ಸೈಟಿದೆ ಇವರೆಡರ ಮೌಲ್ಯ 2.30 ಕೋಟಿ.

* ಹೆಂಡತಿ ಹೆಸರಲ್ಲಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 7.5 ಕೋಟಿ ಮೌಲ್ಯದ ಮನೆಯೊಂದಿದೆ. ಜೊತೆಗೆ ಹೆಂಡತಿ ಹೆಸರಲ್ಲಿ ನಿರ್ಮಾಣ ಹಂತದ ಮಳಿಗೆ/ಮನೆ ಒಂದಕ್ಕೆ 97 ಲಕ್ಷ ಬಂಡವಾಳ ಹೂಡಲಾಗಿದೆ.

ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ

ಸ್ಥಿರಾಸ್ತಿಯಲ್ಲಿ ಉಗ್ರಪ್ಪ ಹೆಂಡತಿಗಿಂತ ಬಡವ

ಸ್ಥಿರಾಸ್ತಿಯಲ್ಲಿ ಉಗ್ರಪ್ಪ ಹೆಂಡತಿಗಿಂತ ಬಡವ

* ಉಗ್ರಪ್ಪ ಅವರ ಸ್ಥಿರಾಸ್ತಿ ಮೌಲ್ಯ 55 ಲಕ್ಷ, ಮಡದಿ ಮಂಜುಳಾ ಅವರ ಸ್ಥಿರಾಸ್ತಿ ಮೌಲ್ಯ 7.50 ಕೋಟಿ, ಮಗ ನಿತಿನ್ ಅವರ ಆಸ್ತಿ 2.30 ಕೋಟಿ, ದೀಪಿಕಾ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ.

* ಉಗ್ರಪ್ಪ ಅವರ ಕುಟುಂಬದ ಒಟ್ಟು ಆಸ್ತಿ 15.38 ಕೋಟಿ. ಉಗ್ರಪ್ಪ ಅವರ ಕುಟುಂಬದಲ್ಲಿ ಅವರ ಮಗ ನಿತಿನ್ ಅವರೇ ಎಲ್ಲರಿಗಿಂತಲೂ ಶ್ರೀಮಂತರು. ಹೆಚ್ಚು ಸಾಲ ಇರುವುದು ಕೂಡ ಅವರದ್ದೇ.

* ಉಗ್ರಪ್ಪ ಅವರು ಬೆಂಗಳೂರು ವಿವಿಯಿಂದ ಕಾನೂನು ಪದವಿ ಪಡೆದಿದ್ದಾರೆ. ಅವರ ಮಡದಿ ಮಂಜುಳಾ ಅವರು ವೈದ್ಯ ವೃತ್ತಿ ಮಾಡುತ್ತಿದ್ದಾರೆ.

ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್

English summary
VS Ugrappa contesting from Bellary to lok sabha by election. He files nomination yesterday. DK Shivakumar is leading Ugrappa in the election. He is current MLC from congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X