ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಬೇಡಿ: ರಾಹುಲ್ ಗಾಂಧಿಗೆ ಬಿಎಸ್‌ವೈ ಎಚ್ಚರಿಕೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬಳ್ಳಾರಿ, ಜನವರಿ 06: ಲೋಕಸಭಾ ಚುನಾವಣೆಗೆ ಬಳ್ಳಾರಿಯಿಂದ ಚುನಾವಣೆಗೆ ನಿಲ್ಲುವ ಪ್ರಯತ್ನದಲ್ಲಿರುವ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದು, ಚುನಾವಣೆಗೆ ನಿಂತರೆ ಸೋಲು ಖಚಿತ ಎಂದಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರಂತೆ ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆಗೆ ನಿಂತು ಗೆಲ್ಲುವ ಪ್ರಯತ್ನದಲ್ಲಿದ್ದಾರೆ ಆದರೆ ಅವರು ಇಲ್ಲಿ ಚುನಾವಣೆಗೆ ನಿಂತರೆ ಒಂದು ಲಕ್ಷ ಮತಗಳ ಅಂತರದಿಂದ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ಸೋತು ಮನೆ ಸೇರಿದ್ಮೇಲೆ ರಾಜ್ಯಕ್ಕೆ ಅಚ್ಛೇದಿನ್: ಬಿಎಸ್ ವೈ

ರಾಹುಲ್ ಗಾಂಧಿ ಅವರು ಈ ಬಾರಿ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ ಹರಿದಾಡುತ್ತಿದೆ, ಹಾಗಾಗಿ ಯಡಿಯೂರಪ್ಪ ಅವರು ಈ ಮಾತು ಹೇಳಿದ್ದಾರೆ.

BS Yeddyurappa warned Rahul Gandhi to not contest election in Bellary

'ಸೋನಿಯಾ ಗಾಂಧಿ ಬಳ್ಳಾರಿಯಿಂದ ಗೆದ್ದು ನಂತರ ತಮ್ಮ ಕ್ಷೇತ್ರ ಅಮೇಥಿಯನ್ನು ಉಳಿಸಿಕೊಳ್ಳಲು ಇಲ್ಲಿ ರಾಜಿನಾಮೆ ಕೊಟ್ಟಿದ್ದರು ಅದನ್ನು ಇಲ್ಲಿಯ ಜನ ಮರೆತಿಲ್ಲ ಎಂದ ಅವರು, ರಾಜಿನಾಮೆ ಕೊಡುವ ಮುಂಚೆ ಇಲ್ಲಿನ ಜನಗಳ ಜೊತೆಗೆ ಸಂವಾದ ನಡೆಸಲಿಲ್ಲ, ರಾಜಿನಾಮೆ ಕೊಟ್ಟ ನಂತರ ಕ್ಷಮಾಪಣೆಯನ್ನೂ ಕೇಳಲಿಲ್ಲ ಎಂದು ಹರಿಹಾಯ್ದಿದ್ದಾರೆ.

ಸೋನಿಯಾ ಗಾಂಧಿ ಅವರು ಬಳ್ಳಾರಿ ಕ್ಷೇತ್ರಕ್ಕೆ ರಾಜಿನಾಮೆ ಕೊಟ್ಟ ಬಳಿಕ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆಂದು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಂಜೂರು ಮಾಡಿದ್ದ 3,300 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಕಾಂಗ್ರೆಸ್ ನವರು ಲೂಟಿ ಮಾಡಿದರು, ಜಿಲ್ಲೆಯನ್ನು ಅಧೋಗತಿಗೆ ಇಳಿಸಲು ಕಾಂಗ್ರೆಸ್ ಎಲ್ಲ ರೀತಿಯ ಯೋಗದಾನವನ್ನೂ ನೀಡಿದೆ ಎಂದು ಯಡಿಯೂರಪ್ಪ ಆರೋಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BS Yeddyurappa said if Rahul Gandhi contest in Bellary constituency for MP election he will loose by minimum 1 lakh vote. He also accused that congress member looted 3300 crore rupees allotted to Bellary district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ