ರಾಮಲಿಂಗಾ ರೆಡ್ಡಿ ಮಾಡಿರುವ ಆರೋಪವನ್ನು ಸಾಬೀತು ಮಾಡಲಿ: ಬಿಎಸ್‌ವೈ

Posted By: ಬಳ್ಳಾರಿ ಪ್ರತಿನಿಧಿ
Subscribe to Oneindia Kannada

ಬಳ್ಳಾರಿ, ಜನವರಿ 05: ಬಿಜೆಪಿ ಪಕ್ಷವು ಪಿಎಫ್‌ಐ ಜೊತೆ ಗುಪ್ತ ಸಂಬಂಧ ಹೊಂದಿದೆ ಎಂದು ಆರೋಪಿಸಿರುವ ರಾಮಲಿಂಗಾ ರೆಡ್ಡಿ ತಮ್ಮ ಆರೋಪವನ್ನು 24 ಗಂಟೆ ಒಳಗೆ ಸಾಬೀತು ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಲಿಂಗಾ ರೆಡ್ಡಿ ಅವರದ್ದು ಬೇಜವಾಬ್ದಾರಿ ಹೇಳಿಕೆ, ದೀಪಕ್ ರಾವ್‌ ಕೊಲೆ ಪ್ರಕರಣದಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಸದಸ್ಯರ ಕೈವಾಡವಿದೆ ಎಂಬ ಆರೋಪವೂ ಸುಳ್ಳು ಎಂದು ಅವರು ಹೇಳಿದರು.

ದೀಪಕ್ ಕೊಲೆ ಪ್ರಕರಣಕ್ಕೆ ರಾಜ್ಯ ಸರ್ಕಾರ ನ್ಯಾಯ ದೊರಕಿಸುವುದಿಲ್ಲವೆಂದೇ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕೆಂದು ರಾಜ್ಯದ ಸಂಸದರು‌ ಕೇಂದ್ರವನ್ನು ಆಗ್ರಹಿಸಿದ್ದಾರೆ ಎಂದರು.

ಪಿಎಫ್ ಐ ಸಂಘಟನೆ ಸದ್ಯ ಬ್ಯಾನ್ ಇಲ್ಲ: ರಾಮಲಿಂಗಾರೆಡ್ಡಿ

BS Yeddyurappa says Ramalinga Reddy should prove his allegation

ಮಹದಾಯಿ ವಿಚಾರವಾಗಿ ಸಿದ್ದರಾಮಯ್ಯ ಅವರ ಮೇಲೆ ಹರಿಹಾಯ್ದ ಅವರು 'ಮಹಾದಾಯಿ ವಿವಾದದ ಕುರಿತು ಸಿಎಂ ಸಿದ್ದರಾಮಯ್ಯ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಕುಡಿಯುವ ಸಲುವಾಗಿ ನೀರು ಕೊಡಲು ಸಿದ್ದ ಎಂಬ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಹೇಳಿಕೆಯನ್ನು ವಿರೋಧಿಸಿದ ಅಲ್ಲಿನ ಕಾಂಗ್ರೆಸ್ ಮುಖಂಡರ ಬಾಯಿ ಮುಚ್ಚಿಸದೇ ಸಿದ್ದರಾಮಯ್ಯ ಸುಮ್ಮನಿರುವುದು ಏಕೆ ಎಂದು ಪ್ರಶ್ನಿಸಿದರು.

ಪಿಎಫ್ಐ ಜತೆ ಬಿಜೆಪಿಗೆ ನಿಕಟ ಸಂಪರ್ಕ: ರಾಮಲಿಂಗಾ ರೆಡ್ಡಿ ಗಂಭೀರ ಆರೋಪ

ವಿವಾದಗಳಿರುವ ರಾಜ್ಯದ 100 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆಗೆ ಮುನ್ನ ಮರು ಸಮೀಕ್ಷೆ ನಡೆಯಲಿದೆ ಎಂದ ಅವರು ಜನವರಿ 28ರಂದು ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಪ್ರಧಾನಿ ಮೋದಿ ಬರಲಿದ್ದಾರೆ. ಜ.10ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಿತ್ರದುರ್ಗಕ್ಕೆ ಭೇಡಿ ನೀಡಲಿದ್ದಾರೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BS Yeddyurappa said allegation which made by Ramalinga Reddy that BJP has relation with PFI is completely false. Ramalinga Reddy should prove his allegation within 24 hours.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ