ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಡಿಕೆಶಿ ಬಳಿ ಹಣ ಬಲ ಇರಬಹುದು, ಬಳ್ಳಾರಿಯಲ್ಲಿ ಗೆಲುವು ನಮ್ಮದು'

|
Google Oneindia Kannada News

ಬಳ್ಳಾರಿ, ಅಕ್ಟೋಬರ್ 08 : 'ನಾಲ್ಕು ದಶಕದಿಂದ ಬಳ್ಳಾರಿ ಬಿಜೆಪಿಯ ಭದ್ರಕೋಟೆ. ಉಪ ಚುನಾವಣೆಗೆ 2 ದಿನದಲ್ಲಿ ಅಭ್ಯರ್ಥಿ ಅಂತಿಮಗೊಳ್ಳಲಿದೆ. ಈ ಚುನಾವಣೆ ಬಿಜೆಪಿ ಕಾಂಗ್ರೆಸ್ ನಡುವಿನ ಹೋರಾಟವಾಗಿದೆ' ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು.

ಬಳ್ಳಾರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಲೋಕಸಭೆ ಉಪ ಚುನಾವಣೆಗೆ 7 ರಿಂದ 8 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದರಲ್ಲಿ ಎನ್‌.ವೈ.ಸುಜಯ್ ಅವರು ಸಹ ಸೇರಿದ್ದಾರೆ. ನಾವು ರಾಜ್ಯಾಧ್ಯಕ್ಷರಿಗೆ ಪಟ್ಟಿ ತಲುಪಿಸುತ್ತೇವೆ' ಎಂದರು.

ಲೋಕಸಭಾ ಉಪಚುನಾವಣೆ: ಬಳ್ಳಾರಿ, ಶಿವಮೊಗ್ಗದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ?ಲೋಕಸಭಾ ಉಪಚುನಾವಣೆ: ಬಳ್ಳಾರಿ, ಶಿವಮೊಗ್ಗದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ?

BJP has stronghold in Ballari says B Sriramulu

'ಡಿ.ಕೆ.ಶಿವಕುಮಾರ್ ಅವರಿಗೆ ಎಷ್ಟೇ ಹಣ ಬಲ ಇರಬಹುದು. ಸರ್ಕಾರವೇ ಅವರ ಬಳಿ ಇರಬಹುದು. ಆದರೆ, ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ನಾನು ಪ್ರಚಾರ ನಡೆಸುತ್ತೇನೆ' ಎಂದರು.

ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ಸ್ವಂತ ಹಣ ಖರ್ಚುಮಾಡಲಿ: ಖರ್ಗೆಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಗಳು ಸ್ವಂತ ಹಣ ಖರ್ಚುಮಾಡಲಿ: ಖರ್ಗೆ

'ಬಳ್ಳಾರಿಯಲ್ಲಿ ನಡೆಯುವ ಉಪ ಚುನಾವಣೆ ಡಿಕೆಶಿ ವರ್ಸಸ್ ರಾಮುಲು ಅಲ್ಲ. ಬಿಜೆಪಿ ವರ್ಸ್‌ಸ್ ಕಾಂಗ್ರೆಸ್ ನಡುವಿನ ಹೋರಾಟ. 2019ರ ಚುನಾವಣೆಯಲ್ಲಿಯೂ ಮೋದಿ ಅವರು ಮತ್ತೆ ಪ್ರಧಾನಿ ಆಗ್ತಾರೆ. ಬಳ್ಳಾರಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಮನಗರ ಉಪ ಚುನಾವಣೆ : ಜೆಡಿಎಸ್ ಪಟ್ಟಿಗೆ 2 ಹೆಸರು ಸೇರ್ಪಡೆ!ರಾಮನಗರ ಉಪ ಚುನಾವಣೆ : ಜೆಡಿಎಸ್ ಪಟ್ಟಿಗೆ 2 ಹೆಸರು ಸೇರ್ಪಡೆ!

ಬಿ.ಶ್ರೀರಾಮುಲು ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಜಯಗಳಿಸಿ ಬಳ್ಳಾರಿಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಉಪ ಚುನಾವಣೆ ಎದುರಾಗಿದೆ. ನ.3ರಂದು ಚುನಾವಣೆ ನಡೆಯಲಿದ್ದು, ನ.6ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Ballari former MP and Molakalmuru BJP MLA B.Sriramulu said that, The BJP has its stronghold in Ballari district and it will face Lok Sabha by election. BJP v/s Congress fight in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X