ಬಳ್ಳಾರಿಯಲ್ಲಿ ಏಕಕಾಲಕ್ಕೆ ಜನಿಸಿದ ನಾಲ್ಕು ಮಕ್ಕಳ ಸಾವು

Written By: Basavaraj
Subscribe to Oneindia Kannada

ಬಳ್ಳಾರಿ, ಆಗಸ್ಟ್ 1: ಕಳೆದ ಗುರುವಾರ (ಜುಲೈ 27)ರಂದು ಬಳ್ಳಾರಿ ತಾಲೂಕಿನ ಎಮ್ಮಿಗನೂರು ಗ್ರಾಮದ ಗುಂಡೂರು ಬಸವರಾಜ ಅವರ ಮನೆಯಲ್ಲಿ ನೆಲೆಸಿದ್ದ ಸಂಭ್ರಮ ಕೇವಲ ಆರು ದಿನಗಳಲ್ಲಿ ಮಾಯವಾಗಿದೆ. ಅದ್ಯಾರ ದೃಷ್ಟಿ ತಾಕೀತೋ ಏನೋ, ಒಂದೇ ಬಾರಿ ನಾಲ್ಕು ಮಕ್ಕಳಿಗೆ (ಎರಡು ಗಂಡು. ಎರಡು ಹೆಣ್ಣು) ಜನ್ಮ ನೀಡಿದ್ದ ಬಸವರಾಜ ಅವರ ಪತ್ನಿ ಹುಲಿಗೆಮ್ಮ ಅವರ ಒಡಲು ಈಗ ಏಕಾಏಕಿ ಖಾಲಿಯಾಗಿದೆ.

ಬಳ್ಳಾರಿಯಲ್ಲಿ ಏಕ ಕಾಲಕ್ಕೆ ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ

ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿವೆ. ತನ್ನ ಎರಡನೇ ಹೆರಿಗೆಯಲ್ಲಿ ಹುಲಿಗೆಮ್ಮ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಹುಲಿಗೆಮ್ಮ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು ಅವಧಿ ಪೂರ್ವ ಹೆರಿಗೆಯಾದ್ದರಿಂದ ಮತ್ತು ಮಕ್ಕಳ ತೂಕ ಕಡಿಮೆಯಿದ್ದ ಪರಿಣಾಮ ನಾಲ್ಕು ಮಕ್ಕಳು ಸೋಮವಾರ ರಾತ್ರಿಯೇ ವಿಮ್ಸ್ ನಲ್ಲಿ ಮೃತಪಟ್ಟಿವೆ.

Ballary: Four children who were born at one time died on Monday

ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿದ್ದ ವಿಮ್ಸ್ ವೈದ್ಯರು ಮಕ್ಕಳನ್ನು ಎನ್‌ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೂ ಮಕ್ಕಳ ತೂಕ ಕಡಿಮೆ ಇದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ. ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಮಕ್ಕಳನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.

BJP Leader Kissing A Woman In A Moving Bus In Maharashtra Viral Video

ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ಬದುಕುಳಿಯದೇ ಹೋದುದರಿಂದ ಗುಂಡೂರು ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಈ ನಾಲ್ಕು ಮಕ್ಕಳನ್ನ ಕಳೆದುಕೊಂಡ ಹುಲಿಗೆಮ್ಮ ಮನೆಯಲ್ಲೀಗ ಆಕ್ರಂದನ ಮುಗಿಲುಮುಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Four children who were born in Ballary at one time died at the city's VIMS Hospital. Huliyamma gave birth to two sons and two daughters in her second delivery.. However, due to premature delivery and children's weight loss four children died on Monday night.
Please Wait while comments are loading...