ಮೇಟಿ ರಾಸಲೀಲೆ ಬಯಲಿಗೆಳೆದ ಮುಲಾಲಿಗೆ ಪೊಲೀಸರ 6 ಪ್ರಶ್ನೆ

Posted By:
Subscribe to Oneindia Kannada

ಬಳ್ಳಾರಿ, ಡಿಸೆಂಬರ್ 15 : ಅಬಕಾರಿ ಸಚಿವ ಎಚ್ ವೈ ಮೇಟಿ ಅವರು ವೈದ್ಯೆಯ ಜೊತೆ ಲೈಂಗಿಕ ಹಗರಣದಲ್ಲಿ ಸಿಲುಕಿ ರಾಜೀನಾಮೆ ಸಲ್ಲಿಸಿದ ನಂತರ, ಈ ಹಗರಣವನ್ನು ರಾಜ್ಯದ ಜನತೆಯ ಮುಂದಿಟ್ಟ ಆರ್ಟಿಐ ಕಾರ್ಯಕರ್ತ ಡಾ. ರಾಜಶೇಖರ ಮುಲಾಲಿ ಅವರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ಅಬಕಾರಿ ಸಚಿವ, ಬಾಗಲಕೋಟೆ ಶಾಸಕ 70 ವರ್ಷದ ಹುಲ್ಲಪ್ಪ ಯಮನಪ್ಪ ಮೇಟಿ ಅವರಿಂದ ತಮಗೆ ಜೀವಬೆದರಿಕೆ ಬರುತ್ತಿದೆ ಎಂದು ಆಯುರ್ವೇದಿಕ್ ವೈದ್ಯ ರಾಜಶೇಖರ ಅವರು ಮೂರು ದಿನಗಳ ಹಿಂದೆಯೇ ದೂರು ನೀಡಿದ್ದರೂ ಮೇಟಿ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ. [ಭಾರತದ ರಾಜಕಾರಣಿಗಳು, ಲೈಂಗಿಕ ಹಗರಣಗಳು..]

Ballari police ask 6 questions to Rajashekhar Mulali

"ನಿನಗೆ ಎಷ್ಟು ಹಣ ಬೇಕು ಹೇಳು. ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಹಾದಿಯಲ್ಲಿಯೇ ರಾಜಶೇಖರ್ ಅವರನ್ನು ಅಡ್ಡಹಾಕಿಕೊಂಡು ಮೇಟಿ ಬೆಂಬಲಿಗರು ಬೆದರಿಕೆ ಒಡ್ಡಿದ್ದಾರೆ ಎಂಬ ದೂರು ನೀಡಲಾಗಿದೆ. ಈ ನಡುವೆ, ಬಳ್ಳಾರಿಯ ಗಾಂಧಿ ನಗರ ಪೊಲೀಸರು ರಾಜಶೇಖರ್ ಅವರು 6 ಪ್ರಶ್ನೆಗಳನ್ನು ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. [ಘಾಟಿ ಮೇಟಿ ಬಗ್ಗೆ ಯಾರು ಏನು ಹೇಳಿದರು?]

ಪ್ರಶ್ನೆ 1 : ಡಿಸೆಂಬರ್ 8ರಂದು ಬಳ್ಳಾರಿಯಲ್ಲಿ ರಸ್ತೆಯಲ್ಲಿಯೇ ಕೆಲವರು ಬೆದರಿಕೆ ಒಡ್ಡಿದಾಗ ಅವರು ಎಲ್ಲಿ ಹೋಗುತ್ತಿದ್ದರು?
ಪ್ರಶ್ನೆ 2 : ಯಾವ ಸ್ಥಳ ಮತ್ತು ಯಾವ ಸಮಯದಲ್ಲಿ ಅವರಿಗೆ ಬೆದರಿಕೆ ಒಡ್ಡಯಾಯಿತು?
ಪ್ರಶ್ನೆ 3 : ಬೆದರಿಕೆ ನೀಡಿದಂತಹ ಸ್ಥಳದಲ್ಲಿಯೇ ಯಾಕೆ ಸಾಗಲು ನಿರ್ಧರಿಸಿದರು?
ಪ್ರಶ್ನೆ 4 : ಆ ದಿಕ್ಕಿನಲ್ಲಿ ಸಾಗುವ ಮೊದಲು ಅವರು ಎಲ್ಲಿದ್ದರು?
ಪ್ರಶ್ನೆ 5 : ಯಾರು ಮತ್ತು ಎಷ್ಟು ಜನರು ಅವರನ್ನು ಬೆದರಿಸಿದರು?
ಪ್ರಶ್ನೆ 6 : ಬೆದರಿಕೆ ಒಡ್ಡಿದವರ ಭಾಷೆ ಹೇಗಿತ್ತು, ಮತ್ತು ಬೆದರಿಕೆಯ ಮತ್ತು ಬೆದರಿಕೆ ಒಡ್ಡಿದವರ ಸಂಪೂರ್ಣ ವಿವರ.

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ನನಗೆ ಯಾವುದೇ ರಾಜಕೀಯ ವ್ಯಕ್ತಿಯ ವಿರುದ್ಧ ದ್ವೇಷವಿಲ್ಲ, ಯಾರಿಂದಲೂ ಯಾವುದೇ ಲಾಭವೂ ಆಗಬೇಕಿಲ್ಲ ಎಂದು ಡಾ. ರಾಜಶೇಖರ ಮುಲಾಲಿ ಅವರು ಹೇಳಿದ್ದು, ನನಗೆ ಯಾವುದೇ ಹಣದ ಅವಶ್ಯಕತೆಯಿಲ್ಲ, ಬೆದರಿಕೆ ಹೀಗೆಯೇ ಮುಂದುವರಿದರೆ ಪೊಲೀಸರಿಗೆ ದೂರು ಕೊಡಬೇಕಾಗಿತ್ತದೆ ಎಂದು ಬೆದರಿಕೆ ಒಡ್ಡಿದವರಿಗೆ ಹೇಳಿದ್ದರು. [ಮೇಟಿ ರಾಸಲೀಲೆ: ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಬಾಂಬ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ballari police have asked 6 questions to Dr Rajashekhar Mulali regarding the scandal where he has exposed HY Meti. In the video the minister was allegely found with a lady doctor. The video has gone viral and rocked the Karnataka. ಮೇಟಿ ರಾಸಲೀಲೆ ಬಯಲಿಗೆಳೆದ ಮುಲಾಲಿಗೆ ಪೊಲೀಸರ 6 ಪ್ರಶ್ನೆ
Please Wait while comments are loading...