• search
For ballari Updates
Allow Notification  

  ಬಳ್ಳಾರಿಯ 70 ವರ್ಷದ ಗುಲ್ಜಾರ್ ಏಸಿ ಪಾನ್ ಶಾಪ್ ಬಗ್ಗೆ ಗೊತ್ತೆ?

  By ಜಿ.ಎಂ.ಆರ್., ಬಳ್ಳಾರಿ
  |
    Gulzar Pan shop, Bellary : ಕರ್ನಾಟಕದ ಏಕೈಕ ಹೈಟೆಕ್ ಎ ಸಿ ಪಾನ್ ಶಾಪ್ | Oneindia Kannada

    ಪಾನ್ ಸವಿದವರಿಗೆ ಗೊತ್ತು ಅದರ ಗಮ್ಮತ್ತು. ಅದರಲ್ಲೂ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ಇರುವ ಗುಲ್ಜಾರ್ ಪಾನ್ ಶಾಪ್ ನಲ್ಲಿ ಪಾನ್ ಸವಿದರಿಗೆ ಮತ್ತೊಮ್ಮೆ ಹುಡುಕಿಕೊಂಡು ಬರುವ ಹುಮ್ಮಸ್ಸು. ಅದುವೇ ಆ ಶಾಪ್ ನಲ್ಲಿನ ಪಾನ್ ನ ಗಮ್ಮತ್ತು.

    'ಗುಲ್ಜಾರ್ ಪಾನ್ ಶಾಪ್' ಎಂದೇ ಖ್ಯಾತಿ ಪಡೆದಿರುವ ಬಳ್ಳಾರಿಯ ಸಯ್ಯದ್ ಅಜ್ಮತ್ ಮಾಲೀಕತ್ವದ ಪಾನ್ ಶಾಪ್ ಗೆ ಈಗ ಎಪ್ಪತ್ತರ ಸಂಭ್ರಮ. ಗಣಿ ನಾಡಿನಲ್ಲಿರುವ ಈ ಪಾನ್ ಶಾಪ್ ಯಾವುದೇ ಹೈಟೆಕ್ ಶೋರೂಮ್ ಗಿಂತ ಕಮ್ಮಿಯಿಲ್ಲ. ಹೌದು! ಕನಿಷ್ಠ ಹತ್ತರಿಂದ ಸಾವಿರ ರೂಪಾಯಿಯವರೆಗೆ ದರ ನಿಗದಿ ಮಾಡಲಾಗಿರುವ ಇಲ್ಲಿನ ಪಾನ್ ಗಳೆಂದರೆ ಪಾನ್ ಪ್ರಿಯರಿಗೆ ಅಚ್ಚುಮೆಚ್ಚು.

    ಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತು

    ಬಳ್ಳಾರಿಯ ಹೈಟೆಕ್ ಪಾನ್ ಶಾಪ್ ಇದು. ಬಳ್ಳಾರಿಯ ಕೋರ್ಟ್ ಎದುರು ಕಮ್ಮಾ ಕಾಂಪ್ಲೆಕ್ಸ್ ನಲ್ಲಿದೆ ಗುಲ್ಜಾರ್ ಪಾನ್ ಶಾಪ್. ಫುಲ್ ಸೆಂಟ್ರಲೈಸ್ಡ್ ಏಸಿ ಇರುವ ಕರ್ನಾಟಕದ ಏಕೈಕ ಹೈಟೆಕ್ ಪಾನ್ ಶಾಪ್ ಇದು.

    ಪಾನ್ ಶಾಪಿನ ಮಾಲೀಕ ಸಯ್ಯದ್ ಅಜ್ಮತ್ ಅವರ ಅಜ್ಜನ ಕಾಲದಿಂದ ಇವರ ಮನೆತನದಲ್ಲಿ ಪಾನ್ ಶಾಪ್ ವ್ಯವಹಾರವನ್ನು ಆರಂಭಿಸಲಾಯಿತು. ಆರಂಭದಲ್ಲಿ ಸಾಮಾನ್ಯ ಬೀಡಾ ಅಂಗಡಿಯಂತಿತ್ತು. ಅಜ್ಮತ್ ಅವರ ತಂದೆಯ ಕಾಲಕ್ಕೆ ಹಲವು ಪಾನ್ ಗಳನ್ನು ಪರಿಚಯಿಸುವ ಮೂಲಕ ಗಣಿ ನಾಡಿನ ಪಾನ್ ಪ್ರಿಯರಿಗೆ ಅವುಗಳ ವಿವಿಧ ಫ್ಲೇವರ್ ಪರಿಚಯಿಸಲಾಯಿತು.

    ಕನಿಷ್ಠ 50 ಬಗೆಯ ಪಾನ್ ಗಳ ತಯಾರಿ

    ಕನಿಷ್ಠ 50 ಬಗೆಯ ಪಾನ್ ಗಳ ತಯಾರಿ

    ಅಲ್ಲಿಂದ ಇಲ್ಲಿಯವರೆಗೆ ದೇಶದ ವಿವಿಧ ರಾಜ್ಯಗಳಿಗೆ ಸಂಚಾರ ಮಾಡಿ, ಅಲ್ಲಿನ ಪಾನ್ ವಿಶೇಷತೆಗಳೇನು, ಅಲ್ಲಿ ಬಳಸುವ ಪಾನ್ ವಸ್ತುಗಳನ್ನು ತಿಳಿದುಕೊಂಡು ಬಂದು ಇಲ್ಲಿ ಹೊಸದಾಗಿ ಗ್ರಾಹಕರಲ್ಲಿ ಅಭಿರುಚಿಯನ್ನು ಹುಟ್ಟು ಹಾಕಿದ್ದಾರೆ. ಅಷ್ಟೇ ಅಲ್ಲ, ಗ್ರಾಹಕರು ಬಯಸುವ ವಿವಿಧ ಬಗೆಯ ಪಾನ್ ಗಳನ್ನು ಇವರು ತಯಾರಿಸಿ ಕೊಡುತ್ತಾರೆ. ಬಳ್ಳಾರಿಯಲ್ಲಿರುವ ಈ ಪಾನ್ ಶಾಪ್ 1948ರಲ್ಲಿ ಆರಂಭವಾಯಿತು. ಆರಂಭದಲ್ಲಿ ಸಾಮಾನ್ಯ ಬೀಡಾ ಅಂಗಡಿಯಂತಿದ್ದ ಈ ಅಂಗಡಿ ಕಳೆದ ಐವತ್ತು ವರ್ಷಗಳಿಂದ ವಿವಿಧ ಪಾನ್ ಗಳನ್ನು ಕಟ್ಟುತ್ತ, ಗ್ರಾಹಕರಿಗೆ ತಿನ್ನಲು ಕೊಡುತ್ತಾ ಬಂದಿದೆ. ಈವರೆಗೆ ಇವರ ಪಾನ್ ಶಾಪ್ ನಲ್ಲಿ ಕನಿಷ್ಠ 50 ಬಗೆಯ ಪಾನ್ ಗಳನ್ನು ತಯಾರು ಮಾಡಿಕೊಡುತ್ತಾರೆ.

    ಗ್ರಾಹಕರ ಬಾಯಿಗೆ ಪಾನ್ ಇಟ್ಟು, ಶುಭಾಶಯ

    ಗ್ರಾಹಕರ ಬಾಯಿಗೆ ಪಾನ್ ಇಟ್ಟು, ಶುಭಾಶಯ

    ಕಪಲ್ಸ್ ಪಾನ್, ಚಾಕಲೇಟ್ ಪಾನ್ ಹಾಗೂ ಫೈರ್ ಪಾನ್ ಇವರ ಶಾಪ್ ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತವೆ. ವಿಶೇಷ ಹಬ್ಬಗಳಲ್ಲಂತೂ ಇಲ್ಲಿಗೆ ಬರುವ ಗ್ರಾಹಕರಿಗೆ ಶುಭಾಶಯ ಕೋರಿ, ಅವರ ಬಾಯಿಗೆ ಪಾನ್ ಇಟ್ಟು, ವಿಶ್ ಮಾಡುವ ಪರಿಪಾಠವೂ ಉಂಟು. ಅಂತಹ ಸಂದರ್ಭಗಳಲ್ಲಿ ಮಾಲೀಕ ಅಜ್ಮತ್ ಹಾಗೂ ಸೋದರ ಅಹ್ಮದ್ ವಿಶೇಷ ದಿರಿಸು ಧರಿಸಿರುತ್ತಾರೆ.

    ರಮ್ಜಾನ್, ದೀಪಾವಳಿ ಹಬ್ಬಗಳಲ್ಲಿ ವಿಶೇಷ

    ರಮ್ಜಾನ್, ದೀಪಾವಳಿ ಹಬ್ಬಗಳಲ್ಲಿ ವಿಶೇಷ

    ಶಾಪ್ ಗೆ ಬರುವ ಗ್ರಾಹಕರ ಮೇಲೆ ಪುಷ್ಪ ಸಿಂಪಡಿಸಿ, ಕೈಗೆ ಗಂಧದೆಣ್ಣೆ ಹಚ್ಚಿ, ಅವರು ಆರ್ಡರ್ ಮಾಡುವ ಪಾನ್ ಕಟ್ಟಿ ಬಾಯಿಗಿಟ್ಟು ಶುಭಾಶಯ ಹೇಳುತ್ತಾರೆ. ರಮ್ಜಾನ್, ದೀಪಾವಳಿ ಸೇರಿದಂತೆ ವಿಶೇಷ ಹಬ್ಬಗಳಲ್ಲಿ ಇಂತಹ ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ. ಇಷ್ಟು ಮಾತ್ರವಲ್ಲ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಗಳ ಮದುವೆಯೂ ಸೇರಿದಂತೆ ಹಲವು ಬಿಗ್ ಫ್ಯಾಟ್ ಮದುವೆಗಳಿಗೆ ಸರ್ವೀಸ್ ಕೊಟ್ಟವರು ಇವರು. 70 ವರ್ಷಗಳಿಂದ ನಾಲ್ಕು ತಲೆಮಾರುಗಳಿಂದಲೂ ನಡೆಸಿಕೊಂಡು ಬಂದ ಈ ವ್ಯವಹಾರ ಕೇವಲ ವ್ಯವಹಾರವಲ್ಲ, ಇದೊಂದು ಪರಂಪರೆ ಎನ್ನುತ್ತಾರೆ ಸಯ್ಯದ್ ಅಜ್ಮತ್.

    ನಾಲಗೆ ಮತ್ತು ಮನಸನ್ನು ತಂಪಾಗಿಸಿ, ಕೆಂಪಾಗಿಸಿ

    ನಾಲಗೆ ಮತ್ತು ಮನಸನ್ನು ತಂಪಾಗಿಸಿ, ಕೆಂಪಾಗಿಸಿ

    ಸ್ವೀಟ್ ಪಾನ್ ಸಾದಾ ಪಾನ್ ಗಳ ಜೊತೆಗೆ ವಿವಿಧ ಬಗೆಯ ತಂಬಾಕಿನ ಪಾನ್ ಗಳೂ ಇಲ್ಲಿ ಲಭ್ಯ. ಆದರೆ ಸ್ವೀಟ್ ಪಾನ್ ಹಾಗೂ ಬಗೆ ಬಗೆಯ ಇತರ ಫ್ಲೇವರ್ ನ ಪಾನ್ ಗಳೆಂದರೆ ಮಹಿಳಯರು, ಮಕ್ಕಳು ಯುವಕರಿಗೆ ಅಚ್ಚುಮೆಚ್ಚು. ಊಟವಾದ ಮೇಲೆ ಜನರು ದಂಡು ದಂಡಾಗಿ ಬಂದು ಸರತಿಯಲ್ಲಿ ನಿಂತು ಪಾನ್ ತಿಂದು ಹೋಗುತ್ತಾರೆ. ನೀವೂ ಒಮ್ಮೆ ಬನ್ನಿ, ಗುಲ್ಜಾರ್ ಪಾನ್ ನ ಸವಿ ಸವಿಯಿರಿ. ನಿಮ್ಮ ನಾಲಗೆ ಮತ್ತು ಮನಸನ್ನು ತಂಪಾಗಿಸಿ, ಕೆಂಪಾಗಿಸಿ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ಇನ್ನಷ್ಟು ಬಳ್ಳಾರಿ ಸುದ್ದಿಗಳುView All

    English summary
    Ballari Satyanarayapet Guljar pan shop completes 70 years. Mostly it is the only pan shop has centralised AC. Here is the complete information about this unique pan shop.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more