ಬಳ್ಳಾರಿ ಪಾಲಿಕೆ ಸದಸ್ಯನ ಕೊಲೆಗೆ ಯತ್ನ, ಒಬ್ಬನ ಬಂಧನ

Posted By:
Subscribe to Oneindia Kannada

ಬಳ್ಳಾರಿ, ಜನವರಿ 12: ಇಲ್ಲಿನ ಮಹಾನಗರ ಪಾಲಿಕೆಯ ಸದಸ್ಯ ಸೀತಾರಾಮ್ ಹತ್ಯೆಗೆ ಯತ್ನ ಮಾಡಲಾಗಿದ್ದು, ಸೀತಾರಾಮ್ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಸೀತಾರಾಮ್ ಅವರ ಮನೆಯ ಬಳಿಯೇ ಅವರ ಮೇಲೆ ಖಾರದಪುಡಿ ಎರಚಿ ಲಾಂಗು, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಆ ಸಮಯದಲ್ಲಿ ಸೀತಾರಾಮ್ ಬೆಂಬಲಿಗರು ಮತ್ತು ಸ್ಥಳೀಯರು ಸಹಾಯಕ್ಕೆ ಧಾವಿಸಿದ ಕಾರಣ ದಾಳಿಕೋರರು ಸ್ಥಳದಿಂದ ಕಾಲುಕಿತ್ತಿದ್ದಾರೆ.

ಆಂಧ್ರ ಪ್ರದೇಶದ ತಾಡಪತ್ರಿ ಮೂಲದ 8 ಮಂದಿ ಸೀತಾರಾಮ್ ಹತ್ಯೆಗೆ ಮುಂದಿಗಾಗಿದ್ದರು, ಆರೋಪಿಗಳ ‌ಪೈಕಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಕೆಯಾದ ಲಾಂಗ್, ಮಚ್ಚುಗಳನ್ನು ಜಪ್ತಿ‌ ಮಾಡಲಾಗಿದೆ ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Attack on Bellary munciple corparater.

ರೌಡಿ ಶೀಟರ್ ಆಗಿರುವ ಸೀತಾರಾಮ್ ಅವರ ಕೊಲೆಗೆ ಈ ಹಿಂದೆಯೂ ಯತ್ನ ನಡೆದಿತ್ತು ಅವರ ಮನೆ ಹತ್ತಿರವೇ ನಾಡ ಬಾಂಬ್ ದಾಳಿ ಮಾಡಲಾಗಿತ್ತು. ಆಗಲೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಸೀತಾರಾಮ್‌ ಅವರ ಹೆಸರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಇವೆ ಹೀಗಾಗಿ ಹತ್ಯೆ ಯತ್ನ ನಡೆದಿರಬಹುದು ಎಂದು‌ ಪೊಲೀಸರು ಶಂಕಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bellary Corporater Seetharam was attacked by 8 people on January 11th night. He manage to escape from attack with the help of local peoples and his body guards. ಬಳ್ಳಾರಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ