'ದಯವಿಟ್ಟು ಕ್ಷಮಿಸಿ, ಕೂಡ್ಲಿಗಿಗೆ ಬರುವುದು ತಡವಾಯಿತು'!

Posted By:
Subscribe to Oneindia Kannada

ಬಳ್ಳಾರಿ, ಜೂನ್ 09 : ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಪತ್ತೆಯಾಗಿದ್ದಾರೆ. ಗುರುವಾರ ಮುಂಜಾನೆ ಅವರು ಕೂಡ್ಲಿಗೆಗೆ ಆಗಮಿಸಿದರು. ಸಂಜೆ ಅವರು ಬಳ್ಳಾರಿ ಎಸ್‌ಪಿ ಆರ್.ಚೇತನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಜೂನ್ 4ರ ಶನಿವಾರ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದರು. ನಂತರ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಅವರನ್ನು ಹುಡುಕಲು ಬುಧವಾರ ಪೊಲೀಸರ ತಂಡ ರಚನೆ ಮಾಡಲಾಗಿತ್ತು. [ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

anupama shenoy

ಬುಧವಾರ ರಾತ್ರಿ ಭಟ್ಕಳದಿಂದ ಹೊರಟ ಅನುಪಮಾ ಶೆಣೈ ಅವರು, ಹುಬ್ಬಳ್ಳಿ ಮೂಲಕ ಗುರುವಾರ ಮುಂಜಾನೆ 4.30ರ ಸುಮಾರಿಗೆ ಕೂಡ್ಲಿಗಿಯಲ್ಲಿರುವ ಪೊಲೀಸ್ ಕ್ವಾಟರ್ಸ್‌ಗೆ ಆಗಮಿಸಿದರು. ಸಂಜೆ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ರಾಜೀನಾಮೆ ಪ್ರಕರಣದ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ. ['ಅನುಪಮಾ ಫೇಸ್ ಬುಕ್ ಖಾತೆ ಹ್ಯಾಕ್‌ ಆಗಿರಬಹುದು']

ಬಳ್ಳಾರಿಗೆ ಬಂದಿರುವ ಕುರಿತು ಅನುಪಮಾ ಫೇಸ್‌ಬುಕ್‌ ಸ್ಟೇಟಸ್ 'ಮಾಧ್ಯಮ ಮಿತ್ರರೇ, ದಯವಿಟ್ಟು ಕ್ಷಮಿಸಿ. ತಡವಾಯಿತು ಕೂಡ್ಲಿಗಿಗೆ ಬರುವುದು. ಏನು ಮಾಡುವುದು ಹೇಳಿ, ಇಲಾಖೆಗೆ ಉತ್ತರಕುಮಾರರು ಬೇಕಂತೆ. ಭಟ್ಕಳದಿಂದ ಬಳ್ಳಾರಿಯ ವರೆಗೆ ಫುಲ್ Escort. ಆದ್ರೆ ಗಾಡಿ accelerator ಒತ್ತಿದ್ರೆ 60ಕ್ಕಿಂತ ವೇಗವಿಲ್ಲ. ಒಂದು ಗಾಡಿಯ ಆಕ್ಸೆಲ್ಲೂ ಕಟ್ಟಾಯಿತು'. ['ಕೊಲೆ ಬೆದರಿಕೆ ಹಾಕ್ತೀರಾ? ದೆವ್ವವಾಗಿ ಬಂದು ಕಾಡ್ತೀನಿ']

facebook

ಸ್ಟೇಟಸ್ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ : ಕೂಡ್ಲಿಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅನುಪಮಾ ಶೆಣೈ ಅವರು ಫೇಸ್‌ ಬುಕ್‌ನಲ್ಲಿ ಸರಣಿ ಸ್ಟೇಟಸ್‌ಗಳನ್ನು ಹಾಕುತ್ತಿರುವುದು ಯಾರು? ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿಲ್ಲ. 'ನನಗೆ ಫೇಸ್‌ಬುಕ್ ಎಂಬುದೆಲ್ಲಾ ಅಷ್ಟು ಚೆನ್ನಾಗಿ ಗೊತ್ತಿಲ್ಲ. ಹ್ಯಾಕ್ ಆಗಿರಲೂಬಹುದು' ಎಂದು ನಕ್ಕು ಉತ್ತರ ಕೊಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DySP Anupama Shenoy reached Kudligi on Thursday, June 9, 2016 around 4.30 am. Anupama will meet Ballari Superintendent of police R. Chetan on evening.
Please Wait while comments are loading...