ಆನಂದ್ ಸಿಂಗ್ ಕಚೇರಿಗೆ ಬೀಗ, ನೀರು- ವಿದ್ಯುತ್ ಕಟ್

Posted By: GM Rohini
Subscribe to Oneindia Kannada

ಬಳ್ಳಾರಿ, ಏಪ್ರಿಲ್ 16 : ಮತಗಟ್ಟೆ ಕೇಂದ್ರಕ್ಕೆ 116 ಮೀಟರ್ ವ್ಯಾಪ್ತಿಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಆನಂದಸಿಂಗ್ ಕಚೇರಿ ಇರುವ ಕಾರಣ ಸಹಾಯಕ ಆಯುಕ್ತ ಗಾರ್ಗಿ ಜೈನ್ ಭಾನುವಾರ ಸಂಜೆ ದಾಳಿ ನಡೆಸಿ, ಕಚೇರಿಗೆ ಬೀಗ ಹಾಕಿ, ಪೊಲೀಸ್ ಭದ್ರತೆಯನ್ನು ಏರ್ಪಡಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕಚೇರಿಯಲ್ಲಿದ್ದ ಪಕ್ಷದ ಬಾವುಟಗಳು, ಭಿತ್ತಿಪತ್ರಗಳು, ಕೆಲ ಬರಹಗಳು, ಚುನಾವಣೆಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡ ಅವರು, ಮಾದರಿ ನೀತಿ ಸಂಹಿತೆ ಅನ್ವಯ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಕಚೇರಿ, ರಾಜಕೀಯ ಚಟುವಟಿಕೆಗಳು ನಡೆಸುವಂತಿಲ್ಲ. ಆದ್ದರಿಂದ ಆನಂದ್ ಸಿಂಗ್ ಕಚೇರಿಯನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಐಎಎಸ್ ಅಧಿಕಾರಿ ಗಾರ್ಗಿ ಜೈನ್ ತಿಳಿಸಿದ್ದಾರೆ

ಮಾಜಿ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಕಚೇರಿ ತಗಟ್ಟೆಯಿಂದ 116 ಮೀಟರ್ ಅಂತರದಲ್ಲಿದೆ. ಈ ಕಚೇರಿಯಲ್ಲಿ ಸಭೆ ನಡೆಸಲು ಆನಂದ್ ಸಿಂಗ್ ಚುನಾವಣಾಧಿಕಾರಿ ಪರವಾನಗಿಗೆ ಪತ್ರ ಬರೆದಿದ್ದರು. ಆದರೆ ಚುನಾವಣಾಧಿಕಾರಿ ನಿಯಮವನ್ನು ಪರಿಶೀಲಿಸಿ, ಕಚೇರಿ ಕಾರ್ಯ ನಿರ್ವಹಿಸಲು ಪರವಾನಗಿ ನೀಡಲು ಬರುವುದಿಲ್ಲ ಎಂದು ಏಪ್ರಿಲ್ ಹದಿಮೂರರಂದು ತಿಳಿಸಿದ್ದರು.

Anand Singh party office closed by election officer

ಆದರೂ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಚುನಾವಣಾಧಿಕಾರಿ ಗಾರ್ಗಿ ಜೈನ್ ದಾಳಿ ನಡೆಸಿ, ಕಚೇರಿಗೆ ಬೀಗ ಹಾಕಿಸಿದ್ದಾರೆ. ಅಧಿಕಾರಿ ಎದುರಲ್ಲೇ ನಿಂತು, ಬೀಗ ಹಾಕಿಸಿ, ಕೇಸು ನಮೂದಿಸಿ, ಎಫ್‍ ಐಆರ್ ಕಾಪಿ ನನಗೆ ಕೊಡಬೇಕು ಎಂದು ಆದೇಶ ನೀಡಿದಾಗ, ಆನಂದ್ ಸಿಂಗ್ ಬೆಂಬಲಿಗರೊಂದಿಗೆ ಕಚೇರಿಯಲ್ಲೇ ಇದ್ದರು.

ಅಷ್ಟೇ ಅಲ್ಲ, ಅಧಿಕಾರಿ, ಮೇ ಹದಿನೆಂಟರವರೆಗೆ ವಿದ್ಯುತ್ ಕಡಿತಗೊಳಿಸಲು ಕೂಡ ಜೆಸ್ಕಾಂ ಇಲಾಖೆಗೆ, ನೀರು ಕಡಿತಗೊಳಿಸಲು ಮುನಿಸಿಪಾಲಿಟಿಗೆ ಆದೇಶ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Elections 2018: Ballari district Vijayanagara constituency Congress candidate Anand Singh party office closed by election officer, for violation of election code of conduct.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ