ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಶಂಕಿತ ಸಿಮಿ ಉಗ್ರನ ಬಂಧನ

ಬೇರೋಬ್ಬ ಆರೋಪಿ ಮೇರೆಗೆ ಸಿಮಿ ನಂಟು ಹೊಂದಿರುವ ಅಲಂಭಾಷಾ ಎನ್ನುವ ಶಂಕಿತ ಉಗ್ರನನ್ನು ಗುರುವಾರ ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಅಲ್ಲಂಭಾಷಾನ ಜೊತೆ ನಿಕಟ ಸಂಪರ್ಕ ಹೊಂದಿರುವರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

By Ramesh
|
Google Oneindia Kannada News

ಬಳ್ಳಾರಿ, ನವೆಂಬರ್. 04 : ಬಳ್ಳಾರಿಯಲ್ಲಿ ಸ್ಟುಡೆಂಟ್ ಇಸ್ಲಾಮಿಕ್ ಸಂಘಟನೆಯ(ಸಿಮಿ) ನಂಟು ಹೊಂದಿರುವ ಶಂಕಿತ ವ್ಯಕ್ತಿಯನ್ನು ಗುರುವಾರ ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಅಲಂಭಾಷಾ ಬಂಧಿತ ಶಂಕಿತ ಉಗ್ರ. ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಕೊರಳು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತ್ರೀವವಾಗಿ ಗಾಯಗೊಂಡಿರುವ ಅಲ್ಲಂಭಾಷಾಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಾಫರ್ ಎನ್ನುವ ಆರೋಪಿಯಿಂದ ಶಂಕಿತ ಉಗ್ರ ಅಲಂಭಾಷಾನ ಸುಳಿವು ಪೊಲೀಸರಿಗೆ ಸಿಕ್ಕಿದೆ.

Alleged Semi agent arrested in Bellari

ಸಿಕ್ಕಿ ಬಿದ್ದಿದ್ದು ಹೇಗೆ?: 2 ವರ್ಷದ ಹಿಂದೆ ಬಳ್ಳಾರಿಯ ದತ್ತಾಸಾಯಿ ನಗರದ ಬಳಿ ಕಾರ್ಪೆಂಟ್ ಕೆಲಸ ಮಾಡಿಕೊಂಡಿದ್ದ ವೇಣುಗೋಪಾಲ ಮತ್ತು ಆಚಾರಿ ಎನ್ನುವರನ್ನು ಜಾಫರ್ ಎಂಬಾತ ವ್ಯಕ್ತಿ ಶೂಟೌಟ್ ಮಾಡಿ ಪರಾರಿಯಾಗಿದ್ದ.

ಆದರೆ ಇತ್ತೀಚಿಗೆ ಗನ್ ಇಟ್ಟುಕೊಂಡು ಓಡಾಡುತ್ತಿದ್ದನ್ನು ಮಾಹಿತಿ ಪಡೆದ ಪೊಲೀಸರು ಜಾಫರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಸಿಮಿ ಸಂಘಟನೆಯ ನಂಟು ಹೊಂದಿರುವ ಅಲಂಭಾಷಾನ ನಿಜಬಣ್ಣ ಬಯಲಾಗಿದೆ. ಬಂಧಿತ ಜಾಫರ್ ನಿಂದ ಮಾಹಿತಿ ಪಡೆದ ಪೊಲೀಸರು ಅಲಂಭಾಷಾನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಅಲ್ಲಂಭಾಷಾನ ಜೊತೆ ನಿಕಟ ಸಂಪರ್ಕ ಹೊಂದಿರುವ 14 ಜನರ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ತ್ರೀವಗೊಳಿಸಿದ್ದಾರೆ. ಅಲ್ಲದೇ 40ಕ್ಕೂ ಹೆಚ್ಚು ಬಂದೂಕುಗಳನ್ನು ಭಾಷಾ ಸರಬುರಾಜು ಮಾಡಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ.

ಅಲ್ಲದೇ ಭಾಷಾಗೆ ಮುಂಬೈ ಲಿಂಕ್ ಇರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿರುವುದರಿಂದ ಭಾಷಾನ ಬ್ಯಾಂಕ್ ಖಾತೆಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

English summary
Bellary police arrested suspected simi terrorist Alam bhasha in Bellari on November 03.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X