ಬಳ್ಳಾರಿಯಲ್ಲಿ ಏಕ ಕಾಲಕ್ಕೆ ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ

By: ಬಸವರಾಜ್ ಮರಳಿಹಳ್ಳಿ
Subscribe to Oneindia Kannada

ಬಳ್ಳಾರಿ, ಜುಲೈ 29: ತಾಲೂಕಿನ ಎಮ್ಮಿಗನೂರು ಗ್ರಾಮದ ಹುಲಿಗೆಮ್ಮ ಬಸವರಾಜ ಗುಂಡೂರ ಅವರು ಒಂದೇ ಬಾರಿಗೆ ನಾಲ್ಕು ಮಕ್ಕಳನ್ನು ಹೆತ್ತಿದ್ದಾರೆ.

ಬಳ್ಳಾರಿಯ ವಿಮ್ಸ್ ನಲ್ಲಿ ದಾಖಲಾಗಿದ್ದ ಹುಲಿಗೆಮ್ಮ ಅವರಿಗೆ ಗುರುವಾರ ಸಂಜೆ ಹೆರಿಗೆಯಾಗಿದ್ದು, ಎರಡು ಗಂಡು ಹಾಗೂ ಎರಡು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.

ವೈರಲ್ ಆಗಿರುವ ಈ ಸೆಲ್ಫಿ ಹಿಂದೆ ಕಣ್ಣೀರಿನ ಕಥೆಯಿದೆ

ಡಾ.ವೀರೇಂದ್ರ ಕುಮಾರ ಅವರ ಮಾರ್ಗದರ್ಶನದಲ್ಲಿ ಡಾ.ವಾರಿಜಾ, ಡಾ.ರಾಮರಾಜ್, ಜಿ.ವಿ.ರಾವ್, ಡಾ.ದೀಪಿಕ್, ಡಾ.ಶ್ವೇತಾ, ಡಾ.ಅಮೃತಾ ಅವರನ್ನು ಒಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆಯ ಮೂಲಕ ಎಲ್ಲ ನಾಲ್ಕು ಶಿಶುಗಳನ್ನು ಹೊರ ತೆಗೆದಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯದಿಂದ ಇದ್ದಾರೆ.

A woman got four children at a time on her second delivery

ನಾಲ್ಕು ತಿಂಗಳ ಗರ್ಭಿಯಾಗಿದ್ದ ಹುಲಿಗೆಮ್ಮ ಹೊಟ್ಟೆಯಲ್ಲಿ ನಾಲ್ಕು ಭ್ರೂಣಗಳು ಬೆಳೆಯುತ್ತಿರುವುದು ಪತ್ತೆಯಾಗಿತ್ತು. ಈ ಕಾರಣದಿಂದ ವಿಮ್ಸ್ ವೈದ್ಯರು ಮಹಿಳೆಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದರು. ವಿಮ್ಸ್ ವೈದ್ಯರ ಪ್ರಕಾರ ಇದೊಂದು ಅಪರೂಪದ ಪ್ರಕರಣ. ಅಂದಾಜು ಐದು ಲಕ್ಷ ಮಹಿಳೆಯರಲ್ಲಿ ಒಬ್ಬರಿಗೆ ಈ ರೀತಿ ಏಕಕಾಲಕ್ಕೆ ನಾಲ್ಕು ಮಕ್ಕಳಾಗುವ ಸಾಧ್ಯತೆ ಇರುತ್ತದೆ.

A woman got four children at a time on her second delivery

ಅವಳಿ ಮಕ್ಕಳ ಕುಟುಂಬ
ಅಚ್ಚರಿ ಎಂದರೆ ಎಮ್ಮಿಗನೂರು ಗ್ರಾಮದ ಬಸವರಾಜ ಗುಂಡೂರು ಅವರ ಕುಟುಂಬಕ್ಕೂ ಅವಳಿ ಮಕ್ಕಳಿಗೂ ಹೆಚ್ಚು ನಂಟಿದೆ. ಬಸವರಾಜ ಅವರ ಮೊದಲೆರೆಡು ತಲೆಮಾರಿನ ಹಿರಿಯರಿಗೂ ಅವಳಿ ಮಕ್ಕಳಾಗಿದ್ದವು. ಬಸವರಾಜ ಅವರ ತಾತ ನಾಗಪ್ಪ ಮತ್ತು ಈರಮ್ಮ ದಂಪತಿಗೆ ಅವಳಿ ಗಂಡು ಮಕ್ಕಳಾಗಿದ್ದವು. ಅದೇ ರೀತಿ ಅವರ ತಂದೆ ಈರಣ್ಣ ಮತ್ತು ಈರಮ್ಮ ಅವರಿಗೆ ಏಳು ಮಕ್ಕಳ ನಂತರ ಅವಳಿ ಮಕ್ಕಳಾದ ಇತಿಹಾಸವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A woman got four children at time on her second delivery at Emmiganuru village of Ballary taluk on Thursday. Huligemma got two boy babies and another two baby girls, according VIMS doctors it’s very rare case, it happened once in approximate 5 lakh woman.
Please Wait while comments are loading...