ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

Posted By:
Subscribe to Oneindia Kannada

ಬಳ್ಳಾರಿ, ಫೆಬ್ರವರಿ 15: ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಹಳೆಯ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಘಟಕದ ತುಂಬಾ ಹೊಗೆಯಾವರಿಸಿದೆ, ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಾಚರಣೆ ನಡೆಸಿದೆ.

ಬಳ್ಳಾರಿಯ ವಿಮ್ಸ್(ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಯಲ್ಲಿ ಬುಧವಾರ ದಾಸ್ತಾನು ಕೊಠಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಮಕ್ಕಳ ಚಿಕಿತ್ಸಾ ಘಟಕ ಸೇರಿದಂತೆ ಅನೇಕ ವಾರ್ಡ್ ಗಳಿಗೆ ಹೊಗೆ ಆವರಿಸಿದೆ. ಇದರಿಂದ ಆತಂಕಗೊಂಡ ವೈದ್ಯರು ರೋಗಿಗಳನ್ನು ಬೇರೆ ಕೊಠಡಿಗಳಿಗೆ ವರ್ಗಾಯಿಸಿದ್ದಾರೆ.[ಮಹಾರಾಷ್ಟ್ರದಲ್ಲಿ ಬೆಂಕಿ ಅವಘಡ, 20 ಮಂದಿ ಯೋಧರು ಸಾವು]

A fire broke out in Bellary VIMS Hospital

ಹೊಗೆ ಆವರಿಸುತ್ತಿದ್ದಂತೆ ಪೋಷಕರು ಮಕ್ಕಳು, ಹಸುಗೂಸುಗಳೊಂದಿಗೆ ಹೊರಕ್ಕೆ ಓಡಿ ಬಂದಿದ್ದಾರೆ. ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಕಾರ್ಯಚರಣೆ ನಡೆಸಿದ್ದು ಬೆಂಕಿಯನ್ನು ನಂದಿಸಿದೆ ಅಲ್ಲದೆ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಅವಘಡ ಸಂಭವಿಸಿರಬಹುದು ಎಂದು ತಿಳಿಸಿದರು.[ಕೋಲ್ಕತ್ತಾ ಎಸ್ ಎಸ್ ಕೆ ಎಂ ಆಸ್ಪತ್ರೆಯಲ್ಲಿ ಅಗ್ನಿ ಅವಘಡ]

ಹೊಗೆಯು ಐಸಿಯು(ತೀವ್ರ ನಿಗಾ ಘಟಕ) ವರೆಗೂ ಹರಡದೇ ಇದ್ದುದ್ದರಿಂದ ಅಲ್ಲಿಯ ರೋಗಿಗಳನ್ನು ಬೇರೆ ಸ್ಥಳಕ್ಕೆ ವರ್ಗಾಯಿಸಿಲ್ಲ ಎಂದು ವೈದ್ಯರು ತಿಳಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A fire broke out in Ballary VIMS Hospital on Wednesday morning(Feb 15). The fire and Smoke was detected in The old storage room in the hospital. Fire brigade arrived in time to extinguish the fire
Please Wait while comments are loading...