ಚಿತ್ರಗಳು : ಗೋಕಾಕನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 19 : 'ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. ಆದರೆ, ಗೋಕಾಕ ಮತಕ್ಷೇತ್ರಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಶನಿವಾರ ಸಂಜೆ ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಯಡಿಯೂರಪ್ಪ ಮಾತನಾಡಿದರು. 'ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯಕ್ಕೆ ತಡೆ ಹಾಕುತ್ತೇವೆ. ಗೋಕಾಕ್‌ನ ಗೂಂಡಾ ರಾಜ್ಯವನ್ನು ಕಿತ್ತೆಸೆಯುತ್ತೇವೆ' ಎಂದು ಘೋಷಿಸಿದರು.

ಪರಿವರ್ತನಾ ಯಾತ್ರೆ ವಾಹನಗಳನ್ನು ತಡೆದು ರೈತರ ಪ್ರತಿಭಟನೆ

'ಗೋಕಾಕಿನ ಗುಂಡಾ ರಾಜಕೀಯವನ್ನು ಕಿತ್ತೆಸೆಯಬೇಕಾಗಿದೆ. ಆ ದಿಸೆಯಲ್ಲಿ ಎಲ್ಲರೂ ಒಗ್ಗಟಾಗಬೇಕಾಗಿದೆ. ಗೋಕಾಕನ್ನು ದತ್ತು ತೆಗೆದುಕೊಂಡು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.

ಪರಿವರ್ತನಾ ಯಾತ್ರೆಯಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತಿಲ್ಲ : ಬಿಎಸ್‌ವೈ

'ಕೇಂದ್ರ ಸರ್ಕಾರದಿಂದ ಗೋಕಾಕ ಕ್ಷೇತ್ರಕ್ಕೆ 120 ಕೋಟಿ ಅನುದಾನ ಬಂದಿದೆ. ಆದರೆ, ಕ್ಷೇತ್ರದ ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಅನುದಾನ ಸದ್ಭಳಕೆ ಆಗಿಲ್ಲ' ಎಂದು ಯಡಿಯೂರಪ್ಪ ದೂರಿದರು.

ಭಟ್ಕಳ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಕ್ಷೇತ್ರ: ಯಡಿಯೂರಪ್ಪ

ಗೋಕಾಕ್‌ನಲ್ಲಿ ಶನಿವಾರ ಪರಿವರ್ತನಾ ಯಾತ್ರೆ ಅಂತ್ಯಗೊಂಡಿದ್ದು, ಇಂದು ಬಿಜೆಪಿ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಸೋಮವಾರ ಪುನಃ ಯಾತ್ರೆ ಆರಂಭವಾಗಲಿದೆ.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಭ್ರಷ್ಟಾಚಾರ ಮಾಡುತ್ತಿದೆ

ಭ್ರಷ್ಟಾಚಾರ ಮಾಡುತ್ತಿದೆ

'ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಸಿದ್ದರಾಮಯ್ಯ ನವರು ಸೇರಿ ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.

ಗೋಕಾಕ ಕ್ಷೇತ್ರವನ್ನು ಗೆಲ್ಲಿಸಬೇಕು

ಗೋಕಾಕ ಕ್ಷೇತ್ರವನ್ನು ಗೆಲ್ಲಿಸಬೇಕು

'ಬಿಜೆಪಿ ಗೆಲ್ಲಿಸಿ ಬಲತ್ಕಾರದಿಂದ ಮತ ಪಡೆಯುವ ಸಂಸ್ಕೃತಿಯನ್ನು ನಿಲ್ಲಿಸಬೇಕಾಗಿದೆ. ದರೋಡೆ ಮಾಡುವ ಸರಕಾರವನ್ನು ಕಿತ್ತೆಸೆಯಬೇಕಾಗಿದೆ. ಕಮೀಷನ್ ಏಂಜೆಟ್ ಆಗಿರುವ ಸಿದ್ದರಾಮಯ್ಯ ಸರಕಾರದ ಕೆಲಸ ಮುಂದಿನ ಮೂರು ತಿಂಗಳು ಮಾತ್ರ ನಡೆಯಬಲ್ಲದು. ಬದಲಾವಣೆಗಾಗಿ ಗೋಕಾಕ ಕ್ಷೇತ್ರವನ್ನು ಗೆಲ್ಲಬೇಕಾಗಿದೆ. ಅದಕ್ಕಾಗಿ ಎಲ್ಲ ಮತದಾರರು ಮುಂದಾಗಬೇಕಾಗಿದೆ' ಎಂದು ಯಡಿಯೂರಪ್ಪ ಹೇಳಿದರು.

ನಿದ್ದೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ

ನಿದ್ದೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, 'ರಾಜ್ಯದ ನಿದ್ದೆಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಗೋಕಾಕದಲ್ಲಿ ಗುಂಡಾ ರಾಜಕೀಯಕ್ಕೆ ಸೆಡ್ಡು ಹೊಡೆದು ಜನ ಈ ಯಾತ್ರೆಯನ್ನು ಬೆಂಬಲಿಸಿದ್ದಾರೆ. ದಾದಾಗೀರಿ ರಾಜಕಾರಣದಿಂದ ಮುಕ್ತಿ ಹೊಂದಲು ಜನ ಪಣ ತೋಡಬೇಕಾಗಿದೆ'. ಎಂದು ಕರೆ ನೀಡಿದರು.

ಜನರಿಗೆ ನೆಮ್ಮದಿ ನೀಡುವ ಸರ್ಕಾರ ಬೇಕಿದೆ

ಜನರಿಗೆ ನೆಮ್ಮದಿ ನೀಡುವ ಸರ್ಕಾರ ಬೇಕಿದೆ

'ನರೇಂದ್ರ ಮೋದಿ ಅವರ ಕಲ್ಪನೆಯಂತೆ ದೇಶದ 135 ಕೋಟಿ ಜನ ನೆಮ್ಮದಿಯಿಂದ ಬದುಕುವ ಸರಕಾರ ನಿಡಬೇಕಾಗಿದೆ. ಆ ರೀತಿಯ ಸರಕಾರವನ್ನು ನೀಡಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಿಂದ ಸಾಧ್ಯ. ಗೋಕಾಕ ತಾಲೂಕಿನಲ್ಲಿ 10 ಜನಷೌಧಿ ಕೇಂದ್ರ ತೆರೆಯಲು ಮುಂದಿನ ದಿನಗಳಲ್ಲಿ ಕ್ರಮ ಕೈಗೋಳಲಾಗುವುದು' ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

ಬಿಜೆಪಿ ಗೆಲ್ಲಿಸಿ ಎಂದು ಮನವಿ

ಬಿಜೆಪಿ ಗೆಲ್ಲಿಸಿ ಎಂದು ಮನವಿ

ಸಮಾವೇಶದಲ್ಲಿ ಮಾತನಾಡಿದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು, 'ಬಿಹಾರಕ್ಕಿಂತ ಕಡೆಯಾಗಿರುವ ಗೋಕಾಕ ಮತಕ್ಷೇತ್ರವನ್ನು ಬದಲಾವಣೆ ಮಾಡಬೇಕಿದೆ. ಗೋಕಾಕ ಮತಕ್ಷೇತ್ರವನ್ನು ಕರ್ನಾಟಕದಲ್ಲಿ ಮಾದರಿ ಕ್ಷೇತ್ರ ಮಾಡಲು ನಾವು ಪಣತೋಟ್ಟಿದೇವೆ. ಆದ್ದರಿಂದ, ಬಿಜೆಪಿ ಗೆಲ್ಲಿಸಿ' ಎಂದು ಮನವಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president B.S.Yeddyurappa addressed party Nava Karnataka parivarthana yatra in Gokak, Belagavi on November 19, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ