ಬೆಳಗಾವಿ : ಅನೈತಿಕ ಸಂಬಂಧ ಮುಚ್ಚಿಹಾಕಲು ಬಾಲಕಿಗೆ ಬೆಂಕಿ ಹಚ್ಚಿದ ಮಹಿಳೆ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 29 : ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳು ಎಂಬ ಕಾರಣಕ್ಕೆ 5 ವರ್ಷದ ಮಗುವನ್ನು ಮಹಿಳೆಯೊಬ್ಬಾಕೆ ಜೀವಂತ ಸುಟ್ಟು ಹಾಕಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಯಾದಗಿರಿ: ರಾಸಲೀಲೆಯಲ್ಲಿ ತೊಡಗಿದ್ದ ಯುವಕನ ಬರ್ಬರ ಹತ್ಯೆ

ಬೈಲುಹೊಂಗಲ ಗ್ರಾಮದ ಮಿರ್ಮಲಾ ಕೊಲೆ ಮಾಡಿದ ಮಹಿಳೆ, ನಿರ್ಮಲ ಅದೇ ಗ್ರಾಮದ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ನಿರ್ಮಲ ಆ ಯುವಕನೊಂದಿಗೆ ಇದ್ದಿದ್ದನ್ನು ಬಾಲಕಿ ರಾಜೇಶ್ವರಿ ನೋಡಿಬಿಟ್ಟಿದ್ದಳು, ರಾಜೇಶ್ವರಿ ಈ ವಿಷಯವನ್ನು ಮನೆಯವರಿಗೆ ಹೇಳಿ ಬಿಡುತ್ತಾಳೆ ಎಂಬ ಭಯಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಳೆ ನಿರ್ಮಲಾ.

women burns a 5 year child alive

ಬಾಲಕಿ ರಾಜೇಶ್ವರಿಯನ್ನು ಬಹಿರ್ದೆಸೆಗೆಂದು ಹತ್ತಿ ಹೊಲಕ್ಕೆ ಕರೆದುಕೊಂಡ ಹೋದ ನಿರ್ಮಲಾ, ಮೈಮರೆತು ಕುಳಿತಿದ್ದ ರಾಜೇಶ್ವರಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಬಿಟ್ಟಿದ್ದಾಳೆ. ಸುಟ್ಟ ಗಾಯಗಳೊಂದಿಗೆ ಹೊಲದಲ್ಲಿ ಬಿದ್ದಿದ್ದ ರಾಜೇಶ್ವರಿಯನ್ನು ಪಕ್ಕದ ಹೊಲದವರು ನೋಡಿ ಆಸ್ಪತ್ರೆಗೆ ಸೇರಿಸಿದ್ದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾಳೆ.

ಪ್ರಕರಣ ಕುರಿತು ತನಿಖೆ ನಡೆಸಿದ ದೊಡ್ಡವಾಡ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A women burnt a 5 year girl child alive in Belagavi district's Bylahongala village. accused Nirmala sets fire on child Rajeshwari.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ