ಬೆಳಗಾವಿ ಅಧಿವೇಶನಕ್ಕೆ ಹಾಜರಾಗುವಂತೆ ಕಾಂಗ್ರೆಸ್ ನಿಂದ ವಿಪ್ ಜಾರಿ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 13: ಇಂದಿನಿಂದ (ಸೋಮವಾರ) ಆರಂಭವಾಗಿರುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಶಾಸಕರು, ಸಚಿವರು ಇಲ್ಲದೆ ಬೆಳಗಾವಿಯ ಸುವರ್ಣ ಸೌಧ ಬಿಕೋ ಎನ್ನುತಿತ್ತು.

ಖಾಲಿ ಕುರ್ಚಿಗಳ ಅಧಿವೇಶನ, ಅತ್ತ ಮರಾಠಿ ಪುಂಡಾಟ; ದಿನದ 10 ಬೆಳವಣಿಗೆಗಳು

ಮಂಗಳವಾರದಿಂದ ಅಧಿವೇಶನದಲ್ಲಿ ಜಾರ್ಜ್ ತಲೆದಂಡ, ಮತ್ತಿತರ ವಿಷಯಗಳ ಚರ್ಚೆ ತಾರಕಕ್ಕೇರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ವಿಧಾನಸಭೆ, ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ವಿಪ್ ಜಾರಿ ಮಾಡಿದೆ.

Winter assembly season in Belagavi: Congress issues whip

ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಕಾಂಗ್ರೆಸ್ ಸಚೇತಕ ಅಶೋಕ್ ಪಟ್ಟಣ್ ಅವರು ಶಾಸಕರಿಗೆ ಶಾಸಕರು ವಿಪ್ ಜಾರಿಗೊಳಿಸಿದರು.

ಪ್ರತೀ ವರ್ಷದಂತೆ ಈ ವರ್ಷವೂ ಬೆಳಗಾವಿ ಅಧಿವೇಶನ ನೀರಸವಾಗಿಯೇ ಆರಂಭವಾಗಿದೆ. ಮೊದಲ ದಿನ ವಿಧಾನಸಭೆಯಲ್ಲಿ ಸಚಿವರು ಸೇರಿ ಕೇವಲ 53 ಜನರು ಹಾಜರಿದ್ದರು. ಹಲವು ರೋಚಕವೂ ಅಷ್ಟೇ ನೀರಸವೂ ಆದ ಬೆಳವಣಿಗೆಗಳಿಗೆ ಇಂದಿನ ಬೆಳಗಾವಿ ವಿಧಾನಸಭೆ ಕಲಾಪ ಸಾಕ್ಷಿಯಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka congress issued whip to ministers and MLA and MLC for attend in the Belagavi winter assembly season.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ