ಕೃಷ್ಣ ಜೆಡಿಎಸ್‌ಗೆ ಬಂದರೆ ಸ್ವಾಗತ: ಎಚ್‌.ಡಿ. ಕುಮಾರಸ್ವಾಮಿ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಏಪ್ರಿಲ್ 10: ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಜೆಡಿಎಸ್‌ಗೆ ಬಂದರೆ ಸ್ವಾಗತಿಸುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!

ಬೆಳಗಾವಿಯ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಎಸ್‌.ಎಂ. ಕೃಷ್ಣ ಅವರು ಜೆಡಿಎಸ್ ಗೆ ಸೇರುವುದಾದರೆ ತುಂಬು ಹೃದಯದಿಂದ ಸ್ವಾಗತಿಸುವುದಾಗಿ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಎಸ್‌.ಎಂ. ಕೃಷ್ಣ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ರಾಜಕೀಯ ಪಕ್ಷಗಳು ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಅತೀವ ಆಸಕ್ತಿ ತೋರಿಸುತ್ತವೆ. ಆದರೆ, ಬಳಿಕ ಅವರಿಗೆ ಯಾವುದೇ ಆದ್ಯತೆ ನೀಡುವುದಿಲ್ಲ ಎಂದರು.

will welcome krishna if he wants to join jds: HDK

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ನಾಲ್ಕು ಕ್ಷೇತ್ರದಲ್ಲಾದೂ ಸ್ಪರ್ಧಿಸಲಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡಲ್ಲ, ನಾಲ್ಕು ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧಿಸಲಿ ಎಂದು ಕುಮಾರಸ್ವಾಮಿ ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನವೊಲಿಸಿ ಎರಡು ಕಡೆ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರು ಎರಡು ಕಡೆಯಾದರೂ ಸ್ಪರ್ಧಿಸಲಿ, ನಾಲ್ಕು ಕಡೆಯಾದರೂ ಸ್ಪರ್ಧಿಸಲಿ. ನನ್ನ ಗುರಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಾಗಿದೆ ಎಂದರು.

ಕಲ್ಲಪ್ಪ ಹಂಡಿಭಾಗ ಪತ್ನಿ ಬಗ್ಗೆ ಹೇಳಿಕೆ: ಕ್ಷಮೆ ಯಾಚಿಸಿದ ಕುಮಾರಸ್ವಾಮಿ

24 ಗಂಟೆಯಲ್ಲಿ ಸಾಲ ಮನ್ನಾ:
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಏನನ್ನೂ ಕೊಟ್ಟಿಲ್ಲ. ಈ ಸರ್ಕಾರ ಮೇ ತಿಂಗಳಿನಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ. ಹೀಗಿರುವಾಗ ರೈತರ ಸಾಲಮನ್ನಾವನ್ನು ಇವರು ಹೇಗೆ ಮಾಡುತ್ತಾರೆ? ಕೇವಲ ಸುಳ್ಳು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಜೆಡಿಎಸ್ ನೇತೃತ್ವದ ಸರ್ಕಾರ ಬಹುಮತ ಪಡೆದರೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಭರವಸೆ ನೀಡಿದರು. ರೈತರ ಸಮಸ್ಯೆ ಆಲಿಸಿ ಅವುಗಳನ್ನು ಬಗೆಹರಿಸುತ್ತೇನೆ. ಐಎಎಸ್ ಅಧಿಕಾರಿಗಳ ಮಾತು ಕೇಳಿ ಆಡಳಿತ ನಿಭಾಯಿಸುತ್ತೇನೆ ಎಂದರು.

ತೆರಿಗೆ ಹಣದಲ್ಲಿ ಕುಕ್ಕರ್ ಹಂಚಿಕೆ:
ಕಾಂಗ್ರೆಸ್‌ನವರು ನಿಮಗೆ ಕುಕ್ಕರ್, ಸೀರೆಗಳನ್ನು ನೀಡಿದ್ದರೆ, ಅವರ ಮಾತಿಗೆ ಮರುಳಾಗಿ ಮತ ಮಾರಿಕೊಳ್ಳಬೇಡಿ ಎಂದು ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ನಿಮ್ಮ ತೆರಿಗೆ ಹಣ ಲೂಟಿ ಮಾಡಿ ನಿಮಗೆ ಕುಕ್ಕರ್ ಹಂಚಿದ್ದಾರೆ ಎಂದು ಆರೋಪಿಸಿದರು.

ನಮ್ಮ ಅಭ್ಯರ್ಥಿ ಶಿವನಗೌಡ ಪಾಟೀಲ್ ಅವರನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಜನರಲ್ಲಿ ಮನವಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS State President H.D. Kumaraswamy said, he will heartly welcome EX CM S.M. Krishna if he wants to join the Party. Kumaraswamy was campaigning for jds candidate shivanagowda patil at belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ