ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲೊಂದು ಹೈಟೆಕ್ ಬಸ್ ನಿಲ್ದಾಣ, ವೈ-ಫೈ, ಕೆಫೆಟೇರಿಯಾ!

|
Google Oneindia Kannada News

ಬೆಳಗಾವಿ, ನವೆಂಬರ್ 12 : ದೊಡ್ಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ, ಕೆಫೆಟೇರಿಯಾ ಇರುತ್ತದೆ. ಆದರೆ, ಬೆಳಗಾವಿಯ ಬಡಾವಣೆಯ ಬಸ್ ನಿಲ್ದಾಣವೊಂದರಲ್ಲಿ ಇವೆಲ್ಲ ಸೌಲಭ್ಯಗಳಿವೆ. ಈ ಬಸ್ ನಿಲ್ದಾಣ ಈಗ ರಾಜ್ಯಕ್ಕೆ ಮಾದರಿಯಾಗಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ತಿಲಕವಾಡಿಯ ಆರ್‌ಪಿಡಿ ವೃತ್ತದಲ್ಲಿ ಇಂತಹ ಬಸ್ ನಿಲ್ದಾಣ ಕಟ್ಟಿಸಿದ್ದಾರೆ. ಇಂದು ಸಂಜೆ ಬಸ್ ನಿಲ್ದಾಣ ಉದ್ಘಾಟನೆಯಾಗಬೇಕಿತ್ತು. ಆದರೆ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

'ಸಂಘಟನಾ ಚತುರ' ಅನಂತಕುಮಾರ್ ಅಮರ್ ರಹೇ : ರಾಷ್ಟ್ರೀಯ ಸ್ವಯಂಸೇವಕ ಸಂಘ'ಸಂಘಟನಾ ಚತುರ' ಅನಂತಕುಮಾರ್ ಅಮರ್ ರಹೇ : ರಾಷ್ಟ್ರೀಯ ಸ್ವಯಂಸೇವಕ ಸಂಘ

'ಗುಲಾಬಿ ಬಣ್ಣದ ಬಸ್ ನಿಲ್ದಾಣದಲ್ಲಿ ಕೆಫೆಟೇರಿಯಾ ನಿರ್ಮಾಣ ಮಾಡಲಾಗಿದೆ. ಸಿಸಿಟಿವಿ ಆಳವಡಿಸಲಾಗಿದೆ. 9.5 ಲಕ್ಷ ವೆಚ್ಚದಲ್ಲಿ ಈ ಬಸ್ ನಿಲ್ದಾಣ ನಿರ್ಮಿಸಲಾಗಿದೆ' ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳುಬಳ್ಳಾರಿಯಲ್ಲಿ ಪರಿಸರ ಸ್ನೇಹಿ ಬಸ್ ನಿಲ್ದಾಣಗಳು

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕ ವಿಕ್ರಮ್ ಬಾತ್ರಾ ಅವರನ್ನು ಹೆಸರನ್ನು ಈ ಬಸ್ ನಿಲ್ದಾಣಕ್ಕೆ ಇಡಲಾಗಿದೆ. ಏಕಕಾಲಕ್ಕೆ 20 ಮಂದಿ ಇಲ್ಲಿ ಕುಳಿತುಕೊಳ್ಳಬಹುದು. 40-45 ಜನರು ನಿಂತು ಆಶ್ರಯ ಪಡೆಯಬಹುದಾಗಿದೆ.

ಇದೇನು ಬಸ್ ನಿಲ್ದಾಣವೋ, ಕೆರೆಯೋ, ನರಕವೋಇದೇನು ಬಸ್ ನಿಲ್ದಾಣವೋ, ಕೆರೆಯೋ, ನರಕವೋ

ವೈ-ಫೈ, ಎಲ್‌ಇಡಿ ಟಿವಿ

ವೈ-ಫೈ, ಎಲ್‌ಇಡಿ ಟಿವಿ

ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ 40 ಮಂದಿ ಲಾಗಿನ್ ಆಗಿ ವೈ-ಫೈ ಸೌಲಭ್ಯ ಪಡೆಯಬಹುದಾಗಿದೆ. ಒಬ್ಬರು ಎಷ್ಟು ಜಿಬಿ ಡಾಬಾ ಬಳಸಬಹುದು ಎಂದು ಇನ್ನು ನಿರ್ಧರಿಸಿಲ್ಲ. ಬಸ್ ನಿಲ್ದಾಣದಲ್ಲಿ ಎರಡು ಎಲ್ಇಡಿ ಟಿವಿಯನ್ನು ಅವಳವಡಿಕೆ ಮಾಡಲಾಗುತ್ತದೆ. ಇನ್ ಕೇಬಲ್ ಉಚಿತವಾಗಿ ಟಿವಿಗಳಿಗೆ ಕೇಬಲ್ ಸಂಪರ್ಕ ನೀಡಲಿದೆ.

ದೇಶದಲ್ಲಿಯೇ ಮೊದಲು

ದೇಶದಲ್ಲಿಯೇ ಮೊದಲು

ಇಂತಹ ಹೈಟೆಕ್ ಬಸ್ ನಿಲ್ದಾಣ ದೇಶದಲ್ಲಿಯೇ ಮೊದಲು ಎನ್ನಬಹುದು. ಬಸ್ ನಿಲ್ದಾಣದಲ್ಲಿರುವ ಟಿವಿಯಲ್ಲಿ ಸುದ್ದಿ, ಮನೆರಂಜನೆ ಕಾರ್ಯಕ್ರಮಗಳಿಂತ ಹೆಚ್ಚಾಗಿ. ಬೆಳಗಾವಿ ಭಾಗದ ಧಾರ್ಮಿಕ ಪರಂಪರೆ ಸಾರುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ.

ಕೆಫೆಟೇರಿಯಾದಲ್ಲಿ ಇಬ್ಬರ ಕೆಲಸ

ಕೆಫೆಟೇರಿಯಾದಲ್ಲಿ ಇಬ್ಬರ ಕೆಲಸ

ಬಸ್ ನಿಲ್ದಾಣದಲ್ಲಿನ ಕೆಫೆಟೇರಿಯಾದಲ್ಲಿ ಇಬ್ಬರು ಕೆಲಸ ಮಾಡಲಿದ್ದಾರೆ. ಇದಕ್ಕೆ ತಿಂಗಳಿಗೆ 1 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಈ ಬಾಡಿಗೆ ಲೋಕೋಪಯೋಗಿ ಇಲಾಖೆಗೆ ಹೋಗಲಿದೆ. ಕೈಗೆಟುಕುವ ದರದಲ್ಲಿ ಇಲ್ಲಿ ಕಾಫಿ, ಟೀ ಮತ್ತು ಆಹಾರ ಪದಾರ್ಥಗಳು ಸಿಗಲಿವೆ. ತಂಬಾಕು ಉತ್ಪನ್ನಗಳನ್ನು ಮಾರದಂತೆ ಸೂಚನೆ ನೀಡಲಾಗಿದೆ. ಕೆಫೆ ನಡೆಸುವವರು ಶೆಲ್ಟರ್ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ.

20 ಮಂದಿ ಕುಳಿತುಕೊಳ್ಳಬಹುದು

20 ಮಂದಿ ಕುಳಿತುಕೊಳ್ಳಬಹುದು

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ನಿರ್ಮಿಸಿರುವ ಬಸ್ ನಿಲ್ದಾಣದಲ್ಲಿ 20 ಜನರು ಕುಳಿತುಕೊಳ್ಳಬಹುದಾಗಿದೆ. 40 ರಿಂದ 50 ಮಂದಿ ನಿಂತು ಆಶ್ರಯ ಪಡೆಯಬಹುದು. ಜರನ್ನು ರಾತ್ರಿ ವೇಳೆ ಆಕರ್ಷಣೆ ಮಾಡಲು ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗಿದೆ.

English summary
Belagavi South BJP MLA Abhay Patil constructed Hi tech bus stand in Belagavi with Wifi, Cafeteria facility's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X