ಹಾಸಿಗೆಗೆ ಬೆಂಕಿ ಇಟ್ಟು ಗಂಡನನ್ನು ಕೊಲ್ಲಲೆತ್ನಿಸಿದ ಪತ್ನಿ?

Subscribe to Oneindia Kannada

ಬೆಳಗಾವಿ, ಮಾರ್ಚ್ 20: ಹಾಸಿಗೆಗೆ ಬೆಂಕಿ ಇಟ್ಟು ಪತ್ನಿಯೊಬ್ಬಳು ಗಂಡನನ್ನೇ ಕೊಲ್ಲಲೆತ್ನಿಸಿದ್ದಾಳೆ ಎನ್ನಲಾದ ಘಟನೆ ಬೆಳಗಾವಿಯ ಲಕ್ಷ್ಮೀ ಟೆಕಡಿಯಾದ ಸೈನಿಕ ನಗರದಲ್ಲಿ ನಡೆದಿದೆ.

ಹಾಸಿಗೆಗೆ ಬೆಂಕಿ ಬಿದ್ದು ಸೈನಿಕ ದೀಪಕ್ ಪವಾರ್ ಗಂಭೀರ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬೆಳಗಾವಿಯ ಕೆಎಲ್ಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದೀಪಕ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶೇಕಡಾ 85ರಷ್ಟು ದೇಹದ ಭಾಗಗಳು ಸುಟ್ಟಿವೆ.[ಲಾರಿ-ಸೈಕಲ್ ಅಪಘಾತ: ಪೇಪರ್ ಹಾಕುತ್ತಿದ್ದ ಬಾಲಕ ಸಾವು]

Wife tried to kill her Husband by putting fire to bed

ಸೇನೆಯಲ್ಲಿರುವ ದೀಪಕ್ ಕುಮಾರ್ ಸುಮಾರು 9 ವರ್ಷಗಳ ಹಿಂದೆ ಸವಿತಾ ಎಂಬುವವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು. ಇದರಲ್ಲಿ ಅಕ್ರಮ ಸಂಬಂಧದ ವಿಚಾರಗಳೂ ಹಾದು ಹೋಗಿದ್ದವು.[ಮೈಸೂರಿನ ಬಾಳೆತೋಟದಲ್ಲಿ ಅವಿತ ಹುಲಿರಾಯ!]

ನಿನ್ನೆ ಮಧ್ಯರಾತ್ರಿ ಅಂದಾಜು ಒಂದು ಗಂಟೆ ಸುಮಾರಿಗೆ ದೀಪಕ್ ಬೆಡ್ಡಿಗೆ ಬೆಂಕಿ ಬಿದ್ದಿದೆ. ಆಸ್ಪತ್ರೆಗೆ ದೀಪಕ್ ರನ್ನು ಸಾಗಿಸುವ ವೇಳೆ ಆತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು ನನ್ನ ಪತ್ನಿಯೇ ಬೆಡ್ಡಿಗೆ ಬೆಂಕಿ ಹಾಕಿದ್ದಾಳೆ ಎಂದು ದೂರಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A murder attempt made on soldier Deepak kumar in Belagavi. Allegedly his wife put fire to bed to kill Deepak. Police lodged the complaint and investigation is going on.
Please Wait while comments are loading...