ಬೆಳಗಾವಿ, ಜನವರಿ 8: ಕರ್ನಾಟಕ ಬಿಜೆಪಿಯ 'ಫೈರ್ ಬ್ರ್ಯಾಂಡ್', ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಣ್ಣಗಾಗಿದ್ದಾರಾ ಎಂಬ ಅನುಮಾನವನ್ನು ನಿಜ ಮಾಡುವಂಥ ಘಟನೆ ಇಲ್ಲಿ ಸೋಮವಾರ ನಡೆದಿದೆ. ಮಾಧ್ಯಮದವರ ಯಾವುದೇ ಪ್ರಶ್ನೆಗೆ ಉತ್ತರ ನೀಡದ ಅವರು, ಕೈ ಮುಗಿದು ಹೊರಟು ಹೋದರು.
ಅನಂತಕುಮಾರ್ ಹೆಗಡೆ ಕಾರು ತಡೆದು, ದಲಿತ ಸಂಘಟನೆಗಳಿಂದ ಕಪ್ಪು ಬಾವುಟ
ಆದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಬಿಜೆಪಿಯು ಗೆಲುವನ್ನು ಸಾಧಿಸುತ್ತದೆ ಎಂದಷ್ಟೇ ಹೇಳಿದರು. ಆ ನಂತರ ಅವರು ಮಾತನಾಡಿದ್ದೇನೆಂದರೆ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತಷ್ಟೇ. ಒಟ್ಟಿನಲ್ಲಿ ಎಂದಿನ ತಮ್ಮ ಬೆಂಕಿಯುಗುಳುವ ಶೈಲಿಯ ಮಾತುಗಳಿಗೆ ಸ್ವಯಂ ನಿಯಂತ್ರಣ ಹೇರಿಕೊಂಡಂತೆ ಕಂಡುಬಂದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಪಕ್ಷದ ವರಿಷ್ಠರಿಂದ ಸೂಚನೆ ಬಂದಿದೆ ಎಂಬುದು ಒಂದು ಮೂಲದ ಸುದ್ದಿಯಾದರೆ, ಸಂಸತ್ ನಲ್ಲಿ ಸಂವಿಧಾನದ ಕುರಿತಾದ ಹೇಳಿಕೆಗೆ ಕ್ಷಮೆ ಕೇಳುವಂತೆ ಸೂಚಿಸಿದ ನಂತರ ಸ್ವತಃ ಹೆಗಡೆ ಸ್ವಲ್ಪ ಮಟ್ಟಿಗೆ ಮೌನವಾಗಿದ್ದರು ಎಂಬುದು ಮತ್ತೊಂದು ಆಯಾಮ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!