'ಟಿಪ್ಪು ಜಯಂತಿಗೆ ವಿರೋಧ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತಕರಾರಿಲ್ಲ'

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 11: "ಪ್ರತ್ಯೇಕ ಧರ್ಮ ಎಂದು ಕೇಳುವವರಿಗೆ ನಮ್ಮ ವಿರೋಧವಿಲ್ಲ. ದೇಶದಲ್ಲಿ ಜೈನ, ಬೌದ್ಧ ಧರ್ಮಗಳಿಲ್ಲವಾ? ಅದೇ ರೀತಿ ವೀರಶೈವ, ಲಿಂಗಾಯತ ಪ್ರತ್ಯೇಕ ಧರ್ಮ ಅಂದುಕೊಂಡರೆ ವಿಶ್ವ ಹಿಂದೂ ಪರಿಷತ್ ನ ವಿರೋಧವಿಲ್ಲ" ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಹೇಳಿದ್ದಾರೆ.

'ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು'

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ಕೇಳುವವರಿಗೆ ನಮ್ಮ ವಿರೋಧವಿಲ್ಲ. ಆದರೆ ಭಾರತದಲ್ಲಿ ಹುಟ್ಟಿರುವ ಎಲ್ಲ ಜಾತಿ, ಧರ್ಮದವರು ಹಿಂದೂಗಳೇ. ವಿಶ್ವ ಹಿಂದೂ ಪರಿಷತ್ ನ ವ್ಯಾಪಕ ಅರ್ಥದಲ್ಲಿ ಅವರೆಲ್ಲರೂ ಹಿಂದೂಗಳೇ. ಈ ದೇಶದಲ್ಲಿ ಜನಿಸಿದ ಮುಸ್ಲಿಮರು ಸಹ ಹಿಂದೂಗಳೇ, ಅವರ ಪೂರ್ವಜರು ಹಿಂದೂಗಳೇ ಎಂದರು.

We will not oppose Lingayat separate religion: VHP

ಟಿಪ್ಪು ಜಯಂತಿ ಆಚರಣೆ ಮೂಲಕ ಸರಕಾರವು ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ. ವಿಶ್ವ ಹಿಂದೂ ಪರಿಷತ್ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತದೆ ಎಂದರು.

ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ ಆನಂದ್ ಸಿಂಗ್ ಗೆ ಬಿಜೆಪಿ ನೋಟಿಸ್

ಕಾನೂನು ಹೋರಾಟದಲ್ಲಿ ಶೇಕಡಾ ಎಂಬತ್ತರಷ್ಟು ಜಯವಾಗಿದೆ. ಬಿಜೆಪಿ ರಾಜಕಾರಣಕ್ಕೆ ನಮಗೆ ಸಂಬಂಧವಿಲ್ಲ. ರಾಮಮಂದಿರ ನಿರ್ಮಾಣ ವಿಚಾರ ಡಿಸೆಂಬರ್ ಐದರಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದಷ್ಟೇ ನಮ್ಮ ಬೇಡಿಕೆ.

ಇನ್ನು ರಾಮಮಂದಿರವನ್ನು ಸರಕಾರ ನಿರ್ಮಿಸುವುದು ಬೇಡ. ಹಿಂದೂಗಳಾದ ನಾವೇ ನಿರ್ಮಿಸುತ್ತೇವೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We will not oppose Lingayat separate religion, but we oppose Tipu jayanti, said by VHP leader Gopal Ji in Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ