ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾರ್ಜ್ ರಾಜೀನಾಮೆ ನೀಡದಿದ್ದರೆ ಉಗ್ರ ಹೋರಾಟ: ಬಿಎಸ್ ವೈ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 20: "ಕೆ.ಜೆ.ಜಾರ್ಜ್ ಆದಷ್ಟು ಬೇಗ ರಾಜೀನಾಮೆ ಕೊಡಬೇಕು, ಇಲ್ಲದಿದ್ದರೆ ನಮ್ಮ ಹೋರಾಟ ಉಗ್ರಸ್ವರೂಪ ತಾಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

"ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಕೇಸ್ ಅಲ್ಲಿ ಸರ್ಕಾರವೆ ನೇರವಾಗಿ ಭಾಗಿಯಾಗಿದೆ. ಡಾಕ್ಟರ್ ಶೈಲಜಾ ಅವರೇ ನನ್ನ ಮೇಲೆ ಸರ್ಕಾರ ಪ್ರಭಾವ ಬೀರಿ ಪೋಸ್ಟ ಮಾರ್ಟಮ್ ರಿಪೋರ್ಟ್ ಸಿದ್ಧಪಡಿಸಿದ್ದಾರೆ ಎಂದಿದ್ದಾರೆ. ಅಂದಮೇಲೆ ಕೆ.ಜೆ. ಜಾರ್ಜ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಗದೀಶ್ ಶೇಟ್ಟರ್ ಜೊತೆ ಮಾತನಾಡಿ ಸದನದಲ್ಲಿ ಚರ್ಚಿಸುವಂತೆ ಹೇಳುತ್ತೇನೆ" ಎಂದು ಯಡಿಯೂರಪ್ಪ ಗುಡುಗಿದರು.

We will conduct teriffic protest if George doesn't give resignation: BSY

"ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಹಲವು ಯೋಜನೆಗಳು ನಮ್ಮ ಅವಧಿಯಲ್ಲಿ ಬಂದಿದ್ದು. ಈ ಸರ್ಕಾರ ಕಮಿಷನ್ ಎಜೆಂಟ್ ರಂತೆ ಕೆಲಸ ಮಾಡುತ್ತಿದೆ. ಕೇವಲ ಸಚಿವ ಆಂಜನೇಯ ಮಾತ್ರವಲ್ಲ, ಅವರ ಯಜಮಾನ ಸಿದ್ದರಾಮಯ್ಯ ಕೂಡ ಕಮಿಷನ್ ತಗೊಂಡು ಕೆಲಸ ಮಾಡುತ್ತಿದ್ದಾರೆ" ಎಂದರು.

ಕಾಂಗ್ರೆಸ್ ಏನೇ ಭಾಗ್ಯ ನೀಡಿದರೂ ಗೆಲ್ಲೋದು ಬಿಜೆಪಿಯೇ: ಸಂಜಯ್ ಪಾಟೀಲ್ಕಾಂಗ್ರೆಸ್ ಏನೇ ಭಾಗ್ಯ ನೀಡಿದರೂ ಗೆಲ್ಲೋದು ಬಿಜೆಪಿಯೇ: ಸಂಜಯ್ ಪಾಟೀಲ್

"ಜನವರಿ ಕೊನೇ ವಾರದಲ್ಲಿ ಯಾತ್ರೆಯ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ನಮ್ಮ ಕಾರ್ಯಕ್ರಮಗಳನ್ನು ಘೋಷಣೆ ಮಾಡ್ತಿವಿ. ನನ್ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಮೈ ತುಂಬಾ ಕಪ್ಪು ಚುಕ್ಕೆಯೇ ತುಂಬಿರುವಾಗ ಒಂದು ಚುಕ್ಕೆ ಎಲ್ಲಿ ಹುಡುಕೋದು" ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

2018 ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಜ್ಯದ 224 ಕ್ಷೇತ್ರಗಳಲ್ಲೂ 'ಪರಿವರ್ತನ ಯಾತ್ರೆ' ಹೆಸರಿನಲ್ಲಿ ಪ್ರವಾಸ ಮಾಡುತ್ತಿರುವ ಬಿಜೆಪಿ ನಾಯಕರು, ಇಂದು(ನ.20) ಬೆಳಗಾವಿ ಹಿರೆಬಾಗೇವಾಡಿ ಗ್ರಾಮದಲ್ಲಿದ್ದಾರೆ. ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿ.ಎಸ್ ವೈ ಈ ರೀತಿ ಹೇಳಿಕೆ ನೀಡಿದರು.

English summary
"If Bengaluru development minister K J George will not submit his resignation, then we will definitely start terrific protest," BJP state president BS Yeddyurappa told to media in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X