ಬೆಳಗಾವಿ ಸುವರ್ಣಸೌಧದ ಮುಂದೆ ವಾಟಾಳ್ ಬಂಧನ

Posted By: Gururaj
Subscribe to Oneindia Kannada

ಬೆಳಗಾವಿ, ನವೆಂಬರ್ 12 : ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು. ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ಸುವರ್ಣವ ವಿಧಾನಸೌಧದ ಸುತ್ತ-ಮುತ್ತ 1 ಕಿ.ಮೀ.ಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಭಾನುವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಳಗಾವಿಯ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಏನು ಮಾಡಿದೆ?' ಎಂದು ಪ್ರಶ್ನಿಸಿದರು.

ಬೆಳಗಾವಿ ಅಧಿವೇಶನ : ಈ ಬಾರಿ ಪೊಲೀಸರಿಗೆ ಊಟ, ವಸತಿಗೆ ಸಂಕಷ್ಟವಿಲ್ಲ

Vatal Nagaraj demands White Paper on fund to North Karnataka

'ವರ್ಷಕೊಂದು ಬಾರಿ ಅಧಿವೇಶನ ನಡೆಸಿ ಎದ್ದು ಹೋಗುತ್ತೀರಿ. ಉತ್ತರ ಕರ್ನಾಟಕ ಭಾಗದ ಜನರಿಗೆ ಏನು ಮಾಡಿದ್ದೀರಿ ಎಂಬ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

ಚಳಿಗಾಲದ ಅಧಿವೇಶನದ ವೇಳೆ ಸರ್ಕಾರಕ್ಕೆ ಚಳಿ ಬಿಡಿಸಲು ಮಾದಿಗರು ಸಜ್ಜು

'ಬೆಳಗಾವಿಯಲ್ಲಿರುವ ಕನ್ನಡ ವಿರೋಧಿಗಳನ್ನು ಹೊರಹಾಕಿ. ಎಂಇಎಸ್‌ನವರು ಪುಂಡಾಟ ನಡೆಸುತ್ತಿದ್ದಾರೆ. ಅಧಿವೇಶನದಲ್ಲ ಇದರ ಬಗ್ಗೆ ಚರ್ಚೆ ನಡೆಯುವುದಿಲ್ಲ. ನಾಡದ್ರೋಹಿ ಶಾಸಕರನ್ನು ಸದನದವೊಳಗೆ ಸೇರಿಸಬಾರದು' ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

'ನಾಡದ್ರೋಹಿ ಶಾಸಕರಾದ ಸಂಭಾಜಿ ಪಾಟೀಲ್‌ರನ್ನು ಸದನದೊಳಗೆ ಬಿಡಬಾರದು. ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಈ ಅಧಿಕಾರವಿದೆ. ಅವರನ್ನು ಸದನಕ್ಕೆ ಸೇರಿಸಿದರೆ ಸ್ಪೀಕರ್ ಮತ್ತು ಸಿದ್ದರಾಮಯ್ಯ ಕೂಡ ನಾಡ ದ್ರೋಹಿಗಳಾಗುತ್ತಾರೆ' ಎಂದು ವಾಟಾಳ್ ಹೇಳಿದರು.

ನಿಷೇಧಾಜ್ಞೆ ಜಾರಿ : ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿ ಕಮೀಷನರ್ ಟಿ.ಜಿ.ಕೃಷ್ಣಭಟ್ ಸುವರ್ಣವಿಧಾನಸೌಧದ 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ನ.13ರಿಂದ ಅಧಿವೇಶನ ನಡೆಯುವ ಹತ್ತು ದಿನಗಳ ತನ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President of Kannada Chaluvali Vatal Paksha Vatal Nagaraj has demanded that the Karnataka Government to publish a White Paper on the fund released to the development of North Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ