ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಗಾಂವ ಹಾಗೂ ಮಹಾಲಕ್ಷ್ಮೀ ಏತ ನೀರಾವರಿ ಅನುಷ್ಠಾನಕ್ಕೆ ರೈತರ ಒತ್ತಾಯ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 6 : ಕರಗಾಂವ ಏತ ನೀರಾವರಿ ಹಾಗೂ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಒತ್ತಾಯಿಸಿ ರೈತರು ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿಯಲ್ಲಿರುವ ನೀರಾವರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.

ಅಷ್ಟೇ ಅಲ್ಲದೆ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರ ಕಾರಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು. ರೈತ ಸಂಘದ ಮುಖಂಡರಾದ ತ್ಯಾಗರಾಜ್ ಕದಂ, ಜೊತೆ 30 ಕ್ಕೂ ಹೆಚ್ಚು ರೈತರು ಕೂಡಲೇ ಈ ಎರಡು ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

Urging lift irrigation projects farmers gathered MLA car

ಚಿಕ್ಕೋಡಿ ಜನರು ನೀರಿಲ್ಲದೆ ಪರದಾಡುತ್ತಿದ್ದಾರೆ. ಬೇಸಿಗೆ ಬಂತೆಂದರೆ ನೀರಿಗಾಗಿ ಹಪಹಪಿಸಬೇಕಾಗುತ್ತದೆ. ಯಾವ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ, ನೀರಾವರಿ ಸಮಸ್ಯೆಯಾಗುತ್ತಿದೆ ಹಾಗಾಗಿ ಆದಷ್ಟು ಬೇಗ ಅವರನ್ನು ಕರಗಾಂವ ಏತ ನೀರಾವರಿ ಮತ್ತು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

English summary
Hundreds of farmers gathered irrigation department office in Chikkodi of Belgaum district urging implementation of Kargaon and Mahalakshmi lift irrigation projects. Later farmers have gathered car which MLA Dhuryodana Aihole was travelling in the town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X