ಬೆಳಗಾವಿಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ, ಬೃಹತ್ ಸಮಾವೇಶ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 14 : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ನಡುವೆಯೇ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡುತ್ತಿದೆ. ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಎ.ಎಸ್.ಪಾಟೀಲ್ ನಡಹಳ್ಳಿ ಆರಂಭಿಸಿರುವ 'ಉತ್ತರ ಕರ್ನಾಟಕ ಕನ್ನಡಿಗರ ಸ್ವಾಭಿಮಾನಿ ಯಾತ್ರೆ'ಯ ಸಮಾರೋಪ ಸಮಾರಂಭ, ಎಚ್.ಡಿ.ಕುಮಾರಸ್ವಾಮಿ ಅವರು ಆರಂಭಿಸಿರುವ 'ಕುಮಾರಪರ್ವ 2018' ಯಾತ್ರೆಯ ಸಮಾವೇಶ ಒಟ್ಟಿಗೆ ನಡೆಯುತ್ತಿದೆ.

ಚಿತ್ರಗಳು : ಶಿವಮೊಗ್ಗದಲ್ಲಿ ಕುಮಾರಪರ್ವ ಯಾತ್ರೆ, ಜನಸಾಗರ

Updates : JDS mega rally in Belagavi

ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕ ವಿಕಾಸ ವಾಹಿನಿ ಬಸ್ ಮೂಲಕ ಧಾರವಾಡದಿಂದ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಧಾರವಾಡದ ನರೇಂದ್ರ ಬೈಪಾಸ್‌ನಿಂದ ಆರಂಭಗೊಂಡ ಯಾತ್ರೆ ಬೆಳಗಾವಿಗೆ ತಲುಪಿದೆ.

ಮ್ಯಾಜಿಕ್‌ ನಂಬರ್‌ಗಾಗಿ ಮೈಸೂರಿನಲ್ಲಿ ಕುಮಾರಣ್ಣನ ರಣಕಹಳೆ!

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಸಮಾವೇಶದಲ್ಲಿ ಜೆಡಿಎಸ್ ಸೇರಲಿದ್ದಾರೆ.

JDS

ಯಾತ್ರೆ ಆರಂಭಿಸುವುದಕ್ಕೂ ಮುನ್ನ ಧಾರವಾಡದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, 'ಬೆಳಗಾವಿಯಲ್ಲಿ ಅಧಿವೇಶನ ಗದ್ದಲವಿಲ್ಲದಂತೆ ನಡೆಯಲು ಎಲ್ಲಾ ಪಕ್ಷದ ಶಾಸಕರು ಸಹಕಾರ ನೀಡಬೇಕು' ಎಂದರು.

ಸಿದ್ದರಾಮಯ್ಯ ಸೋಲಿಸಲು ರಾಜ್ಯದ ಜನರು ಸಾಕು : ಎಚ್ಡಿಕೆ

'ಸಚಿವ ಕೆ.ಜೆ.ಜಾರ್ಜ್ ವಿಚಾರಕ್ಕೆ ಕಲಾಪ ಬಲಿಯಾಗಬಾರದು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Janata Dal (Secular) mega rally in Belagavi on November 14, 2017. Devar Hipparagi MLA (Congress) A.S. Patil Nadahalli will join JDS in the presence of party state president H.D.Kumaraswamy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ