ಸಿದ್ದರಾಮಯ್ಯ ವೋಟಿನಾಸೆಗೆ ಬೂಟು ನೆಕ್ತಾರೆ ಎಂದು ನಾಲಿಗೆ ಹರಿಬಿಟ್ಟ ಹೆಗಡೆ

Posted By:
Subscribe to Oneindia Kannada
   ಸಿದ್ದರಾಮಯ್ಯನವರ ಬಗ್ಗೆ ಕೀಳಾಗಿ ಮಾತನಾಡಿದ ಅನಂತಕುಮಾರ ಹೆಗಡೆ | Oneindia Kannada

   ಬೆಳಗಾವಿ, ನವೆಂಬರ್ 18 : ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರು ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

   ಈ ಸರ್ಕಾರ ಮುಂದುವರೆದರೆ ಕಸಬ್ ಜಯಂತಿಯನ್ನೂ ಆಚರಿಸುತ್ತೆ: ಹೆಗಡೆ

   ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ವೋಟಿನ ಆಸೆಗೆ ಏನಬೇಕಾದ್ರು ಮಾಡುತ್ತಾರೆ. ವೋಟಿಗಾಗಿ ಯಾರು ಬೇಕೋ ಅವರ ಬೂಟ್‌ ಸಹ ನೆಕ್ಕುವ ಸ್ಥಿತಿಗೆ ತಲುಪಿದ್ದಾರೆ" ಎಂದು ತೀವ್ರ ವಾಗ್ದಾಳಿ ನಡೆಸಿದರು.

   Union Minister Ananth Kumar Hegde uses unpaliamentary language against CM Siddaramaiah

   ಭಯೋತ್ಪಾದಕರಿಗೆ ಕರ್ನಾಟಕ ಸೇಫ್‌ ಝೋನ್‌ ಆಗಿದೆ. ನಾಲ್ಕೂವರೆ ಲಕ್ಷ ಬಾಂಗ್ಲಾದೇಶ ವಲಸಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ಹಿರಿಯ ಪೊಲೀಸರೇ ಒಪ್ಪುಕೊಳ್ಳುತ್ತಾರೆ.

   ಮೊನ್ನೆ ಟಿಪ್ಪು ಜಯಂತಿ ಆಚರಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಕಿತ್ತೂರು ಉತ್ಸವಕ್ಕೆ ಬರುವುದಕ್ಕೆ ಆಗುವುದಿಲ್ಲ. ಏಕೀಕರಣಕ್ಕೆ ಶ್ರಮಿಸಿದವರು ನೆನಪಾಗಲ್ಲ.ಆಲೂರು ವೆಂಕಟರಾಯರು, ರನ್ನ, ಜನ್ನ, ಕುವೆಂಪು ನೆನಪಾಗಲ್ಲ. ಇವರಿಗೆ ನೆನಪಾಗುವುದು ಟಿಪ್ಪು ಮಾತ್ರ ಎಂದು ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದರು.

   ರನ್ನ, ಜನ್ನ, ಬೇಂದ್ರೆ ಹಾಗೂ ಕುವೆಂಪು ಅವರಿಗೆ ನೆನಪಾಗೊಲ್ಲ. ಮತ್ತೆ ಸಿದ್ದರಾಮಯ್ಯ ಸರ್ಕಾರ ಬಂದರೆ ಕಸಬ್, ಒಸಾಮಾ ಬಿನ್ ಲಾಡನ್ ಹಾಗೂ ಟಿಪ್ಪು ಅಪ್ಪ ಹೈದರಾಲಿ ಜಯಂತಿ ಮಾಡಸ್ತಾನೆ ಎಂದು ಏಕವಚನದಲ್ಲಿಯೇ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Union Minister Ananth Kumar Hegde uses unpaliamentary language against CM siddaramaiah. CM is ready to lick anybody's boots for votes said Hegde in BJP parivartan yatra in Kittur taluk Belagavi district on November 17.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ